ಕರ್ನಾಟಕ

karnataka

ETV Bharat / entertainment

'ಸಂಜು ವೆಡ್ಸ್ ಗೀತಾ' ಸಕ್ಸಸ್ ಸೀಕ್ರೆಟ್ ಹಾದಿಯಲ್ಲಿ ನಿರ್ದೇಶಕ ನಾಗಶೇಖರ್: ಚಿತ್ರತಂಡ ಹೇಳಿದ್ದಿಷ್ಟು - Sanju Weds Geetha 2 - SANJU WEDS GEETHA 2

'ಸಂಜು ವೆಡ್ಸ್ ಗೀತಾ ಸೀಕ್ವೆಲ್​​' ಬಹುತೇಕ ಮುಕ್ತಾಯ ಹಂತದಲ್ಲಿದೆ.

Sanju Weds Geetha 2 team
ಗಿಡ ನೆಟ್ಟ 'ಸಂಜು ವೆಡ್ಸ್ ಗೀತಾ ಸೀಕ್ವೆಲ್​​' ಚಿತ್ರತಂಡ (ETV Bharat)

By ETV Bharat Karnataka Team

Published : Jul 19, 2024, 9:07 PM IST

ಸಿನಿಮಾ ಬಗ್ಗೆ ನಿರ್ದೇಶಕ ನಾಗಶೇಖರ್ ಮಾತು.... (ETV Bharat)

2011ರಲ್ಲಿ ಕನ್ನಡ ಚಿತ್ರರಂಗದಲ್ಲಿ ಬಂದ 'ಸಂಜು ವೆಡ್ಸ್ ಗೀತಾ' ಸೂಪರ್​ ಹಿಟ್​ ಆಗಿತ್ತು. ಒಂದೊಳ್ಳೆ ಕಥೆ ಹಾಗೂ ರೊಮ್ಯಾಟಿಂಕ್ ಹಾಡುಗಳನ್ನು ಹೊಂದಿದ್ದ ಈ ಸಿನಿಮಾ ನಿರ್ದೇಶಕ ನಾಗಶೇಖರ್, ನಟ ಶ್ರೀನಗರ ಕಿಟ್ಟಿ ಮತ್ತು ಮೋಹಕ ತಾರೆ ರಮ್ಯಾ ಅವರಿಗೆ ಸ್ಟಾರ್​ಡಮ್ ತಂದು ಕೊಟ್ಟಿತ್ತು. ಇದರ ಸೀಕ್ವೆಲ್​​ ಬಿಡುಗಡೆಗೆ ಸಜ್ಜಾಗುತ್ತಿದ್ದು, ಸ್ಯಾಂಡಲ್​ವುಡ್​ನಿಂದ ಟಾಲಿವುಡ್​ವರೆಗೆ ಟಾಕ್ ಆಗುತ್ತಿದೆ.

ಈಗಾಗಲೇ ಸಕ್ಸಸ್​ಫುಲ್ ನಿರ್ದೇಶಕ ಅಂತಾ ಕರೆಸಿಕೊಂಡಿರುವ ನಾಗಶೇಖರ್ ಈ ಬಾರಿ ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ನವ ಸಂಜು ಹಾಗೂ ಗೀತಾ ಜೋಡಿಯ ನವೀನ ಪ್ರೇಮಕಥೆ ಹೇಳಲು ಹೊರಟಿದ್ದಾರೆ. ಶ್ರೀನಗರ ಕಿಟ್ಟಿ ಜೊತೆ ಸ್ಯಾಂಡಲ್​ವುಡ್​ನ ಮೋಹಕತಾರೆ ರಮ್ಯಾ ಬದಲು ಡಿಂಪಲ್​ ಕ್ವೀನ್​​ ರಚಿತಾ ರಾಮ್ ಅವರು ಗೀತಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

ಅದ್ಧೂರಿ ಮೇಕಿಂಗ್ ನಿಂದ ಟಾಕ್ ಆಗುತ್ತಿರುವ ಸಂಜು ವೆಡ್ಸ್ ಗೀತಾ 2 ಸಿನಿಮಾ ಅದ್ಭುತ ಪ್ರೇಮಕಾವ್ಯದ ಜೊತೆಗೆ ನಮ್ಮ ಮಣ್ಣಿನ ರೈತರ ಬಗೆಗಿನ ಕಥೆಯನ್ನು ಒಳಗೊಂಡಿದೆ. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿದಿದೆ. ಸದ್ಯ ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಕ್ಲೈಮಾಕ್ಸ್ ಆ್ಯಕ್ಷನ್ ಸಿಕ್ವೇನ್ಸ್ ಅನ್ನು ಚಿತ್ರೀಕರಣ ಮಾಡಲಾಗುತ್ತಿದೆ. 50 ಫೈಟರ್​ಗಳ ಜೊತೆ ಶ್ರೀನಗರ ಕಿಟ್ಟಿ ಫೈಟ್ ಮಾಡುವ ಸನ್ನಿವೇಶ ಅದು. ಸ್ಟಂಟ್ ಮಾಸ್ಟರ್ ಡಿಫ್ರೆಂಟ್ ಡ್ಯಾನಿ ಈ ಆ್ಯಕ್ಷನ್ ಸೀಕ್ವೆನ್ಸ್​​​ನ ಜವಾಬ್ದಾರಿ ಹೊತ್ತಿದ್ದಾರೆ.

