ಕರ್ನಾಟಕ

karnataka

ETV Bharat / entertainment

ರಾಗಿಣಿ ದ್ವಿವೇದಿ‌ 'ಇ-ಮೇಲ್' ಚಿತ್ರದ ಟೀಸರ್‌ ಬಿಡುಗಡೆಗೊಳಿಸಿದ ಶಿವ ರಾಜ್‌ಕುಮಾರ್ - E Mail

ನಟಿ ರಾಗಿಣಿ ದ್ವಿವೇದಿ‌ ಅಭಿನಯದ 'ಇ-ಮೇಲ್'​ ಸಿನಿಮಾದ ಕನ್ನಡ ಟೀಸರ್​ ಬಿಡುಗಡೆ ಮಾಡಿದ ಶಿವ ರಾಜ್‌ಕುಮಾರ್, ಚಿತ್ರತಂಡಕ್ಕೆ ಶುಭ ಕೋರಿದರು.

Shivaraj kumar released E Mail Kannada Trailer
ರಾಗಿಣಿ ದ್ವಿವೇದಿ ನೂತನ ಸಿನಿಮಾದ ಟೈಟಲ್​ ಪೋಸ್ಟರ್​ ರಿಲೀಸ್​ ಮಾಡಿದ ಶಿವಣ್ಣ

By ETV Bharat Karnataka Team

Published : Jan 29, 2024, 2:06 PM IST

ಕನ್ನಡ ಚಿತ್ರರಂಗದಲ್ಲಿ ಗ್ಲ್ಯಾಮರ್ ಜೊತೆಗೆ ಆ್ಯಕ್ಷನ್ ಹೀರೋಯಿನ್‌ ಆಗಿ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ರಾಗಿಣಿ ದ್ವಿವೇದಿ. ಕನ್ನಡ, ಹಿಂದಿ ಹಾಗು ಮಲಯಾಳಂ ನಟಿಸುತ್ತಿರುವ ತುಪ್ಪದ ಬೆಡಗಿ ಈಗ ಹೊಸ ಕನ್ನಡ ಸಿನಿಮಾದೊಂದಿಗೆ ಪ್ರೇಕ್ಷಕರ ‌ಮುಂದೆ ಬರ್ತಿದ್ದಾರೆ. ಈ ಚಿತ್ರಕ್ಕೆ ಇ-ಮೇಲ್ ಎಂದು ಹೆಸರಿಡಲಾಗಿದೆ. ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ನಿರ್ಮಾಣವಾಗಿರುವ ಇ-ಮೇಲ್‌ ಕನ್ನಡ ಟೀಸರ್‌ ಅನ್ನು ಶಿವರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ.

ಇ-ಮೇಲ್ ಮಹಿಳಾ ಪ್ರಧಾನ ಚಿತ್ರ. ನಾಯಕಿಯಾಗಿ ರಾಗಿಣಿ ದ್ವಿವೇದಿ ನಟಿಸಿದ್ದಾರೆ. ಮುರುಗ ಅಶೋಕ್, ಮನೋಬಲ, 'ಜೈಲರ್' ಚಿತ್ರ ಖ್ಯಾತಿಯ ಬಿಲ್ಲಿ, 'ಲೊಳ್ಳುಸಭಾ' ಮನೋಹರ್, ಅಕ್ಷಯ್ ರಾಜ್, ಅರತಿ ಶ್ರೀ, ಆದವ ಬಾಲಾಜಿ, ಮಂಜು ನಂಜನಗೂಡು, ಸುನಿಲ್ ಸಫಿ, ರಾಮ್ ಸನ್ನಿ, ಅಜಿತ್ ಕುಮಾರ್, ಕುಮಾರಿ ಸೃಷ್ಟಿ, ಕುಮಾರಿ ಸಿಂಚನ, ಕುಮಾರಿ ಅನನ್ಯ, ಮುಂತಾದವರು ತಾರಾಬಳಗದಲ್ಲಿದ್ದಾರೆ. ಬಹುತೇಕ ಕನ್ನಡ ಕಲಾವಿದರೇ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಸುಮಧುರ ಹಾಡುಗಳಿದ್ದು ಜುಬಿನ್ ಹಾಗೂ 'ಐ ಲವ್ ಯು' ಚಿತ್ರದ ಖ್ಯಾತಿಯ ಕಿರಣ್ ತೊಟಂಬೈಲ್ (ಕನ್ನಡ) ಸಂಗೀತ ನೀಡಿದ್ದಾರೆ. ಕನ್ನಡದ ಹಾಡುಗಳನ್ನು ಸಂತೋಷ್ ನಾಯಕ್ ಬರೆದಿದ್ದಾರೆ. ಮಾಸ್ ಮಾದ, ಬೀರ್ ಮಾಸ್ಟರ್ ಹಾಗೂ ಫಯಾಸ್ ಖಾನ್ ಸಾಹಸ ನಿರ್ದೇಶನ ಹಾಗೂ ಸೆಲ್ವಂ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಎಸ್.ಆರ್.ರಾಜನ್ ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ಎಸ್.ಆರ್.ಫಿಲಂ ಫ್ಯಾಕ್ಟರಿ ತಮಿಳಿನ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ.

ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಗೋವಾ ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆದಿದೆ. 'ಇಮೇಲ್' ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಸದ್ಯದಲ್ಲೇ ಎರಡು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಪೃಥ್ವಿ ಅಂಬಾರ್-ಮಿಲನ ನಾಗರಾಜ್‌ ಸ್ಕ್ರೀನ್​ ಶೇರ್: 'ಫಾರ್​ ರಿಜಿಸ್ಟ್ರೇಷನ್' ರಿಲೀಸ್​ ಡೇಟ್ ಅನೌನ್ಸ್

ABOUT THE AUTHOR

...view details