ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಬಾಲಿವುಡ್ ಬೆಡಗಿಯರಲ್ಲಿ ಶ್ರದ್ಧಾ ಕಪೂರ್ ಕೂಡ ಒಬ್ಬರು. ಸದ್ಯ ತನ್ನ ರೂಮರ್ ಬಾಯ್ಫ್ರೆಂಡ್ ರಾಹುಲ್ನಿಂದ ಸುದ್ಧಿಯಲ್ಲಿರುವ ಶ್ರದ್ಧಾ ಡೇಟಿಂಗ್ನಲ್ಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. 'ಆರ್' ಪೆಂಡೆಂಟ್ ಧರಿಸಿದ್ದ ಫೋಟೋವನ್ನು ಇತ್ತೀಚೆಗೆ ನಟಿ ಪೋಸ್ಟ್ ಮಾಡಿದ್ದರು, ಇದರಿಂದ ಇಬ್ಬರು ಡೇಟಿಂಗ್ನಲ್ಲಿದ್ದಾರೆ ಎಂದು ಸುದ್ದಿ ಹರಿದಾಡಿತ್ತು.
ಇದರ ನುಡುವೆಯೇ ಇಂದು ಮುಂಜಾನೆ, ಶ್ರದ್ಧಾ ಕಪೂರ್ ಇತ್ತೀಚಿನ ಸೆಲ್ಫಿಯೊಂದನ್ನು ತಮ್ಮ Instagram ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಶ್ರದ್ದಾ ಅಭಿಮಾನಿಗಳಲ್ಲಿ ಮತ್ತೆ ಕುತೂಹಲ ಕೆರಳಿಸಿದೆ. ಕಾರಣ ಈ ಸೆಲ್ಫಿಯಲ್ಲಿ ಅವರ ರೂಮರ್ ಗೆಳೆಯ ಮತ್ತು ಚಲನಚಿತ್ರ ಬರಹಗಾರ ರಾಹುಲ್ ಮೋದಿ ಕೂಡ ಜೊತೆಗಿರುವುದು ಕಂಡು ಬಂದಿದೆ. ಫೋಟೋ ಮೇಲೆ ಕ್ಯಾಪ್ಶನ್ ಅನ್ನು ಬರೆದಿರುವ ಅವರು, (ದಿಲ್ ತೋ ರಕ್ಲೇ ನೀಂದ್ ತೋ ವಾಪಸ್ ದೇದೆ ಯಾರ್) ಹೃದಯ ಇಟ್ಕೋ ಆದರೆ ನನ್ನ ನಿದ್ದೆ ನನಗೆ ಹಿಂತಿರುಗಿಸು ಗೆಳೆಯ ಎಂದು ಬರೆದುಕೊಂಡಿದ್ದಾರೆ. ಇದರ ಅರ್ಥ ರಾಹುಲ್ ಮೋದಿಯಿಂದಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದಂತಿದೆ. ಜತೆಗೆ ಈ ಪೋಸ್ಟ್ಗೆ 'ಇಷ್ಕ್' ಚಿತ್ರದ ನೀಂದ್ ಚುರೈ ಮೇರಿ' ಹಾಡನ್ನು ಹಾಕಿದ್ದಾರೆ.