ಮುಂಬೈ(ಮಹಾರಾಷ್ಟ್ರ): ಬಾಲಿವುಡ್ನ ಸೂಪರ್ ಸ್ಟಾರ್ ಶಾರುಖ್ ಖಾನ್ ಹಾಗೂ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಬಹುಕಾಲದ ಆಪ್ತ ಸ್ನೇಹಿತರೆಂಬುದು ನಿಮಗೆ ತಿಳಿದೇ ಇದೆ. ಶಾರುಖ್ ಖಾನ್ ಜೊತೆ 'ಓಂ ಶಾಂತಿ ಓಂ' ಚಿತ್ರದ ಮೂಲಕ ತಮ್ಮ ಬಾಲಿವುಡ್ ಪ್ರಯಾಣ ಪ್ರಾರಂಭಿಸಿದ ದೀಪಿಕಾ ಅವರು ಎಸ್ಆರ್ಕೆ ಜೊತೆ ಹಲವು ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಕಳೆದ ವರ್ಷ ಬಂದ ಪಠಾಣ್ ಕೂಡಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುವಲ್ಲಿ ಯಶ ಕಂಡಿದೆ. ಭಾನುವಾರ ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಶಾರುಖ್ ಖಾನ್ ತಾಯಿ ಮಗುವನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ.
ಗುರುವಾರ ರಾತ್ರಿ ಶಾರುಖ್ ಖಾನ್ ಮುಂಬೈನ ಹೆಚ್ಎನ್ ರಿಲಯನ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಶನಿವಾರ ಆಸ್ಪತ್ರೆ ತಲುಪಿದ್ದ ದೀಪಿಕಾ ಭಾನುವಾರ ಮಗುವಿನ ಆಗಮನವಾಗಿದೆ ಎಂದು ಘೋಷಿಸಿದರು. ಕಳೆದ ರಾತ್ರಿ ಭೇಟಿ ಕೊಟ್ಟ ಸೂಪರ್ ಸ್ಟಾರ್ ದೀಪಿಕಾ ಮತ್ತು ಅವರ ಪುಟ್ಟ ಕಂದಮ್ಮನೊಂದಿಗೆ ಆಸ್ಪತ್ರೆಯಲ್ಲಿ ಸಮಯ ಕಳೆದರು. ಕಿಂಗ್ ಖಾನ್ ಆಗಮನ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ವಹಿಸಲಾಗಿತ್ತು. ಶಾರುಖ್ಗೂ ಮೊದಲು, ಮುಖೇಶ್ ಮತ್ತು ನೀತಾ ಅಂಬಾನಿ ಕೂಡಾ ದೀಪ್ವೀರ್ ದಂಪತಿಯನ್ನು ಭೇಟಿ ಮಾಡಿದ್ದರು.
ಹೆಣ್ಣು ಮಗುವಿನ ಆಗಮನ ಹಿನ್ನೆಲೆಯಲ್ಲಿ ತಾರಾ ದಂಪತಿ ಸೇರಿದಂತೆ ಕುಟುಂಬಸ್ಥರು ಬಹಳ ಸಂತೋಷದಲ್ಲಿದ್ದಾರೆ. ಅದರಲ್ಲೂ ವಿಶೇಷವಾಗಿ ದೀಪಿಕಾರನ್ನೇ ಹೋಲುವ ಮಗಳು ಬೇಕೆಂದು ರಣ್ವೀರ್ ಬಹಳ ದಿನಗಳಿಂದ ಬಯಸಿದ್ದರು. ತಮ್ಮ ಮಗುವಿನ ಜನನಕ್ಕೂ ಮೊದಲು, ದೀಪಿಕಾ, ರಣ್ವೀರ್ ಹಾಗೂ ಕುಟುಂಬಸ್ಥರು ಗೌರಿ ಗಣೇಶ ಚತುರ್ಥಿ ಹಿನ್ನೆಲೆ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಗಣೇಶನ ಆಶೀರ್ವಾದ ಪಡೆದ ನಟಿ ಮೊಗದಲ್ಲಿ ತಾಯಿಯಾಗುತ್ತಿರುವ ಕಳೆ ಎದ್ದು ಕಾಣುತ್ತಿತ್ತು.