'ಯುವ' ಶೂಟಿಂಗ್ ಸೆಟ್‌ಗೆ ಶಿವ ರಾಜ್‌ಕುಮಾರ್ ದಂಪತಿ ಸರ್ಪ್ರೈಸ್ ಭೇಟಿ ಕನ್ನಡದ ವರನಟ ಡಾ.ರಾಜ್ ಕುಮಾರ್ ಕುಟುಂಬದ ಕುಡಿ ಯುವ ರಾಜ್‌ಕುಮಾರ್ ಅವರು 'ಯುವ' ಸಿನಿಮಾ ಮೂಲಕ ಬೆಳ್ಳಿ ತೆರೆಯಲ್ಲಿ ಮಿಂಚಲು ಅಣಿಯಾಗುತ್ತಿದ್ದಾರೆ. ಈಗಾಗಲೇ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಖಡಕ್ ಡೈಲಾಗ್, ಖದರ್ನಿಂದ ಟೀಸರ್ ಸಿನಿಮಾಪ್ರಿಯರ ಗಮನ ಸೆಳೆದಿದೆ.
80ಕ್ಕೂ ಹೆಚ್ಚು ದಿನಗಳ ಸಿನಿಮಾ ಶೂಟಿಂಗ್ ನಡೆದಿದೆ. ಕೊನೇಯ ದಿನದಂದು ಶಿವ ರಾಜ್‌ಕುಮಾರ್ ತಮ್ಮ ಪತ್ನಿ ಗೀತಾ ಶಿವ ರಾಜ್‌ಕುಮಾರ್ ಜೊತೆಗೂಡಿ ಬೆಂಗಳೂರಿನ ಹೆಚ್ಎಂಟಿ ಲೇಔಟ್ನಲ್ಲಿ ನಡೆಯುತ್ತಿದ್ದ ಶೂಟಿಂಗ್ ಸ್ಥಳಕ್ಕೆ ಸರ್ಪ್ರೈಸ್ ಭೇಟಿ ಕೊಟ್ಟರು. ಈ ಭೇಟಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಚಿತ್ರತಂಡ ಅಚ್ಚರಿಗೆ ಕಾರಣವಾಗಿತ್ತು.
'ಯುವ' ಶೂಟಿಂಗ್ ಸೆಟ್‌ಗೆ ಶಿವ ರಾಜ್‌ಕುಮಾರ್ ದಂಪತಿ ಸರ್ಪ್ರೈಸ್ ಭೇಟಿ ಚಿತ್ರದ ಮೇಕಿಂಗ್ ನೋಡಿದ ಶಿವ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ನಟನೆ ಹಾಗು ಡ್ಯಾನ್ಸ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯುವ ರಾಜ್‌ಕುಮಾರ್ ಕೂಡಾ ದೊಡ್ಡಪ್ಪ ಹಾಗು ದೊಡ್ಡಮ್ಮನ ಆಗಮನದಿಂದ ಎಕ್ಸೈಟ್ ಆಗಿದ್ದರು.
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ವಿಭಿನ್ನ ಚಿತ್ರಗಳು ಹಾಗು ಮನರಂಜನೆ ತುಂಬಿದ ಚಿತ್ರಕತೆಗಳಿಂದ ಒಂದರ ಹಿಂದೊಂದರಂತೆ ದಾಖಲೆ ನಿರ್ಮಿಸಿರುವ ನಿರ್ದೇಶಕ ಸಂತೋಷ್ ಆನಂದ್‌ರಾಮ್ 'ಯುವ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಹಾಗು ಸಂತೋಷ್ ಆನಂದ್‌ರಾಮ್ ಕಾಂಬಿನೇಶನ್ನಲ್ಲಿ ಗೆಲುವಿನ ಓಟಕ್ಕೆ ಈ ಚಿತ್ರ ಸಜ್ಜಾಗುತ್ತಿದೆ.
'ಯುವ' ಶೂಟಿಂಗ್ ಸೆಟ್‌ಗೆ ಶಿವ ರಾಜ್‌ಕುಮಾರ್ ದಂಪತಿ ಸರ್ಪ್ರೈಸ್ ಭೇಟಿ ಸದಭಿರುಚಿಯ ಹಾಗು ದಾಖಲೆಯ ಚಲನಚಿತ್ರಗಳನ್ನು ನಿರ್ಮಿಸುತ್ತಾ ಬಂದಿರುವ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರ್ ಅದ್ಧೂರಿ ವೆಚ್ಚದಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಸಂಗೀತ ನಿರ್ದೇಶಕ ಅಜನೀಶ್ ಬಿ.ಲೋಕನಾಥ್ ಸಂಗೀತ ಸಂಯೋಜನೆ, ಶ್ರೀಶ ಕೂದುವಳ್ಳಿ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತಂಡ ನಿರತವಾಗಿದೆ. ಮಾರ್ಚ್ 17, ಅಂದರೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು ಟ್ರೇಲರ್ ಬಿಡುಗಡೆಯಾಗಲಿದೆ.
ಇದನ್ನೂ ಓದಿ:ಅಬುಧಾಬಿಯಲ್ಲಿ ಬೊಂಬಾಟ್ ಸ್ಟೆಪ್ ಹಾಕಿದ ಶಿವಣ್ಣ-ಪ್ರಭುದೇವ: 'ಕರಟಕ ದಮನಕ' ಮೇಲೆ ಕುತೂಹಲ