ಕರ್ನಾಟಕ

karnataka

ETV Bharat / entertainment

ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್​ ಮಾಡಿದ 'ಮ್ಯಾಕ್ಸ್'​​: ಯಶಸ್ಸಿನ ಅಲೆಯಲ್ಲಿ ಸುದೀಪ್​ ತಂಡ; ಹೀಗಿದೆ ಗಳಿಕೆ ಮಾಹಿತಿ! - MAX COLLECTION

ವಾರಾಂತ್ಯ ಭರ್ಜರಿ ಕಲೆಕ್ಷನ್​ ಮಾಡೋ ಮೂಲಕ ಮ್ಯಾಕ್ಸ್​​ ದೊಡ್ಡ​ ಸದ್ದು ಮಾಡಿದೆ. ಸುದೀಪ್​ ಸಿನಿಮಾದ ನಿತ್ಯದ ಕಲೆಕ್ಷನ್​​ ಮಾಹಿತಿ ಇಲ್ಲಿದೆ.

Max Success
ಯಶ ಕಂಡ ಮ್ಯಾಕ್ಸ್ (Photo: ETV Bharat)

By ETV Bharat Entertainment Team

Published : Dec 30, 2024, 12:36 PM IST

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಮುಖ್ಯಭೂಮಿಕೆಯ ಮ್ಯಾಕ್ಸ್​ ಸಿನಿಮಾ, ಪ್ರೇಕ್ಷಕರಿಂದ ಬಹುತೇಕ ಮೆಚ್ಚುಗೆ ಗಳಿಸಿದೆ. ಗಲ್ಲಾಪೆಟ್ಟಿಗೆಯಲ್ಲೂ ವ್ಯವಹಾರ ಉತ್ತಮವಾಗಿ ಸಾಗಿದೆ. ಕಳೆದ ದಿನವಷ್ಟೇ ಚಿತ್ರತಂಡ ಸಕ್ಸಸ್ ಸೆಲೆಬ್ರೇಶನ್​ ಆಯೋಜಿಸಿತ್ತು. ಜೊತೆಗೆ, ಸುದೀಪ್​​ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ವಾರಾಂತ್ಯ ಭರ್ಜರಿ ಕಲೆಕ್ಷನ್​ ಮಾಡೋ ಮೂಲಕ ಮ್ಯಾಕ್ಸ್​​ ಮ್ಯಾಕ್ಸಿಮಮ್​ ಸದ್ದು ಮಾಡುವಲ್ಲಿ ಯಶಸ್ವಿಯಾಗಿದೆ.

ಮ್ಯಾಕ್ಸ್​​ ಬಾಕ್ಸ್​​ ಆಫೀಸ್​​ ಕಲೆಕ್ಷನ್​​​: ವಿಜಯ್​ ಕಾರ್ತಿಕೇಯ ನಿರ್ದೇಶನದ ಬಹುನಿರಿಕ್ಷಿತ ಚಿತ್ರ ಕ್ರಿಸ್ಮಸ್ ಸಂದರ್ಭ ಬಹಳ ಅದ್ಧೂರಿಯಾಗಿ ತೆರೆ ಕಂಡಿತು. ಅಪಾರ ಸಂಖ್ಯೆಯ ಅಭಿಮಾನಿಗಳು ಸಿನಿಮಾಗೆ ಗ್ರ್ಯಾಂಡ್​ ವೆಲ್ಕಮ್​​ ಕೊಟ್ಟಿದ್ರು. ಕ್ರಿಸ್ಮಸ್​​ ರಜಾದಿನವನ್ನು ಸದುಪಯೋಗಪಡಿಸಿಕೊಂಡ ಮ್ಯಾಕ್ಸ್​​ ತನ್ನ ಮೊದಲ ದಿನ ಅದ್ಭುತ ಕಲೆಕ್ಷನ್​ ಮಾಡಿತ್ತು. ಡಿಸೆಂಬರ್​​ 25ರಂದು ಬರೋಬ್ಬರಿ 8.7 ಕೋಟಿ ರೂಪಾಯಿ ಕಲೆಕ್ಷನ್​ ಮಾಡೋ ಮೂಲಕ ಬಾಕ್ಸ್​ ಆಫೀಸ್​​ ಪ್ರಯಾಣ ಪ್ರಾರಂಭಿಸಿತು.

