ಕರ್ನಾಟಕ

karnataka

ETV Bharat / entertainment

ಶೈನ್ ಶೆಟ್ಟಿ 'ಜಸ್ಟ್ ಮ್ಯಾರಿಡ್' ಅಂದ್ರು ರಿಯಲ್ ಸ್ಟಾರ್ ಉಪೇಂದ್ರ - Just Married - JUST MARRIED

ಶೈನ್ ಶೆಟ್ಟಿ ಹಾಗೂ ಅಂಕಿತಾ ಅಮರ್ ಅಭಿನಯದ 'ಜಸ್ಟ್ ಮ್ಯಾರಿಡ್' ಚಿತ್ರದ ಟೀಸರ್ ಅನಾವರಣಗೊಂಡಿದೆ.

'Just Married' Teaser release event
'ಜಸ್ಟ್ ಮ್ಯಾರಿಡ್' ಟೀಸರ್ ರಿಲೀಸ್​ ಈವೆಂಟ್​​ (ETV Bharat)

By ETV Bharat Karnataka Team

Published : Oct 7, 2024, 1:49 PM IST

ಚಂದನವನದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ಕಡಿಮೆ. ಈ ಹೊತ್ತಲ್ಲಿ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ಸಿ.ಆರ್.ಬಾಬಿ ನಿರ್ದೇಶಕಿಯಾಗುತ್ತಿದ್ದು, ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತಾ ಅಮರ್ ಸಿನಿಮಾಗೆ ಆ್ಯಕ್ಷನ್​ ಕಟ್​​ ಹೇಳಿದ್ದಾರೆ. ಚಿತ್ರಕ್ಕೆ 'ಜಸ್ಟ್ ಮ್ಯಾರಿಡ್' ಎಂಬ ಕ್ಯಾಚೀ ಟೈಟಲ್ ಇಡಲಾಗಿದ್ದು, ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ.

ದಕ್ಷಿಣ ಭಾರತದ ಖ್ಯಾತ ನಿರ್ದೇಶಕರಾದ ನಿಥಿಲನ್, ಅಜಯ್ ಭೂಪತಿ, ರಿಯಲ್ ಸ್ಟಾರ್ ಉಪೇಂದ್ರ ಸೇರಿ ಜಸ್ಟ್ ಮ್ಯಾರಿಡ್ ಟೀಸರ್ ಅನ್ನು ಅನಾವರಣಗೊಳಿಸಿದ್ರು.

ಕನ್ನಡದ ಜನಪ್ರಿಯ ನಟ ಉಪೇಂದ್ರ ಮಾತನಾಡಿ, ''ನಾನು ಸಿ.ಆರ್ ಬಾಬಿ ಅವರ ಕೆಲಸವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅದ್ಭುತ ಕಾರ್ಯವೈಖರಿ ಅವರದ್ದು. ಅಜನೀಶ್ ಅವರ ಬಗ್ಗೆ ಹೇಳುವ ಹಾಗೇ ಇಲ್ಲ. ನನ್ನ ಚಿತ್ರಕ್ಕೂ ಅವರೇ ಸಂಗೀತ ನಿರ್ದೇಶಕರು. ಕೈತುಂಬಾ ಕೆಲಸ ಇದ್ದರೂ ಸ್ವಲ್ಪವೂ ಅಹಂ ಇಲ್ಲ ಅವರಿಗೆ. ಇನ್ನೂ ಚಿತ್ರದ ಟೀಸರ್ ಬಹಳ ಚೆನ್ನಾಗಿದೆ. ಅಷ್ಟೇ ಚೆನ್ನಾಗಿ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವಿದೆ. ನಿಥಿಲನ್ ಹಾಗೂ ಅಜಯ್ ಭೂಪತಿ ಅವರನ್ನು ಭೇಟಿ ಮಾಡಿಸಿದ್ದಕ್ಕಾಗಿ ಈ ತಂಡಕ್ಕೆ ಧನ್ಯವಾದಗಳು'' ಎಂದು ತಿಳಿಸಿದರು.

