ಹೈದರಾಬಾದ್: 'ಆಡುಜೀವಿತಂ' ಎಂದೇ ಪರಿಚಿತವಾಗಿರುವ 'ದಿ ಗೋಟ್ ಲೈಫ್' ಚಿತ್ರದ ಅಡಿಯೋ ಬಿಡುಗಡೆ ಸಮಾರಂಭದ ವೇಳೆ ಚಿತ್ರ ತಂಡದ ಕುರಿತು ಸೂಪರ್ಸ್ಟಾರ್ ಮೋಹನ್ಲಾಲ್ ಮೆಚ್ಚುಗೆ ಸೂಚಿಸಿದ್ದು, ಚಿತ್ರ ಯಶಸ್ಸು ಕಾಣಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 'ಪ್ರತಿಯೊಂದು ಉಸಿರಾಟವೂ ಹೋರಾಟವೇ' ಎಂಬ ಚಿತ್ರದ ಟ್ಯಾಗ್ಲೈನ್ ಚಿತ್ರದ ಜೀವಾಳವಾಗಿದೆ ಎಂದು ಪ್ರಶಂಸಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕತೆ ಸಮಯದಲ್ಲಿ ಚಿತ್ರದ ನಿರ್ಮಾಣ ಸಂಸ್ಥೆ ಅನುಭವಿಸಿದ ಸವಾಲುಗಳನ್ನೂ ಮೀರಿ ಚಿತ್ರದ ಪಾತ್ರಧಾರಿಗಳು ಮತ್ತು ಸಿಬ್ಬಂದಿಗಳ ಬದ್ಧತೆ ಪ್ರದರ್ಶಿಸಿದ್ದಾರೆ ಎಂದು ಹೊಗಳಿದ, ಅವರು ಈ ಚಿತ್ರದ ಕುರಿತು ಹೊಸ ಭರವಸೆ ಮತ್ತು ಪ್ರಾರ್ಥನೆ ಸೇರಿದ್ದು, ಶುಭವಾಗಲಿ ಎಂದು ಹಾರೈಸಿದರು.
ಇದೇ ವೇಳೆ ಚಿತ್ರ ನಿರ್ದೇಶಕ ಬ್ಲೆಸ್ಸೆ ಅವರನ್ನು ಹೊಗಳಿದ ಮೋಹನ್ ಲಾಲ್, ಅವರು ಚಿತ್ರ ನಿರ್ಮಾಣದಲ್ಲಿ ಅಸಾಧ್ಯವಾದುದನ್ನು ಮಾಡಿ ತೋರಿಸುವ ಸಾಮರ್ಥ್ಯವಿರುವ ವ್ಯಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರ ನಿರ್ದೇಶನ ಮತ್ತು ತಮ್ಮ ಕಲ್ಪನೆಗಳನ್ನು ಸಿನಿಮಾದ ಮೂಲಕ ವಾಸ್ತವಕ್ಕೆ ತಂದ ಕುರಿತು ಮಾತನಾಡಿದ ನಿರ್ದೇಶಕ ಬ್ಲೆಸ್ಸೆ, ಸತ್ಯ ಕಲ್ಪನೆಗಳಿಗಿಂತ ಬೇರೆಯಾಗಿರುವುದಿಲ್ಲ. ಈ ಚಿತ್ರದ ಟ್ಯಾಗ್ಲೈನ್ ಅನ್ನು ತಾವು ಸಿನಿಮಾವಾಗಿ ಅಳವಡಿಸಿಕೊಂಡಿರುವ ಕಾದಂಬರಿಯಿಂದಲೇ ತೆಗೆದುಕೊಂಡಿರುವುದಾಗಿ ಎಂದು ತಿಳಿಸಿದರು.