ಕರ್ನಾಟಕ

karnataka

ETV Bharat / entertainment

'ಬಘೀರ'ನ 'ಪರಿಚಯವಾದೆ' ಸಾಂಗ್​: ಶ್ರೀಮುರುಳಿ, ರುಕ್ಮಿಣಿ ವಸಂತ್​ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ; ಮನಸೆಳೆಯುವಂತಿದೆ ಸಾಹಿತ್ಯ - PARICHAYAVADE SONG

ಶ್ರೀಮುರುಳಿ ಮತ್ತು ರುಕ್ಮಿಣಿ ವಸಂತ್​ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಬಘೀರ'ನ 'ಪರಿಚಯವಾದೆ' ಎಂಬ ಹಾಡು ಅನಾವರಣಗೊಂಡಿದೆ.

Sriimurali and Rukmini Vasanth
ರುಕ್ಮಿಣಿ ವಸಂತ್ - ಶ್ರೀಮುರುಳಿ (Photo source: Film Poster, Hombale films Instagram)

By ETV Bharat Entertainment Team

Published : Oct 25, 2024, 2:03 PM IST

ಚಂದನವನದ ಜೊತೆ ಜೊತೆಗೆ ದಕ್ಷಿಣ ಚಿತ್ರರಂಗದಲ್ಲಿ ಹೆಸರು ಸಂಪಾದಿಸಿರುವ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್'ನ ಮುಂದಿನ ಬಹುನಿರೀಕ್ಷಿತ ಚಿತ್ರ 'ಬಘೀರ'. ಕುತೂಹಲಕಾರಿ ಶೀರ್ಷಿಕೆಯಿಂದಲೇ ಸಿನಿಪ್ರಿಯರ ಗಮನ ಸೆಳೆದಿರುವ ಈ ಚಿತ್ರದಲ್ಲಿ ಚಂದನವನದ ಹೆಸರಾಂತ ಕಲಾವಿದರಾದ ಶ್ರೀಮುರುಳಿ ಮತ್ತು ರುಕ್ಮಿಣಿ ವಸಂತ್​ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಜೊತೆಗೆ, ಖ್ಯಾತ ನಿರ್ದೇಶಕ ಪ್ರಶಾಂತ್​ ನೀಲ್​​​ ಕಥೆ ಒದಗಿಸಿದ್ದಾರೆ. ಹಾಗಾಗಿ, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಬಿಡುಗಡೆ ಹೊಸ್ತಿಲಲ್ಲಿರುವ ಸಿನಿಮಾ ತನ್ನ ಪ್ರಚಾರ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಅದರ ಭಾಗವಾಗಿ, ಇಂದು ಸುಮಧುರ ಗೀತೆಯೊಂದು ಅನಾವರಣಗೊಂಡಿದೆ.

'ಪರಿಚಯವಾದೆ' ಶೀರ್ಷಿಕೆಯ ಸುಂದರ ಹಾಡು ಬಿಡುಗಡೆ ಆಗಿದೆ. 'ಪರಿಚಯಮೇಲೆ' ಶೀರ್ಷಿಕೆಯಡಿ ತೆಲುಗಿನಲ್ಲೂ ಸಾಂಗ್​ ರಿಲೀಸ್​​ ಆಗಿದೆ. ಅದ್ಭುತ ಸಾಹಿತ್ಯವನ್ನೊಳಗೊಂಡಿರುವ ಈ ಹಾಡು ಕೇಳುಗರ ಮನಮುಟ್ಟುವಂತಿದೆ. ಇಂಪಾದ ಹಾಡಿನಲ್ಲಿ ಕನ್ನಡ ಚಿತ್ರರಂಗದ ಬಹುಬೇಡಿಕೆ ಕಲಾವಿದರಾದ ಶ್ರೀಮುರುಳಿ ಮತ್ತು ರುಕ್ಮಿಣಿ ವಸಂತ್​​ ಜೋಡಿಯ ಕೆಮಿಸ್ಟ್ರಿ ಸಖತ್ತಾಗೆ ವರ್ಕ್​​ ಔಟ್​ ಆಗಿದೆ. ಕಣ್ಣಲ್ಲೇ ಪರಸ್ಪರ ಸಂದೇಶ ರವಾನಿಸಿಕೊಳ್ಳುವ ಪ್ರೇಮಪಕ್ಷಿಗಳ ಪ್ರೇಮಪಯಣ ವೀಕ್ಷಿಸಲು ಸಿನಿಪ್ರಿಯರು ಉತ್ಸುಕರಾಗಿದ್ದಾರೆ.

