ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಹಾಗೂ ಖುಷಿ ಕಪೂರ್ ಅಭಿನಯದ 'ಲವ್‌ಯಾಪ' ನಾಳೆ, ಫೆಬ್ರವರಿ 7ರಂದು ತೆರೆಗಪ್ಪಳಿಸಲಿದೆ. ಸಿನಿಮಾ ಪ್ರಚಾರ ಜೋರಾಗೇ ನಡೆದಿದ್ದು, ಕಳೆದ ಸಂಜೆ ಸ್ಪೆಷಲ್ ಸ್ಕ್ರೀನಿಂಗ್ ಹಮ್ಮಿಕೊಳ್ಳಲಾಗಿತ್ತು. ಈವೆಂಟ್ನಲ್ಲಿ ಬಾಲಿವುಡ್ ಖಾನ್‌ಗಳಾದ ಸಲ್ಮಾನ್ ಮತ್ತು ಶಾರುಖ್ ಅವರು ಆಮೀರ್ ಖಾನ್ ಅವರೊಂದಿಗೆ ಸೇರಿ 'ಲವ್‌ಯಾಪ' ತಾರಾಬಲವನ್ನು ಹೆಚ್ಚಿಸಿದರು.
ಖಾನ್ಸ್ ಒಡನಾಟ:ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಅವರ ಮೊದಲ ಸಿನಿಮಾ 'ಲವ್‌ಯಾಪ' ಈವೆಂಟ್ನಲ್ಲಿ ಶಾರುಖ್ ಮತ್ತು ಸಲ್ಮಾನ್ ಕಾಣಿಸಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇವು ಅಮೀರ್ ಜೊತೆಗಿನ ಖಾನ್ಸ್ ಒಡನಾಟವನ್ನು ಪ್ರದರ್ಶಿಸಿದೆ.
ಅಮೀರ್ ಮಕ್ಕಳನ್ನು ಅಪ್ಪಿಕೊಂಡ ಶಾರುಖ್:ವಿಡಿಯೋದಲ್ಲಿ ಶಾರುಖ್ ಖಾನ್ ಅವರು ಅಮೀರ್ ಮತ್ತು ಅವರ ಮಕ್ಕಳಾದ ಜುನೈದ್, ಇರಾ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡಿರುವುದನ್ನು ಸಹ ಕಾಣಬಹುದು. ಈ ಕಾರ್ಯಕ್ರಮಕ್ಕಾಗಿ ಶಾರುಖ್ ಡಾರ್ಕ್ ಬ್ಲ್ಯೂ ಶರ್ಟ್ ಹಾಗೂ ಜೀನ್ಸ್ ಧರಿಸಿದ್ದರು.
ಕೂಲ್ ಲುಕ್ನಲ್ಲಿ ಸಲ್ಲು:ಕಾರ್ಯಕ್ರಮದಲ್ಲಿ ಅಮೀರ್ ಜೊತೆ ಸಲ್ಮಾನ್ ಖಾನ್ ಕೂಡಾ ಕಾಣಿಸಿಕೊಂಡರು. ದಬಾಂಗ್ ನಟ ಲೈಟ್ ಬ್ಲ್ಯೂ ಜೀನ್ಸ್, ಲೈಟ್ ಗ್ರೀನ್ ಪೋಲೋ ಟೀ ಶರ್ಟ್ ಧರಿಸಿ ಕೂಲ್ ಲುಕ್ನಲ್ಲಿ ಕಾಣಿಸಿಕೊಂಡರು.