ತಮಿಳು ಸೂಪರ್ ಸ್ಟಾರ್ ಅಜಿತ್ ಕುಮಾರ್ ಇತ್ತೀಚೆಗಷ್ಟೇ ದೊಡ್ಡ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದರು. ಇದೀಗ ಮತ್ತೆ ಸ್ಪೇನ್‌ನಲ್ಲಿ ನಡೆದ ರೇಸಿಂಗ್ ಸ್ಪರ್ಧೆಯಲ್ಲಿ ಅವರ ಕಾರು ಅಪಘಾತಕ್ಕೀಡಾಗಿದೆ. ಸದ್ಯ ನಟ ಸುರಕ್ಷಿತವಾಗಿದ್ದಾರೆ ಎಂದು ಅವರ ರೇಸಿಂಗ್ ತಂಡ ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದೆ. ಜೊತೆಗೆ ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ರೇಸಿಂಗ್ ವೇಳೆ ನಿಯಂತ್ರಣ ತಪ್ಪಿದ ಮುಂದಿದ್ದ ಕಾರನ್ನು ತಪ್ಪಿಸಲು ಯತ್ನಿಸಿದಾಗ ಈ ಅವಘಡ ಸಂಭವಿಸಿದೆ. ಈ ವೇಳೆ ಅಜಿತ್ ಕಾರು ಟ್ರ್ಯಾಕ್ ಮೇಲೆ ಪಲ್ಟಿಯಾಗಿದೆ. ಅಪಘಾತ ನಡೆದ ತಕ್ಷಣವೇ ಕಾರಿನಿಂದ ಸುರಕ್ಷಿತವಾಗಿ ಅಜಿತ್ ಹೊರಬಂದಿದ್ದಾರೆ. ಅಲ್ಲಿದ್ದ ಸಿಬ್ಬಂದಿ ಅಜಿತ್ಗೆ ಸಹಾಯ ಮಾಡಿದ್ದಾರೆ.
ಈ ಅಪಘಾತದಲ್ಲಿ ಅಜಿತ್ ಅವರದ್ದೇನೂ ತಪ್ಪಿಲ್ಲವೆಂಬ ಅಂಶ ಅಪಘಾತದ ಸಮಯದ ವಿಡಿಯೋದಿಂದ ತಿಳಿದು ಬಂದಿದೆ. ಘಟನೆ ನಡೆದ ಸ್ವಲ್ಪ ಸಮಯದ ಬಳಿಕ ಹೊರಗೆ ಬಂದ ನಟ ಅಲ್ಲಿದ್ದ ತಮ್ಮ ಅಭಿಮಾನಿಗಳೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ.
ಅಭಿಮಾನಿಗಳ ಮನವಿ:ಮತ್ತೆ ಮತ್ತೆ ಅಜಿತ್ ಕಾರು ಅಪಘಾತದಿಂದ ಆತಂಕಕ್ಕೆ ಒಳಗಾಗಿರುವ ಅವರ ಅಭಿಮಾನಿಗಳು ಜಾಗೃತೆ ವಹಿಸುವಂತೆ ಮನವಿ ಮಾಡುತ್ತಿದ್ದಾರೆ.
ಇದೇ ಮೊದಲಲ್ಲ:ಎರಡು ತಿಂಗಳಲ್ಲಿ ಅಜಿತ್ಗೆ ಇದು ಎರಡನೇ ಅಪಘಾತ. ಜನವರಿಯಲ್ಲಿ ದುಬೈನಲ್ಲಿ ನಡೆದ ಗ್ರ್ಯಾಂಡ್ ಪ್ರಿಕ್ಸ್ ರೇಸ್‌ನ ಅಭ್ಯಾಸದ ವೇಳೆ ಅವರ ಕಾರು ಅಪಘಾತಕ್ಕೀಡಾಗಿತ್ತು. ಆ ಘಟನೆಯಲ್ಲಿ ಕಾರಿನ ಮುಂಭಾಗ ಜಖಂ ಆಗಿದ್ದರೂ ಅಜಿತ್ ಸುರಕ್ಷಿತವಾಗಿ ಹೊರಬಂದಿದ್ದರು. ಅಲ್ಲದೇ ನಡೆದ ರೇಸಿಂಗ್ ಸ್ಪರ್ಧೆಯಲ್ಲಿ ಅಜಿತ್ ತಂಡ ಜಯಗಳಿಸಿತ್ತು.
ಸಿನಿಮಾ ಅಪಡೇಟ್:ಅಜಿತ್ ಸದ್ಯ, "ಗುಡ್ ಬ್ಯಾಡ್ ಅಗ್ಲಿ" (Good Bad Ugly) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಏಪ್ರಿಲ್ 10ರಂದು ತೆರೆಗೆ ಬರಲಿದೆ. 'ಮಾರ್ಕ್ ಆಂಟೋನಿ' ಚಿತ್ರದ ಮೂಲಕ ಉತ್ತಮ ಹಿಟ್ ಪಡೆದಿದ್ದ ಅಧಿಕ್ ರವಿಚಂದ್ರನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಅಭಿನಂದನ್ ರಾಮಾನುಜಂ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.
ಇದನ್ನೂ ಓದಿ:ಚಿತ್ರೀಕರಣದ ವೇಳೆ ಅಪಘಾತಕ್ಕೊಳಗಾಗಿದ್ದ ನಟ ಅಜಿತ್ ಕಾರು: ವಿಡಿಯೋ ವೈರಲ್ - Ajith Car Accident
ಇದನ್ನೂ ಓದಿ:ಸ್ಪೋರ್ಟ್ಸ್ ಕಾರ್ ಖರೀದಿಸಿದ ನಟ ಅಜೀತ್; 4.39 ಕೋಟಿ ಬೆಲೆಯ ಈ ಪೋರ್ಷೆ ಕಾರಿನ ವಿಷೇತೆಗಳೇನು? - Actor Ajith Porsche Sports Car