ಕರ್ನಾಟಕ

karnataka

ETV Bharat / entertainment

'ಯಶ್​​​ ಬೇಗ ಸಿನಿಮಾ ಮಾಡಿ': ಟಾಕ್ಸಿಕ್​ ನೋಡುವ ಕಾತರ ವ್ಯಕ್ತಪಡಿಸಿದ ಶಾರುಖ್​​ ಖಾನ್​​ - SHAH RUKH KHAN

ಸೂಪರ್​​ ಸ್ಟಾರ್​ ಶಾರುಖ್​ ಖಾನ್​ ಅವರೇ ರಾಕಿಂಗ್​ ಸ್ಟಾರ್​ನ ಮುಂದಿನ ಸಿನಿಮಾ ವೀಕ್ಷಿಸುವ ತಮ್ಮ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ.

Shah Rukh Khan, Yash
ಶಾರುಖ್​ ಖಾನ್​, ಯಶ್​​ (Photo: ANI)

By ETV Bharat Entertainment Team

Published : Nov 5, 2024, 12:46 PM IST

'ಕೆಜಿಎಫ್ ಚಾಪ್ಟರ್ 2' ಸಿನಿಮಾ ಕಂಡ ಅಭೂತಪೂರ್ವ ಯಶಸ್ಸಿನ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ಸ್ಯಾಂಡಲ್​ವುಡ್​ನ ರಾಕಿಂಗ್​ ಸ್ಟಾರ್​​ ಯಶ್​​​ ಅವರ ಅಮೋಘ ಅಭಿನಯ ಸಿನಿಮಾದ ತೂಕ ಹೆಚ್ಚಿಸಿತ್ತು. ಕನ್ನಡ ಚಿತ್ರರಂಗದ ಖ್ಯಾತಿಯನ್ನು ಗಡಿ ದಾಟಿಸಿದ ಕೀರ್ತಿ ಈ ಸಿನಿಮಾ ಮತ್ತು ಯಶ್​ ಅವರಿಗೆ ಸಲ್ಲುತ್ತದೆ. ಸದ್ಯ ಅವರ ಮುಂದಿನ ಸಿನಿಮಾ ಮೇಲೆ ಅಭಿಮಾನಿಗಳೂ ಸೇರಿದಂತೆ ಚಿತ್ರರಂಗದ ಹೆಸರಾಂತರೂ ಕೂಡಾ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಪ್ರಶಾಂತ್​ ನೀಲ್​ ನಿರ್ದೇಶನದ ಕೆಜಿಎಫ್​ 2 ಚಿತ್ರ 2022ರ ಏಪ್ರಿಲ್​ 14ಕ್ಕೆ ತೆರೆಕಂಡು ಬ್ಲಾಕ್​ಬಸ್ಟರ್​​ ಹಿಟ್​ ಆಗಿತ್ತು. ಮುಂದಿನ ಸಿನಿಮಾ ಘೋಷಣೆಗೆ ಅಭಿಮಾನಿಗಳು ಬಹಳ ಕಾತರರಾಗಿದ್ದರು. 'ಯಶ್​ 19' ಎಂಬ ಹ್ಯಾಶ್​​ಟ್ಯಾಗ್​​​ ಸೋಷಿಯಲ್​ ಮೀಡಿಯಾದ ವಿವಿಧ ಪ್ಲ್ಯಾಟ್​ಫಾರ್ಮ್​​ಗಳಲ್ಲಿ ಬಹಳ ಸದ್ದು ಮಾಡಿತ್ತು. ಒಂದೂವರೆ ವರ್ಷದ ಕಾತರದ ಬಳಿಕ 2023ರ ಡಿಸೆಂಬರ್​​​ನಲ್ಲಿ ಯಶ್​ ಮುಖ್ಯಭೂಮಿಕೆಯ ಹೊಸ ಸಿನಿಮಾ 'ಟಾಕ್ಸಿಕ್​​' ಘೋಷಣೆಯಾಯಿತು. 2024ರ ಆಗಸ್ಟ್​​ 8ಕ್ಕೆ ಸಿನಿಮಾ ಸೆಟ್ಟೇರಿದ್ದು, 2025ರ ಏಪ್ರಿಲ್​​ 10ರಂದು ಬಿಡುಗಡೆ ಆಗಲು ನಿರ್ಧಾರ ಮಾಡಲಾಗಿದೆ.

ಈ ಸಿನಿಮಾ ನೋಡಲು ಅಪಾರ ಸಂಖ್ಯೆಯ ಸಿನಿಪ್ರಿಯರ ಜೊತೆಗೆ ಚಿತ್ರರಂಗದ ಖ್ಯಾತ ಕಲಾವಿದರೂ ಕೂಡಾ ಕಾತರರಾಗಿದ್ದಾರೆ. ಇದೀಗ ವಿಶ್ವದಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಕಿಂಗ್​ ಖಾನ್​ ಶಾರುಖ್​​​ ಅವರೂ ಕೂಡಾ ತಮ್ಮ ಕುತೂಹಲ, ಕಾತರವನ್ನು ವ್ಯಕ್ತಪಡಿಸಿದ್ದಾರೆ.