ನಿಮ್ಮ ಹೃದಯ ತುಂಬಿ ಬರೋದು ಗ್ಯಾರಂಟಿ:ಹಾಡನ್ನೊಮ್ಮೆ ಕೇಳಿದರೆ ನಿಮ್ಮ ಹೃದಯ ತುಂಬಿ ಬರೋದು ಗ್ಯಾರಂಟಿ. ಇದೊಂದು ಸುಂದರ ಪ್ರೀತಿಯ ಪಯಣ ಎಂದೇ ಹೇಳಬಹುದು. ಪ್ರಮೋದ್​ ಮರವಂತೆ ಅವರ ಪದಪುಂಜಕ್ಕೆ ರಿತೇಶ್​​ ಜಿ ರಾವ್​​ ದನಿ ಒದಗಿಸಿದ್ದು, ಬಿ ಅಜನೀಶ್​ ಲೋಕನಾಥ್​​ ಸಂಗೀತ ಒದಗಿಸಿದ್ದಾರೆ. ಹೆಸರಾಂತರ ಕೈಚಳಕದಿಂದ ಹಾಡು ಬಹಳ ಇಂಪಾಗಿ ಮೂಡಿಬಂದಿದೆ. ಕೇಳಿದರೆ ಕೇಳುತ್ತಲೇ ಇರಬೇಕು ಅನಿಸುತ್ತಿದೆ ಎಂಬಂತಹ ಅಭಿಪ್ರಾಯಗಳನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಬಿಗ್​ ಬಾಸ್​ ಇತಿಹಾಸದಲ್ಲೇ ಇದೇ ಮೊದಲು: ಮನೆಯೊಳಗೆ ಜನಸಾಗರ, ಧಿಕ್ಕಾರದ ಕೂಗು...!

ಸೂರಿ ಸಾರಥ್ಯದ ಚಿತ್ರ:ಚಿತ್ರಕಥೆ, ಸಂಭಾಷಣೆ ಜೊತೆ ಜೊತೆಗೆ ಆ್ಯಕ್ಷನ್​ ಕಟ್​​ ಹೇಳಿರುವ ಸೂರಿ ಸಾರಥ್ಯದ ಈ ಚಿತ್ರದಲ್ಲಿ ಶ್ರೀಮುರುಳಿ ಮತ್ತು ರುಕ್ಮಿಣಿ ವಸಂತ್​ ತೆರೆ ಹಂಚಿಕೊಂಡಿದ್ದಾರೆ. ಸೂಪರ್​ ಹಿಟ್​ ಸಿನಿಮಾಗಳನ್ನು ಕೊಟ್ಟಿರುವ ಇವರು ಇದೇ ಮೊದಲ ಬಾರಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ, ಇವರ ಕೆಮಿಸ್ಟ್ರಿ ಹೇಗೆ ಮೂಡಿಬರಬಹುದೆನ್ನುವ ಕುತೂಹಲ ಸಹಜವಾಗಿ ಅಭಿಮಾನಿಗಳಲ್ಲಿ ಮೂಡಿದೆ.

ಪ್ರಶಾಂತ್​ ನೀಲ್​ ಕಥೆ :ಕೆಜಿಎಫ್​ ಖ್ಯಾತಿಯ ಮತ್ತು ಶ್ರೀಮುರುಳಿ ನಟನೆಯ ಉಗ್ರಂ ಸಿನಿಮಾ ನಿರ್ದೇಶಿಸಿದ್ದ ಪ್ರಶಾಂತ್​ ನೀಲ್​ ಕಥೆ ಒದಗಿಸಿದ್ದಾರೆ. ಅಂದಮೇಲೆ ಸಿನಿಮಾ ಮೇಲಿನ ಕುತೂಹಲ, ನಿರೀಕ್ಷೆ ಎಷ್ಟರ ಮಟ್ಟಿಗೆ ಇರಬಹುದು ಎಂಬುದನ್ನು ನೀವೇ ಊಹಿಸಿ. ಉಳಿದಂತೆ, ಈ ಚಿತ್ರವನ್ನು ಅದ್ಧೂರಿಯಾಗಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಅಕ್ಟೋಬರ್‌ 31ರಂದು ದೀಪಾವಳಿ ಹಬ್ಬದ ಪ್ರಯುಕ್ತ ರೋರಿಂಗ್​ ಸ್ಟಾರ್​​ನ ಈ ಸಿನಿಮಾ ತೆರೆಗಪ್ಪಳಿಸಲಿದೆ.

ಇದನ್ನೂ ಓದಿ:ಶಾರುಖ್ ಖಾನ್​ ನಟಿಸಿದ 1989ರ 'ಫೌಜಿ' ಸೀರಿಯಲ್ ದೂರದರ್ಶನದಲ್ಲಿ ಮರುಪ್ರಸಾರ

ABOUT THE AUTHOR

...view details