ಶೈನ್ ಶೆಟ್ಟಿ ಹಾಗೂ ಅಂಕಿತಾ ಅಮರ್ (ETV Bharat)

ಸಿ.ಆರ್ ಬಾಬಿ ಹಾಗೂ ಅಜನೀಶ್ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡ ನಿಥಿಲನ್ ಹಾಗೂ ಅಜಯ್ ಭೂಪತಿ ಅವರು ಚಿತ್ರದ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೇ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಜೊತೆಗೆ, ಉಪೇಂದ್ರ ಅವರ ನಿರ್ದೇಶನಕ್ಕೆ ನಾವು ಅಭಿಮಾನಿಗಳೆಂದು ಇಬ್ಬರು ನಿರ್ದೇಶಕರು ಇದೇ ಸಂದರ್ಭದಲ್ಲಿ ತಿಳಿಸಿದರು.

'ಜಸ್ಟ್ ಮ್ಯಾರಿಡ್' ಟೀಸರ್ ರಿಲೀಸ್​ ಈವೆಂಟ್​​ (ETV Bharat)

ಸಿನಿಮಾ ನಿರ್ದೇಶನ ನನ್ನ ಬಹು ವರ್ಷಗಳ ಕನಸು ಎಂದು ಮಾತು ಶುರು ಮಾಡಿದ ನಿರ್ದೇಶಕಿ ಸಿ.ಆರ್ ಬಾಬಿ, ''ನನ್ನ ‌ನಿರ್ದೇಶನದ ಚೊಚ್ಚಲ ಚಿತ್ರವನ್ನು ಅಜನೀಶ್ ನಿರ್ಮಾಣ ಮಾಡಿದ್ದಾರೆ. ದಕ್ಷಿಣ ಭಾರತದ ಈ ಮೂವರು ಜನಪ್ರಿಯ ನಿರ್ದೇಶಕರು ನಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಿಕೊಟ್ಟಿದ್ದು ತುಂಬಾನೇ ಖುಷಿಯಾಗಿದೆ. ಟೀಸರ್ ಚೆನ್ನಾಗಿ ಮೂಡಿಬಂದಿದೆ ಎಂದರೆ ಅದಕ್ಕೆ ನನ್ನ ತಂಡದ ಸಹಕಾರವೇ ಕಾರಣ. ಅವರೆಲ್ಲರಿಗೂ ಧನ್ಯವಾದಗಳು. ಸದ್ಯದಲ್ಲೇ ಜಸ್ಟ್ ಮ್ಯಾರಿಡ್" ನಿಮ್ಮ ಮುಂದೆ ಬರಲಿದೆ ಎಂದರು.

'ಜಸ್ಟ್ ಮ್ಯಾರಿಡ್' ನಿರ್ಮಾಪಕ, ನಿರ್ದೇಶಕರು (ETV Bharat)

ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಾತನಾಡಿ, ''ನನ್ನ ಮೊದಲ ಗುರು ನನ್ನ ತಂದೆ‌. ಚಿತ್ರರಂಗದಲ್ಲಿ ನನ್ನ ಗುರು ಕೆ.ಕಲ್ಯಾಣ್ ಹಾಗೂ ಸಿ.ಆರ್.ಬಾಬಿ. ಅವರಿಬ್ಬರಿಗೂ ಧನ್ಯವಾದಗಳನ್ನೇಳಲಿಚ್ಛಿಸುತ್ತೇನೆ.‌ ಬಾಬಿ ಅವರು ಉತ್ತಮ ಕಥೆ ಮಾಡಿಕೊಂಡಿದ್ದಾರೆ. ಅವರೇ ನಿರ್ದೇಶನ ಕೂಡಾ ಮಾಡಿದ್ದಾರೆ. ಇದೀಗ ಟೀಸರ್ ಬಿಡುಗಡೆಯಾಗಿ, ಚಿತ್ರ ರಿಲೀಸ್ ಹಂತಕ್ಕೆ ಬಂದು ತಲುಪಿದೆ''‌ ಎಂದರು.‌

