ಕರ್ನಾಟಕ

karnataka

ETV Bharat / entertainment

BMW ಖರೀದಿಸಿದ ಕಾಟೇರ ನಿರ್ದೇಶಕ: ತರುಣ್ ಸುಧೀರ್ ಕಾರ್ ಡ್ರೈವ್ ಮಾಡಿದ ದರ್ಶನ್ - Tarun Sudhir BMW car - TARUN SUDHIR BMW CAR

ನಿರ್ದೇಶಕ ತರುಣ್ ಸುಧೀರ್ ಖರೀದಿಸಿರುವ ಸರಿ ಸುಮಾರು ಅರ್ಧ ಕೋಟಿ ರೂ. ಮೌಲ್ಯದ ಹೊಸ ಐಶಾರಾಮಿ ಕಾರನ್ನು ಜನಪ್ರಿಯ ನಟ ದರ್ಶನ್ ಓಡಿಸಿದ್ದಾರೆ.

Darshan drives Tarun Sudhir's BMW car
ತರುಣ್ ಸುಧೀರ್ ಅವರ ಕಾರನ್ನು ಓಡಿಸಿದ ದರ್ಶನ್

By ETV Bharat Karnataka Team

Published : Apr 4, 2024, 9:26 AM IST

2023ರ ಅಂತ್ಯದಲ್ಲಿ ತೆರೆಕಂಡು ಸೂಪರ್ ಹಿಟ್ ಆದ ಚಿತ್ರ 'ಕಾಟೇರ'. ಕನ್ನಡ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಸಿನಿಮಾ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹಾಗೂ ತರುಣ್ ಸುಧೀರ್ ನಿರ್ದೇಶನದ ಕಾಟೇರ ಪ್ರೇಕ್ಷಕರಿಂದ ಬಹುತೇಕ ಮೆಚ್ಚುಗೆ ಸ್ವೀಕರಿಸಿದೆ. ಚಿತ್ರ ತಂಡದ ಸದಸ್ಯರೆಲ್ಲರಿಗೂ ನೇಮು ಫೇಮು ತಂದುಕೊಟ್ಟಿತ್ತು. 'ಕಾಟೇರ' ಸಕ್ಸಸ್ ಬೆನ್ನಲ್ಲೇ ನಿರ್ದೇಶಕ ತರುಣ್ ಸುಧೀರ್‌ ಮನೆಗೆ ಹೊಸ ಅತಿಥಿಯ ಆಗಮನ ಆಗಿದೆ.

ಹೌದು, ಕಾಟೇರ ಸಿನಿಮಾದ ಯಶಸ್ಸಿನ ಬಳಿಕ ತರುಣ್ ಸುಧೀರ್ ಮತ್ತೆ ದರ್ಶನ್ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ‌ ಜೋಶ್​ನಲ್ಲೇ ತರುಣ್ ಸುಧೀರ್ ಅರ್ಧ ಕೋಟಿ ರೂ. ಮೌಲ್ಯದ ಐಶಾರಾಮಿ ಕಾರು ಖರೀದಿಸಿದ್ದಾರೆ. ತಾಯಿಯೊಂದಿಗೆ ಹೋಗಿ BMW X1 ಟಾಪ್ ಹ್ಯಾಂಡ್ ಕಾರನ್ನು ಖರೀದಿಸಿದ್ದಾರೆ. ಈ ಐಶಾರಾಮಿ ಕಾರಿನಲ್ಲಿ ತಾಯಿ ಜೊತೆ ಒಂದು ರೌಂಡ್ ಕೂಡ ಹಾಕಿದ್ದಾರೆ.

ಅಷ್ಟೇ ಅಲ್ಲ, ಸ್ನೇಹಿತರೂ ಆಗಿರುವ ನಟ ದರ್ಶನ್ ಅವರಿಗೆ ಈ ಹೊಸ‌ ಕಾರು ತೋರಿಸುವ ಜೊತೆ, ಅವರ ಡ್ರೈವಿಂಗ್​ನಲ್ಲಿ ಒಂದು ರೌಂಡ್ ಹಾಕುವ ಮೂಲಕ ತರುಣ್ ಸುಧೀರ್ ಖುಷಿ ಪಟ್ಟಿದ್ದಾರೆ. ಖ್ಯಾತ ಖಳನಟರಾದ ತೂಗುದೀಪ್​ ಶ್ರೀನಿವಾಸ್ ಹಾಗೂ ಸುಧೀರ್ ಸ್ನೇಹಿತರಾಗಿದ್ದರು. ಅವರ ಮಕ್ಕಳು ದರ್ಶನ್ ಹಾಗೂ ತರುಣ್ ಸ್ನೇಹವೂ ಚಿತ್ರರಂಗಕ್ಕೆ ಬರುವ ಮುನ್ನವೇ ಶುರುವಾಗಿತ್ತು. ಬಳಿಕ ಒಟ್ಟಿಗೆ ಕೆಲಸ ಮಾಡಿ ಇನ್ನಷ್ಟು ಹತ್ತಿರವಾಗಿದ್ದಾರೆ.

ಇದನ್ನೂ ಓದಿ:₹8 ಕೋಟಿಯ ಗ್ರ್ಯಾಂಡ್ ಬೆಂಟ್ಲಿ ಕಾಂಟಿನೆಂಟಲ್ ಕಾರ್‌ ಖರೀದಿಸಿದ ರಣ್​ಬೀರ್​ ಕಪೂರ್; ಮುಂಬೈಗೆ ರೌಂಡ್ಸ್ - Ranbir Kapoor Luxury Car

ನಟ ದರ್ಶನ್ ಎಡಗೈ ನೋವಿನಿಂದ ಬಳಲುತ್ತಿದ್ದಾರೆ. ಆ ನೋವಿನ ನಡುವೆಯೂ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ತರುಣ್ ತಮ್ಮ ಹೊಸ ಕಾರ್‌ ಅನ್ನು ಸೆಟ್ ಬಳಿಗೆ ಕೊಂಡೊಯ್ದಿದ್ದಾರೆ. ದರ್ಶನ್ ಕೂಡ ಹೊರ ಬಂದು ಕೈ ನೋವಿನ ನಡುವೆಯೂ ಕಾರ್ ಏರಿ ಒಂದು ರೌಂಡ್ ಹೊಡೆದಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

BMW ಖರೀದಿಸಿದ ಕಾಟೇರ ನಿರ್ದೇಶಕ

ಇದನ್ನೂ ಓದಿ:ರಶ್ಮಿಕಾ ಜನ್ಮದಿನದಂದು ವಿಜಯ್ ದೇವರಕೊಂಡ ಸಿನಿಮಾ, 'ದಿ ಗರ್ಲ್‌ಫ್ರೆಂಡ್' ಟೀಸರ್ ರಿಲೀಸ್ - Rashmika Mandanna

ತರುಣ್ ನಿರ್ದೇಶನದ ಚೌಕ ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಬಳಿಕ ಈ ಜೋಡಿ ರಾಬರ್ಟ್ ಹಾಗೂ ಕಾಟೇರ ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಗೆದ್ದಿದೆ. ಸಿಂಧೂರ ಲಕ್ಷ್ಮಣ ಚಿತ್ರಕ್ಕಾಗಿ 4ನೇ ಬಾರಿ ಜೊತೆಯಾಗುತ್ತಿದ್ದಾರೆ.

ABOUT THE AUTHOR

...view details