ಕನ್ನಡದ ಬಿಗ್ ಬಾಸ್ನಲ್ಲಿ ವೀಕೆಂಡ್ ಎಪಿಸೋಡ್ಗಳು ಬಹಳಾನೇ ಫೇಮಸ್. ಅದರಲ್ಲೂ ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಗೆ ಸಪರೇಟ್ ಫ್ಯಾನ್ ಬೇಸ್ ಇದೆ. ಅಭಿನಯ ಚಕ್ರವರ್ತಿಯ ವಾಕ್ಚಾತುರ್ಯ ಅಂಥದ್ದು. ವಾರವಿಡೀ ಸ್ಪರ್ಧಿಗಳು ಮಾಡಿರುವ ಸರಿತಪ್ಪುಗಳ ಬಗ್ಗೆ ಚರ್ಚೆ ನಡೆಸಿ, ಅವರನ್ನು ತಿದ್ದಿ ತೀಡುವ ಕೆಲಸ ಮಾಡುತ್ತಾರೆ. ನಿರೀಕ್ಷಿಸಿದಂತೆ ಇಂದು ರಜತ್ ಕಿಶನ್ ಮತ್ತು ಧನರಾಜ್ ಆಚಾರ್ ಅವರಿಗೆ ಕಿಚ್ಚನ ಕ್ಲಾಸ್ ಸಿಕ್ಕಿದೆ. ಅದರಲ್ಲೂ ವೈಲ್ಡ್ ಕಾರ್ಡ್ ಸ್ಪರ್ಧಿಯ ಆರ್ಭಟಕ್ಕೆ ಸುದೀಪ್ ಫುಲ್ ಸ್ಟಾಪ್ ಇಟ್ಟಿದ್ದಾರೆ.
''ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು!'' ವಾರದ ಕಥೆ ಕಿಚ್ಚನ ಜೊತೆ, ಇಂದು ರಾತ್ರಿ 9ಕ್ಕೆ ಎಂಬ ಕ್ಯಾಪ್ಷನ್ನೊಂದಿಗೆ ಅನಾವರಣಗೊಂಡಿರುವ ಪ್ರೋಮೋ ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕಾತರ ಹೆಚ್ಚಿಸಿದೆ. ಬಿಗ್ ಬಾಸ್ ಮನೆಯಲ್ಲಿ ಮಾಡಿದ ತಪ್ಪಿಗೆ ಸ್ಪರ್ಧಿಗಳು ಶಿಕ್ಷೆ ಅನುಭವಿಸುವಂತಾಗಿದೆ.
ಪ್ರೋಮೋದಲ್ಲಿ, 'ಧನರಾಜ್, ರಜತ್ ಅವ್ರೇ ಏನು ಹುಲಿ ಸಿಂಹ ಆಗೋಕ್ ಹೋಗಿದ್ದೀರಾ? ಅಥವಾ ಮನುಷ್ಯರಾಗಿರೋಕ್ ಹೋಗಿದ್ದೀರೋ?' ಎಂದು ಸುದೀಪ್ ಪ್ರಶ್ನಿಸಿದ್ದಾರೆ. ನಂತರ, ನಿಮ್ಗೆ ಅವಶ್ಯಕತೆ ಇತ್ತಾ ಅವರ ಕೆನ್ನೆ ಮುಟ್ಟೋದು ಎಂದು ಧನರಾಜ್ ಬಳಿ ಪ್ರಶ್ನಿಸಿದ್ದಾರೆ. ನಂತರ, ನಾಲ್ಗೆ ಮೇಲೆ ನಿಗಾ ಇರ್ಲಿ ರಜತ್ ಅವ್ರೆ ಎಂದು ತಿಳಿಸಿದ್ದು, ಸರ್ ನಾನೇನು ಕೆಟ್ಟ ಮಾತು ಬಳಸಿಲ್ಲ ಎಂದು ರಜತ್ ತಿಳಿಸಿದ್ದಾರೆ. ನಿಮ್ಮ ಪ್ರಕಾರ ಕೆಟ್ಟ ಮಾತುಗಳೇನು ಎಂದು ಹೇಳ್ಬಿಡಿ, ನಾವು ಒಂದು ಬುಕ್ ಮಾಡಿ ಇಡ್ತೀವಿ ಎಂದು ಸುದೀಪ್ ತಿಳಿಸಿದ್ದಾರೆ. ನಿಮಗೆ ಟೈಮ್ ಕೊಡ್ತೀವಿ ಫೈಟ್ ಮಾಡೋಕೆ ಫಿಸಿಕಲಿ ಎಂದು ಕಿಚ್ಚ ಪ್ರಶ್ನಿಸಿದ್ದಾರೆ. ಇದಕ್ಕೆ ಒಂದು ಪನೀಷ್ಮೆಂಟ್ ಇದ್ದೇ ಇರುತ್ತೆ ಎಂದು ಒಂದು ಸಣ್ಣ ಜೈಲನ್ನು ಮನೆಯೊಳಗೆ ತರಿಸಿದ್ದಾರೆ. ರಜತ್ ಅವರನ್ನು ಒಳಗೆ ಹಾಕಿದ್ದು, ಅವರೆಲ್ಲೇ ಹೋಗಬೇಕೆಂದರೂ ಎಳೆದು ಕರೆದುಕೊಂಡು ಹೋಗಬೇಕೆಂದು ಧನರಾಜ್ರಲ್ಲಿ ಸೂಚಿಸಿದ್ದಾರೆ.