ETV Bharat / entertainment

ರೂಪೇಶ್​ ಶೆಟ್ಟಿ 'ಜೈ' ಮೇಕಿಂಗ್​ ವಿಡಿಯೋ: ಹೆಲಿಕಾಪ್ಟರ್​​​ನಲ್ಲಿ ಸುನೀಲ್​ ಶೆಟ್ಟಿ ಸ್ಟೈಲಿಶ್​ ಎಂಟ್ರಿಗೆ ಫ್ಯಾನ್ಸ್ ಫಿದಾ - JAI MOVIE MAKING VIDEO

ರೂಪೇಶ್ ಶೆಟ್ಟಿ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಜೈ' ಸಿನಿಮಾದ ಮೇಕಿಂಗ್​ ವಿಡಿಯೋ ಅನಾವರಣಗೊಂಡಿದೆ. ಬಾಲಿವುಡ್​ ಸೂಪರ್​ ಸ್ಟಾರ್ ಸುನೀಲ್​ ಶೆಟ್ಟಿ ಈ ಪ್ರೊಜೆಕ್ಟ್​ನ ಹೈಲೈಟ್ ಆಗಿದ್ದಾರೆ.

Suniel Shetty
ಸುನೀಲ್​ ಶೆಟ್ಟಿ (Photo: ANI)
author img

By ETV Bharat Entertainment Team

Published : Jan 18, 2025, 5:02 PM IST

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್‌ ಬಾಸ್ ಸೀಸನ್ 9ರ ವಿಜೇತ ರೂಪೇಶ್ ಶೆಟ್ಟಿ ಸಾರಥ್ಯದ ಬಹುನಿರೀಕ್ಷಿತ ಚಿತ್ರ 'ಜೈ' ಸಖತ್​​ ಸದ್ದು ಮಾಡುತ್ತಿದೆ. ಇದೊಂದು ತುಳು ಸಿನಿಮಾ ಆಗಿದ್ದು, ಬಾಲಿವುಡ್​ ಸೂಪರ್​ ಸ್ಟಾರ್ ಸುನೀಲ್​ ಶೆಟ್ಟಿ ಈ ಪ್ರೊಜೆಕ್ಟ್​ನ ಹೈಲೈಟ್​ ಎನ್ನಬಹುದು. ಪ್ರಗತಿಯ ಹಾದಿಯಲ್ಲಿರುವ ತುಳು ಚಿತ್ರರಂಗಕ್ಕೆ ಶೆಟ್ರ ಸಾಥ್​ ಮತ್ತಷ್ಟು ಭರವಸೆ ಮೂಡಿಸಿದೆ.

ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಾಲಿವುಡ್​ ನಟ ಸುನೀಲ್​ ಶೆಟ್ಟಿ ಇತ್ತೀಚೆಗಷ್ಟೇ ಮಂಗಳೂರು ತಲುಪಿದ್ದಾರೆ. ಚಿತ್ರೀಕರಣ ಸಹ ಶುರುವಾಗಿದ್ದು, ರೂಪೇಶ್​ ಶೆಟ್ಟಿ ಅವರು ಒಂದರ ಬಳಿಕ ಒಂದರಂತೆ ಪೋಸ್ಟ್​ ಶೇರ್ ಮಾಡಿಕೊಳ್ಳೋ ಮೂಲಕ ಅಭಿಮಾನಿಗಳಿಗೆ ಮಾಹಿತಿ ಒದಗಿಸುತ್ತಿದ್ದಾರೆ.