ನಂತರ ವಾರದ ದಿನಗಳಾದ ಹಿನ್ನೆಲೆ ಕಲೆಕ್ಷನ್​ ಅಂಕಿ - ಅಂಶಗಳಲ್ಲಿ ಕೊಂಚ ಏರಿಳಿತ ಕಂಡು ಬಂದಿತು. ಎರಡನೇ ದಿನ ಸಿನಿಮಾ 3.85 ಕೋಟಿ ರೂ.ನ ವ್ಯವಹಾರ ನಡೆಸಿತ್ತು. ಶುಕ್ರವಾರ ಗಳಿಕೆಯಲ್ಲಿ ಮತ್ತೆ ಏರಿಕೆಯಾಯಿತು. ಹೌದು, ತನ್ನ ಮೂರನೇ ದಿನ ಚಿತ್ರ 4.7 ಕೋಟಿ ರೂಪಾಯಿಯ ವ್ಯವಹಾರ ನಡೆಸಿತ್ತು.

ಇದನ್ನೂ ಓದಿ:'ಮ್ಯಾಕ್ಸ್'​ ಸಕ್ಸಸ್​​: ಚಾಮುಂಡೇಶ್ವರಿ ದರ್ಶನ ಪಡೆದ ಕಿಚ್ಚ ಸುದೀಪ್​​

ಕೊಂಚ ಏರಿಳಿತವಿದ್ದರೂ ವಾರದ ದಿನಗಳಲ್ಲೇ ಉತ್ತಮ ವ್ಯವಹಾರ ನಡೆಸಿದ್ದ ಮ್ಯಾಕ್ಸ್​​ನ ವೀಕೆಂಡ್​ ಕಲೆಕ್ಷನ್​ ಮೇಲೆ ಬಹುತೇಕರ ಕಣ್ಣಿತ್ತು ಎಂದರೆ ತಪ್ಪಾಗಲ್ಲ. ಅದರಂತೆ ಶನಿವಾರ ಸಿನಿಮಾ 4.75 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಿತ್ತು. ಫೈನಲಿ, ಭಾನುವಾರದ ಗಳಿಕೆಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ ದಿನ ಅಂದ್ರೆ ತನ್ನ ಐದನೇ ದಿನ ಚಿತ್ರ 5.86 ಕೋಟಿ ರೂಪಾಯಿ (ಆರಂಭಿಕ ಅಂದಾಜು) ವ್ಯವಹಾರ ನಡೆಸಿದೆ. ಅಲ್ಲಿಗೆ ಸಿನಿಮಾ 5 ದಿನಗಳಲ್ಲಿ ಒಟ್ಟು 27.86 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಸಿನಿಮಾ ತನ್ನ ಮೊದಲ ಸೋಮವಾರ (ಇಂದು) 0.17 ಕೋಟಿ ರೂ. ಕಲೆಕ್ಷನ್​​ ಮಾಡೋ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಮಾಹಿತಿ ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ಕ್ ವರದಿಯನ್ನಾಧರಿಸಿದೆ.

ಚಾಮುಂಡಿ ತಾಯಿಯ ದರ್ಶನ ಪಡೆದ ಅಭಿನಯ ಚಕ್ರವರ್ತಿ:ಎರಡೂವರೆ ವರ್ಷಗಳ ಬಳಿಕ ಬಂದ ಕಿಚ್ಚ ಸುದೀಪ್ ಮುಖ್ಯಭೂಮಿಕೆಯ ಸಿನಿಮಾ ಭರ್ಜರಿ ಸದ್ದು ಮಾಡುತ್ತಿದೆ. ತಮ್ಮ ಚಿತ್ರ ಯಶ ಕಂಡಿರುವ ಹಿನ್ನೆಲೆ ಭಾನುವಾರದಂದು ಕಿಚ್ಚ ಸುದೀಪ್​ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದುಕೊಂಡಿದ್ದರು. ಮೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬಂದು ಸೇರಿದ್ದರು.

ಇದನ್ನೂ ಓದಿ:ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ನಂಬರ್ 1 ಟ್ರೆಂಡಿಂಗ್‌ನಲ್ಲಿದೆ 'ಬಘೀರ': ಕನ್ನಡ ಸಿನಿಮಾಗೆ ಹಿಂದಿ ಪ್ರೇಕ್ಷಕರೂ ಫಿದಾ

ABOUT THE AUTHOR

...view details