ಟಾಲಿವುಡ್ನ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಮುಂದಿನ ಸಿನಿಮಾವನ್ನು ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೇ ಸಕಲ ತಯಾರಿಗಳು ಆರಂಭವಾಗಿವೆ. ಸದ್ಯಕ್ಕೆ ‘SSMB 29’ ಎಂದು ಚಿತ್ರಕ್ಕೆ ಹೆಸರು ಇಡಲಾಗಿದ್ದು, ಚಿತ್ರ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಚಿತ್ರದಲ್ಲಿ ನಾಯಕ ನಟ ಮಹೇಶ್ ಬಾಬು ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಅವರು ಸಿದ್ಧತೆ ಕೂಡ ನಡೆಸಿದ್ದಾರೆ.
ಇತ್ತೀಚೆಗೆ ಮದುವೆಯೊಂದರಲ್ಲಿ ಮಹೇಶ್ ಬಾಬು ಪಾಲ್ಗೊಂಡಿದ್ದು, ಅಲ್ಲಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಉದ್ದನೆಯ ಕೂದಲು ಹೊಂದಿರುವುದನ್ನು ಕಾಣಬಹುದು. ಕ್ರಿಕೆಟರ್ ಎಂಎಸ್ ಧೋನಿ ರೀತಿಯಲ್ಲಿ ಉದ್ದನೆ ಕೂದಲು ಬಿಟ್ಟುಕೊಂಡಿದ್ದು, ಸದ್ಯ ಅವರ ಈ ಹೊಸ ಗೆಟಪ್ ಜಾಲತಾಣದಲ್ಲಿ ರಿವೀಲ್ ಆಗಿದೆ. ಈ ಗೆಟಪ್ ಅವರ ಮುಂದಿನ ಚಿತ್ರದ್ದಾಗಿರಬಹುದು ಎಂದು ಅಭಿಮಾಮಿಗಳು, ನೆಟಿಜನ್ಗಳು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಚಿತ್ರತಂಡ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಎಸ್‌ಎಸ್ ರಾಜಮೌಳಿ ನಿರ್ದೇಶನದ ಬತ್ತಳಿಕೆಯಿಂದ ಮೂಡಿ ಬರುತ್ತಿರುವ ಚಿತ್ರ ಎಂದ ಮೇಲೆ ಮೇಕಿಂಗ್ ಮತ್ತು ಅದ್ಧೂರಿತನಕ್ಕೆ ಯಾವುದೇ ಕೊರತೆ ಇರದು. ಚಿಕ್ಕ ಚಿಕ್ಕ ಪಾತ್ರಕ್ಕೂ ಹೆಚ್ಚು ಒತ್ತು ನೀಡುವ ರಾಜಮೌಳಿ, ನಾಯಕ ನಟ ಮಹೇಶ್ ಬಾಬು ಅವರನ್ನು ಮುಂಬರುವ ಚಿತ್ರದಲ್ಲಿ ಡಿಫ್ರೆಂಟ್ ಗೆಟಪ್ನಲ್ಲಿ ತೋರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಪಾತ್ರಕ್ಕೆ ತಕ್ಕಂತೆ ಮಹೇಶ್ ಬಾಬು ತಮ್ಮ ತೂಕವನ್ನು ಸಹ ಹೆಚ್ಚಿಸಿಕೊಂಡಿದ್ದಾರಂತೆ.