ಹೈದರಾಬಾದ್:ಭಾನುವಾರ (ಫೆ.25ರಂದು) ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ 1994ರಲ್ಲಿ ತೆರೆ ಕಂಡಿದ್ದ ಚಿತ್ರ ಕಭಿ ಹಾ ಕಭಿ ನಾ 30ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಚಿತ್ರವನ್ನು ನಿರ್ಮಿಸಿದ್ದಕ್ಕಾಗಿ ನಿರ್ದೇಶಕ ಕುಂದನ್ ಶಾ ಸೇರಿದಂತೆ ಇಡೀ ತಾರಾ ಬಳಗ ಮತ್ತು ಸಿಬ್ಬಂದಿಗೆ ಶಾರುಖ್ ಖಾನ್ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಧನ್ಯವಾದ ತಿಳಿಸಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಕೆಲಸ ಮಾಡಿದ 'ಸಿಹಿ, ಸಂತೋಷದ ಚಿತ್ರ' ಎಂದು ಅವರು ಬಣ್ಣಿಸಿದ್ದಾರೆ.
ಶಾರುಖ್ ಖಾನ್ ಅವರ ನಿರ್ಮಾಣ ಕಂಪನಿ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬಿಡುಗಡೆ ಮಾಡಿದ ಪುಟ್ಟ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಮರು ಪೋಸ್ಟ್ ಮಾಡಿದ್ದಾರೆ. "30 ವರ್ಷಗಳು ಕಳೆದಿವೆ. ಆದರೂ 'ಕಭಿ ಹಾನ್ ಕಭಿ ನಾ' ಎವರ್ಗ್ರೀನ್ ಚಿತ್ರ, ಎಲ್ಲರ ಅಚ್ಚುಮೆಚ್ಚಿನ ಸಿನಿಮಾ ಆಗಿದ್ದು, ಹೆಚ್ಚು ಜನರು ಇಷ್ಟಪಟ್ಟಿದ್ದಾರೆ ಮತ್ತು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ನಾವು ಯಾವುದೇ ಅವಧಿಯಲ್ಲೂ ಈ ಚಲನಚಿತ್ರವನ್ನು ಮತ್ತೆ ಮತ್ತೆ ವೀಕ್ಷಿಸಲು ನನಗೆ ಯಾವಾಗಲೂ ಹೆಮ್ಮೆ ಅನಿಸುತ್ತದೆ" ಎಂದು ಅವರು ತಿಳಿಸಿದ್ದಾರೆ.
"ಇದು ನಾನು ಮಾಡಿದ ಅತ್ಯಂತ ಸಿಹಿಯಾದ ಮತ್ತು ಸಂತೋಷದ ಚಿತ್ರ ಎಂದು ನನಗೆ ನಿಜವಾಗಿಯೂ ಅನಿಸುತ್ತದೆ. ನಾನು ಅದನ್ನು ನೋಡುತ್ತೇನೆ ಮತ್ತು ಚಿತ್ರದಲ್ಲಿ ಪ್ರತಿಯೊಬ್ಬರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ, ವಿಶೇಷವಾಗಿ ನನ್ನ ಸ್ನೇಹಿತ ಮತ್ತು ಶಿಕ್ಷಕ ಕುಂದನ್ ಶಾ. ಇಡೀ ಚಿತ್ರತಂಡಕ್ಕೆ ಮತ್ತು ಸಿಬ್ಬಂದಿಗೆ ಧನ್ಯವಾದಗಳು ಮತ್ತು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ" ಎಂದು ಶಾರುಖ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.