ಇದೀಗ ಶೂಟಿಂಗ್​ ಸ್ಟಾಟ್​ನ ವಿಡಿಯೋ ಹಂಚಿಕೊಂಡಿದ್ದಾರೆ ರೂಪೇಶ್​ ಶೆಟ್ಟಿ. ಹೆಲಿಕಾಪ್ಟರ್​​​ನಲ್ಲಿ ಸುನೀಲ್​ ಶೆಟ್ಟಿ ಸ್ಟೈಲಿಶ್​ ಎಂಟ್ರಿ ಕೊಟ್ಟಿದ್ದು ಫ್ಯಾನ್ಸ್ ಫಿದಾ ಆಗಿದ್ದಾರೆ. ಚಿತ್ರೀಕರಣದ ಕೆಲ ದೃಶ್ಯಗಳನ್ನು ಈ ವಿಡಿಯೋ ಒಳಗೊಂಡಿದೆ. ಹೆಲಿಕಾಪ್ಟರ್​​​ ಬಳಕೆ, ಶೂಟಿಂಗ್ ಲೊಕೇಶನ್​​ ಇವೆಲ್ಲವನ್ನೂ ಗಮನಿಸಿದ್ರೆ ಸಿನಿಮಾ ಬಹಳ ದೊಡ್ಡ ಮಟ್ಟದಲ್ಲೇ ತಯಾರಾಗುತ್ತಿದೆ ಅನ್ನೋದು ಬಹುತೇಕ ಪಕ್ಕಾ ಆಗಿದೆ. ಸಿನಿಮಾದ ಕಥಾಹಂದರದ ಬಗ್ಗೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಒಂದಾದ ಬಳಿಕ ಒಂದರಂತೆ ಪೋಸ್ಟ್ ಶೇರ್ ಮಾಡಿಕೊಳ್ಳೋ ಮೂಲಕ ​ರೂಪೇಶ್​ ಶೆಟ್ಟಿ ಫ್ಯಾನ್ಸ್​ ಕ್ಯೂರಿಯಾಸಿಟಿ ಬಿಲ್ಡ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಾನು ತುಳುನಾಡಿನವ, ತುಳು ಸಿನಿಮಾ ಮಾಡುತ್ತಿರುವುದು ಹೆಮ್ಮೆಯ ಕ್ಷಣ: ಜೈ ಶೂಟಿಂಗ್​ ಆರಂಭಿಸಿದ ಸುನೀಲ್​ ಶೆಟ್ಟಿ

ಇತ್ತೀಚೆಗೆ ಚಿತ್ರತಂಡ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸುನೀಲ್​ ಶೆಟ್ಟಿ, ''ಇದು ನನ್ನ ಚೊಚ್ಚಲ ತುಳು ಚಿತ್ರ. ತುಳು ಚಿತ್ರರಂಗದವರು ತುಳು ಸಿನಿಮಾದಲ್ಲಿ ಅಭಿನಯಿಸಬೇಕೆಂದು ನನ್ನಲ್ಲಿ ನಿರಂತರವಾಗಿ ಕೇಳುತ್ತಾ ಬಂದಿದ್ದರು. ಆದ್ರೆ ಸೂಕ್ತ ಸಮಯ ಒದಗಿ ಬಂದಿರಲಿಲ್ಲ. ಇದೀಗ ರೂಪೇಶ್​ ಶೆಟ್ಟಿ ಅವರ ಜೈ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸುತ್ತಿದ್ದೇನೆ.‌ ಪೂರ್ಣ ಪ್ರಮಾಣದ ತುಳು ಕಾಮಿಡಿ ಸಿನಿಮಾ ಮಾಡುವ ಆಸೆ ಇದೆ'' ಎಂದು ತಿಳಿಸಿದ್ದರು.

ಇದನ್ನೂ ಓದಿ: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ: ವಿಜೇತರಿಗೆ ಸಿಗುವ ಹಣವೆಷ್ಟು? ಗೆಲುವು ಯಾರಿಗೆ? ಈವೆಂಟ್​ ಡೀಟೆಲ್ಸ್

ಮಂಗಳೂರು ತಲುಪಿದ ದಿನ ಏರ್​ಪೋರ್ಟ್​​ನಲ್ಲಿ ತುಳು ಭಾಷೆಯಲ್ಲೇ ಮಾತನಾಡಿದ್ದ ಸುನೀಲ್​ ಶೆಟ್ಟಿ, ''ಬಹಳ ಖುಷಿಯಾಗುತ್ತಿದೆ. ಇದು ನನ್ನ ಮೊದಲ ತುಳು ಸಿನಿಮಾ. ತುಳು ಚಿತ್ರರಂಗದಲ್ಲಿ ಬಹಳ ಬೆಳವಣಿಗೆಗಳಾಗಿವೆ. ಈ 'ಜೈ' ಪ್ರಾಜೆಕ್ಟ್​ ಬಗ್ಗೆ ನಟ ರೂಪೇಶ್​ ನನ್ನಲ್ಲಿ ತಿಳಿಸಿದ್ರು. ಸಬ್ಜೆಕ್ಟ್​ ಕೇಳಿದಾಗ ಸಿನಿಮಾ ಮಾಡಲೇಬೇಕು ಎಂದನಿಸಿತು'' ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.