ದಕ್ಷಿಣ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಸೂರ್ಯ ಮುಖ್ಯಭೂಮಿಕೆಯ ಫ್ಯಾಂಟಸಿ ಡ್ರಾಮಾ 'ಕಂಗುವ' ನವೆಂಬರ್ 14ರಂದು ಅದ್ಧೂರಿಯಾಗಿ ಬಿಡುಗಡೆ ಆಯಿತು. ಅತ್ಯುತ್ತಮ ಅಂಕಿ ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದೆ. ವರುಣ್ ತೇಜ್ ಅವರ ಮಟ್ಕಾ ಜೊತೆಗೆ ಬಿಡುಗಡೆಯಾಗಿರುವ ಕಂಗುವ ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶ ಕಂಡಿದೆ.
ಮೇಕಿಂಗ್ ಮತ್ತು ಸ್ಟಾರ್ ಕಾಸ್ಟ್ ಪವರ್ನಿಂದಾಗಿ ವಿಶೇಷವಾಗಿ ಗಮನ ಸೆಳೆದಿದೆ. ಅದಾಗ್ಯೂ, ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಸುತ್ತಲಿನ ಮಾತುಗಳು, ಆರಂಭಿಕವಾಗಿ ಸಿನಿಮಾ ಭರವಸೆ ಮೂಡಿಸಿದ್ದರೂ ಕೂಡಾ ಆ ವೇಗವನ್ನು ಉಳಿಸಿಕೊಳ್ಳುವುದು ಒಂದು ಸವಾಲಾಗಿದೆ ಎಂದು ಸೂಚಿಸಿದೆ.
'ಕಂಗುವ' ಬಾಕ್ಸ್ ಆಫೀಸ್ ಕಲೆಕ್ಷನ್:ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಕಂಗುವ ಬಾಕ್ಸ್ ಆಫೀಸ್ನಲ್ಲಿ ಅತ್ಯುತ್ತಮ ಆರಂಭವನ್ನು ಹೊಂದಿತ್ತು. ತನ್ನ ಮೊದಲ ದಿನ ಬರೋಬ್ಬರಿ 24 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಹೆಚ್ಚಿನವರ ಗಮನ ಸೆಳೆದಿತ್ತು. ಅದಾಗ್ಯೂ, ಸಿನಿಮಾ ತನ್ನ ಎರಡನೇ ದಿನದ ಗಳಿಕೆಯಲ್ಲಿ ಕುಸಿತ ಕಂಡಿದೆ. ತೋರಿಸಿದೆ.
ಆರಂಭಿಕ ಅಂದಾಜಿನ ಪ್ರಕಾರ, ಚಿತ್ರ ಬಿಡುಗಡೆಯಾದ 2ನೇ ದಿನದಂದು ಭಾರತದಲ್ಲಿ ಎಲ್ಲಾ ಭಾಷೆಗಳಿಂದ ಸುಮಾರು 9 ಕೋಟಿ ರೂ. (ನೆಟ್ ಕಲೆಕ್ಷನ್) ಗಳಿಸಿದೆ. ಈ ಮೂಲಕ ಎರಡು ಸಿನಗಳಲ್ಲಿ 33 ಕೋಟಿ ರೂ. ಗಳಿಸಿದೆ. ಪ್ರಸ್ತುತ ಟ್ರೆಂಡ್ ಗಮನಿಸಿದ್ರೆ, ಚಿತ್ರ ನಿರ್ಣಾಯಕ ವಾರಾಂತ್ಯವನ್ನು ಎದುರಿಸುತ್ತಿದೆ. ಸ್ಪರ್ಧೆಯ ಕಾವು ಏರಿದೆ. ವಾರಾಂತ್ಯದ ನಂತರ, ಹೊಸ ಸಿನಿಮಾಗಳು ಬಿಡುಗಡೆ ಆಗುವುದರಿಂದ ಮತ್ತು ಪ್ರಸ್ತುತ ನಡೆಯುತ್ತಿರುವ ಪೈಪೋಟಿಯಿಂದಾಗಿ ಕಂಗುವ ಬಾಕ್ಸ್ ಆಫೀಸ್ನಲ್ಲಿ ಸವಾಲುಗಳನ್ನು ಎದುರಿಸುವ ಕಳವಳಗಳಿದ್ದು, ತನ್ನ ಉಳಿಯುವಿಕೆಗೆ ಈ ವಾರಾಂತ್ಯದಲ್ಲಿ ಉತ್ತಮ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.