ನಿರ್ದೇಶಕ ನಾಗಶೇಖರ್ ಮಾತನಾಡಿ, ಶೇ.90 ರಷ್ಟು ಭಾಗದ ಶೂಟಿಂಗ್ ಮುಗಿದಿದೆ. ಇಂದಿನ ಕ್ಲೈಮ್ಯಾಕ್ಸ್ ಜೊತೆಗೆ ಒಂದು ಹಾಡು ಬಾಕಿ ಇದೆ. ಸಂಜು ವೆಡ್ಸ್ ಗೀತಾ ಚಿತ್ರದಂತೆ ಈ ಸೀಕ್ವೆಲ್​​ ಕೂಡಾ ಮೂಡಿ ಬರುತ್ತಿದೆ. ಸಾಮಾನ್ಯವಾಗಿ ಸ್ವಿಡ್ಜರ್ಲ್ಯಾಂಡ್​ನ ಒಂದು ಅಥವಾ ಎರಡು ಲೋಕೇಶನ್​​ಗಳಲ್ಲಿ ಕೆಲ ಸಿನಿಮಾಗಳ ಶೂಟಿಂಗ್ ಮಾಡಿರುತ್ತಾರೆ. ನಾವು ಸಿನಿಮಾ ಕಂಟೆಂಟ್​​ಗೋಸ್ಕರ 11 ಕಡೆ ಚಿತ್ರೀಕರಣ ಮಾಡಿದ್ದೇವೆ. ನಾನು ಸಂಜು ವೆಡ್ಸ್ ಗೀತಾ ಚಿತ್ರ ಆರಂಭಕ್ಕೂ ಮುನ್ನ ಒಂದು ಗಿಡ ನೆಟ್ಟಿದ್ವಿ. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಅದೇ ಹಾದಿಯಲ್ಲೇ ಎಂದರೆ ಸಂಜು ವೆಡ್ಸ್ ಗೀತಾ 2 ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯ ಹಂತ ತಲುಪಿದೆ. ನಿರ್ಮಾಪಕರ ಆಸೆಯಂತೆ ಒಂದು ಗಿಡ ನೆಟ್ಟು ಶೂಟಿಂಗ್ ಮುಗಿಸುತ್ತಿದ್ದೇವೆ. ಇದು ನಮ್ಮ ಸಿನಿಮಾ ಸಕ್ಸಸ್ ಸೀಕ್ರೆಟ್ ಎಂದು ತಿಳಿಸಿದರು.

ಸಿನಿಮಾ ಬಗ್ಗೆ ನಟ ಶ್ರೀನಗರ ಕಿಟ್ಟಿ ಮಾತು.... (ETV Bharat)

ನಟ ಶ್ರೀನಗರ ಕಿಟ್ಟಿ ಮಾತನಾಡಿ, ಕ್ಲೈಮ್ಯಾಕ್ಸ್ ಚಿತ್ರದ ಆ್ಯಕ್ಷನ್ ಸನ್ನಿವೇಶವನ್ನು ಚಿತ್ರೀಕರಿಸುತ್ತಿದ್ದೇವೆ. ಈಗಾಗ್ಲೇ ಸಂಜು ವೆಡ್ಸ್ ಗೀತಾ 2 ಚೆನ್ನಾಗಿ ಮೂಡಿ ಬಂದಿದೆ. ಆ ಸಂಜು ಮಡಿಕೇರಿಯವನಾಗಿದ್ದ. ಈ ಸಂಜುನದ್ದು ಯೂನಿವರ್ಸಲ್ ಕಥೆ. ಒಂದು ಪ್ರೇಮಕಾವ್ಯದ ಜೊತೆಗೆ ಸಮಾಜಕ್ಕೆ ಒಂದು ಮೆಸೇಜ್ ಇದೆ. ಸಿಲ್ಕ್ ಬಗ್ಗೆ ಬೆಳಕು ಚೆಲ್ಲುತ್ತದೆ. ರಮ್ಯಾ ಸ್ವಲ್ಪ ಬ್ಯುಸಿ ಇರುವ ಕಾರಣ ರಚಿತಾ ರಾಮ್ ಅವರನ್ನು ