ಕರ್ನಾಟಕ

karnataka

ETV Bharat / entertainment

ಗಾಯಕಿ ಮಲಿಕಾ ರಜಪೂತ್ ಮನೆಯ ಕೋಣೆಯಲ್ಲಿ ಶವವಾಗಿ ಪತ್ತೆ: ಆತ್ಮಹತ್ಯೆ ಶಂಕೆ - Malika Rajput dead

ನಟಿ, ಗಾಯಕಿ ಮಲಿಕಾ ರಜಪೂತ್ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಗಾಯಕಿ ಮಲಿಕಾ ರಜಪೂತ್
ಗಾಯಕಿ ಮಲಿಕಾ ರಜಪೂತ್

By IANS

Published : Feb 14, 2024, 6:48 AM IST

ಸುಲ್ತಾನ್‌ಪುರ್ (ಉತ್ತರಪ್ರದೇಶ):ಮಲಿಕಾ ರಜಪೂತ್ ಹೆಸರಿನಿಂದ ಪರಿಚಿತರಾಗಿರುವ ಗಾಯಕಿ ಮತ್ತು ನಟಿ ವಿಜಯ್ ಲಕ್ಷ್ಮಿ ಅವರು ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ಕೊತ್ವಾಲಿ ನಗರದಲ್ಲಿರುವ ತಮ್ಮ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ನಟಿ ತನ್ನ ಕೋಣೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮೊದಲು ಮಲಿಕಾ ಅವರ ಕುಟುಂಬ ಸದಸ್ಯರಿಗೆ ಈ ದುರಂತದ ಬಗ್ಗೆ ತಿಳಿದಿರಲಿಲ್ಲ. ಮಧ್ಯರಾತ್ರಿಯಲ್ಲಿ ಮಲಿಕಾ ಅವರ ಕೋಣೆಯಲ್ಲಿ ವಿದ್ಯುತ್​ ಬೆಳಗುತ್ತಿದ್ದ ಕಾರಣ ಕುಟುಂಬಸ್ಥರು, ಬಾಗಿಲು ತೆರೆದು ನೋಡಿದಾಗ ನಟಿ ಸಾವಿಗೀಡಾಗಿದ್ದು ತಿಳಿದು ಬಂದಿದೆ. ಮೊದಲು ನಟಿಯ ತಾಯಿ ಕೋಣೆಯೊಳಕ್ಕೆ ಹೋಗಿ ನೋಡಿದ್ದಾರೆ. ಗಾಬರಿಯಿಂದ ಅವರು ಕುಟುಂಬಸ್ಥರನ್ನು ಕರೆದಿದ್ದಾಳೆ. ಅಷ್ಟೊತ್ತಿಗಾಗಲೇ ನಟಿ ಉಸಿರುಚೆಲ್ಲಿದ್ದರು.

ಆತ್ಮಹತ್ಯೆ ಶಂಕೆ:ನಟಿ ಮಲಿಕಾ ಅವರದ್ದು, ಆತ್ಮಹತ್ಯೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸಾವಿಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ಬಳಿಕ ಮಾಹಿತಿ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿ ಶ್ರೀರಾಮ್ ಪಾಂಡೆ ಹೇಳಿದರು.

ಪದ್ಮಶ್ರೀ ಪ್ರಶಸ್ತಿ ಪಡೆಯುವ ಮೊದಲೇ ಗಾಯಕ ಸಾವು:ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಪ್ರಸಿದ್ಧ ಧ್ರುಪದ್ ಗಾಯಕ ಪಂಡಿತ್ ಲಕ್ಷ್ಮಣ್ ಭಟ್ ತೈಲಾಂಗ್ ಅವರು ಫೆಬ್ರವರಿ 11 ರಂದು ವಿಧಿವಶರಾಗಿದ್ದಾರೆ. ಧ್ರುಪದ್ ಗಾಯನದಲ್ಲಿ ಪರಿಣತರಾಗಿದ್ದ ತೈಲಾಂಗ್ ಅವರಿಗೆ 93 ವರ್ಷ ವಯಸ್ಸಾಗಿತ್ತು. ರಾಜಸ್ಥಾನದ ಜೈಪುರದ ದುರ್ಲಭ್ಜಿ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ.

ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತೈಲಾಂಗ್‌ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. ಅನಾರೋಗ್ಯ ಕಾರಣ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರಾಗಿದ್ದರು. ಇದೀಗ ವಯೋ ಸಹಜ ಕಾಯಿಲೆಯಿಂದಾಗಿ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ವಿಧಿವಶರಾಗಿದ್ದಾರೆ. ಕೆಲ ಸಮಯದಿಂದ ಇವರು ನ್ಯುಮೋನಿಯಾ ಮತ್ತು ಇತರ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.

ಪುತ್ರಿ, ಪ್ರೊಫೆಸರ್ ಮಧು ಭಟ್ ತೈಲಾಂಗ್ ಪ್ರಕಾರ, ಪಂಡಿತ್ ತೈಲಾಂಗ್ ಅವರ ಆರೋಗ್ಯ ದಿನೇ ದಿನೆ ಕ್ಷೀಣಿಸುತ್ತಿತ್ತು. ಜೈಪುರದ ದುರ್ಲಭ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿಸಿದ್ದಾರೆ. ಪಂಡಿತ್ ಲಕ್ಷ್ಮಣ್ ಭಟ್ ತೈಲಾಂಗ್ ತಮ್ಮ ಜೀವನವನ್ನು ಧ್ರುಪದ್ ಗಾಯನಕ್ಕೆ ಸಮರ್ಪಿಸಿದ್ದರು. ರವಿಶಂಕರ್, ಶೋಭಾ, ಉಷಾ, ನಿಶಾ, ಮಧು, ಪೂನಂ ಮತ್ತು ಆರತಿ ಸೇರಿದಂತೆ ತಮ್ಮ ಮಕ್ಕಳಿಗೂ ಸಂಗೀತ ಶಿಕ್ಷಣ ನೀಡಿದ್ದರು. ವಿವಿಧ ಸಂಗೀತ ಪ್ರಕಾರಗಳಲ್ಲಿ ಮಕ್ಕಳ ಪ್ರತಿಭೆ ಪೋಷಿಸುವ ಕೆಲಸ ಮಾಡಿದ್ದರು.

ಇದನ್ನೂ ಓದಿ:'ಸೂರರೈ ಪೊಟ್ರು' ರೀಮೇಕ್​​: ಅಕ್ಷಯ್ ಕುಮಾರ್ ಮುಂದಿನ ಸಿನಿಮಾ ಶೀರ್ಷಿಕೆ ರಿವೀಲ್​

ABOUT THE AUTHOR

...view details