ಸೋಷಿಯಲ್​​ ಮೀಡಿಯಾದಲ್ಲಿ ಜನಪ್ರಿಯ ನಟ ಯಶ್ ಅವರ ವಿಡಿಯೋವೊಂದು ವೈರಲ್​​​ ಆಗುತ್ತಿದೆ. ಅದು ಇತ್ತೀಚಿನ 'ಎಸ್​​ಆರ್​ಕೆ ಡೇ' (ಶಾರುಖ್​​ ಬರ್ತ್​​ಡೇ ಸಂದರ್ಭದ) ವಿಡಿಯೋ ಎನ್ನಲಾಗಿದೆ. ಯಶ್​​ ಆದಷ್ಟು ಬೇಗ ಸಿನಿಮಾ ಮಾಡಿ. ಬೆಂಗಳೂರಿನಿಂದ ಬರುವ ಆ ಸಿನಿಮಾಗಾಗಿ ನಾವು ಕಾಯುತ್ತಿದ್ದೇವೆ ಎಂಬರ್ಥದಲ್ಲಿ ಶಾರುಕ್​​​ ಮಾತನಾಡಿರುವ ವಿಡಿಯೋ ಇದಾಗಿದೆ. ಈ ಮೂಲಕ ಯಶ್​ ಅವರ ಮುಂದಿನ ಚಿತ್ರಗಳ ಮೇಲೆ ಕೋಟ್ಯಂತರ ಅಭಿಮಾನಿಗಳು, ಸಿನಿಪ್ರಿಯರ ಜೊತೆ ಜೊತೆಗೆ ಇಂಡಿಯನ್​ ಸೂಪರ್​​ ಸ್ಟಾರ್​ ಶಾರುಖ್​ ಖಾನ್​ ಅವರಿಗೂ ಸಾಕಷ್ಟು ಕುತೂಹಲವಿದೆ ಎಂಬುದು ಸ್ಪಷ್ಟವಾಗಿದೆ. ಇದಕ್ಕೆ ಕನ್ನಡದ ಖ್ಯಾತ ನಟ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಯಶ್​​ ಕನ್ನಡ ಪ್ರೇಮ ಮತ್ತೊಮ್ಮೆ ಸಾಬೀತು: ಮಕ್ಕಳೊಂದಿಗೆ ಮಗುವಾದ ರಾಕಿ ಭಾಯ್​; ಮುದ್ದಾದ ವಿಡಿಯೋಗಳಿಲ್ಲಿವೆ​

ರಾಕಿಂಗ್ ಸ್ಟಾರ್ ಯಶ್ ಬಣ್ಣ ಹಚ್ಚುತ್ತಿರುವ ಮುಂದಿನ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್'. ಅವರ ಮಾರುಕಟ್ಟೆಯೀಗ ವಿಸ್ತರಣೆ ಆಗಿದ್ದು, ಯಶ್​​​ ಮತ್ತು ಶೀರ್ಷಿಕೆಯಿಂದಲೇ ಟಾಕ್ಸಿಕ್​​​ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್​ ಕ್ರೇಜ್​ ಸೃಷ್ಟಿಸಿದೆ. ಮಲಯಾಳಂ ಚಿತ್ರರಂಗದ ಜನಪ್ರಿಯ​​​ ನಿರ್ದೇಶಕಿ ಗೀತಾ ಮೋಹನ್ ದಾಸ್ ನಿರ್ದೇಶಿಸುತ್ತಿರುವ ಈ ಸಿನಿಮಾವನ್ನು ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ 'ಕೆವಿಎನ್'​​ ನಿರ್ಮಾಣ ಮಾಡುತ್ತಿದೆ. ನಾಯಕ ನಟಿ ಮತ್ತು ಸಹನಟಿಯರ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಈವರೆಗೆ ಕೆಲ ಜನಪ್ರಿಯ ನಟಿಯರ ಹೆಸರು ಈ ಸಿನಿಮಾದೊಂದಿಗೆ ಕೇಳಿಬಂದಿದೆ.

ಇದನ್ನೂ ಓದಿ:ಶಿವಣ್ಣನ ಟಗರು ಸಾಂಗ್​ಗೆ ಯಶ್​ ಮಸ್ತ್​ ಡ್ಯಾನ್ಸ್​​: ಮಗನ ಬರ್ತ್​ಡೇ ಪಾರ್ಟಿ ವಿಡಿಯೋ ವೈರಲ್​

ಇತ್ತೀಚೆಗೆ ರಾಕಿಂಗ್​​ ಸ್ಟಾರ್​ನ ಕೆಲ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​ ಆಗಿವೆ. ಅಕ್ಟೋಬರ್ ಕೊನೆಗೆ ಪುತ್ರ ಯಥರ್ವ್ ತನ್ನ ಐದನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ. ಅಂದು ಕುಟುಂಬ, ಆತ್ಮೀಯರೊಂದಿಗೆ ಯಶ್​​ ಗುಣಮಟ್ಟದ ಸಮಯ ಕಳೆದಿದ್ದರು. ಶಿವಣ್ಣನ ಟಗರು ಸಾಂಗ್​ಗೆ ಯಶ್​ ಮಸ್ತ್​ ಡ್ಯಾನ್ಸ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ABOUT THE AUTHOR

...view details