ಶೈನ್ ಶೆಟ್ಟಿ ಮಾತನಾಡಿ ಈ ಚಿತ್ರದಲ್ಲಿ ಅಭಿನಯಿಸಿದ್ದು ಸಂತೋಷವಾಗಿದೆ. ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಬಾಬಿ ಹಾಗೂ ಅಜನೀಶ್ ಅವರು ಈ ಚಿತ್ರದ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ. ನಟಿ ಅಂಕಿತಾ ಅಮರ್ ಅವರು ಉತ್ತಮ ಕಲಾವಿದೆ. ಅವರ ಕ‌ನ್ನಡ ಹಾಗೂ ನಟನೆ ಎರಡೂ ಚೆಂದ.‌ ನಿಮ್ಮೆಲ್ಲರ ಪ್ರೋತ್ಸಾಹ ನಮ್ಮ ಚಿತ್ರಕ್ಕಿರಲಿ ಎಂದರು.

ಇದನ್ನೂ ಓದಿ:ಬಿಗ್​​ ಬಾಸ್​​ನಿಂದ ಯಮುನಾ ಔಟ್; ಮನೆಯಲ್ಲಿ ಮತ್ತೆ ಕಿರುಚಾಟ: ನಿಮ್ಮ ಅಭಿಪ್ರಾಯವೇನು? - Bigg Boss Kannada 11

ಬಳಿಕ ನಾಯಕಿ ಅಂಕಿತಾ ಅಮರ್ ಮಾತನಾಡಿ, ನಾನು ಅಜನೀಶ್ ಅವರ ಹಾಡುಗಳ ಅಭಿಮಾನಿ.‌ ಒಂದು ದಿನ ಅವರೇ ಕರೆ ಮಾಡಿ, ನೀವೇ ನಮ್ಮ ಚಿತ್ರದ ನಾಯಕಿ ಎಂದರು. ಇದಕ್ಕಿಂತ ಭಾಗ್ಯ ಬೇಕೆ.‌ ಸಿ.ಆರ್ ಬಾಬಿ ಅವರು ನಿರ್ದೇಶಕಿಯಾಗಿ ಮೊದಲ ಚಿತ್ರವನ್ನೇ ಎಲ್ಲರೂ ಮೆಚ್ಚುವ ಹಾಗೆ ನಿರ್ದೇಶಿಸಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಸಹನ ನನ್ನ ಪಾತ್ರದ ಹೆಸರು ಎಂದು ಮಾಹಿತಿ ಹಂಚಿಕೊಂಡರು.‌

ಇದನ್ನೂ ಓದಿ:'ಬಿಗ್​ ಬಾಸ್​ ಹೆಸರು ಹಾಳ್​ ಮಾಡೋಕೆ ನಿಮ್ಮ ಅಪ್ಪನಾಣೆ ಸಾಧ್ಯವಿಲ್ಲ': ಲಾಯರ್​ ಜಗದೀಶ್​ ಮಾತಿಗೆ ನಯವಾಗೇ ಟಾಂಗ್​ ಕೊಟ್ಟ ಸುದೀಪ್​ - Sudeep On Lawyer Jagdish

ಶೈನ್ ಶೆಟ್ಟಿ ಹಾಗೂ ಅಂಕಿತಾ ಅಮರ್ ಅಲ್ಲದೇ ಹಿರಿಯ ನಟಿ ಶ್ರುತಿ‌, ರವಿಶಂಕರ್ ಗೌಡ, ದೇವರಾಜ್, ನಿರ್ದೇಶಕ ಅನೂಪ್ ಭಂಡಾರಿ, ಶ್ರೀಮಾನ್, ವಾಣಿ ಹರಿಕೃಷ್ಣ, ಸಾಕ್ಷಿ ಅಗರವಾಲ್ ಸೇರಿದಂತೆ ಮುಂತಾದದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ‌. 'abbs studios' ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಮಾಡಿದ್ದಾರೆ‌. ಈ ಚಿತ್ರದ ಹಾಡುಗಳನ್ನು ಆನಂದ್ ಆಡಿಯೋ ಖರೀದಿಸಿದ್ದು, ಸದ್ಯ ಟೀಸರ್ ಗಮನ ಸೆಳೆಯುತ್ತಿದೆ.

ABOUT THE AUTHOR

...view details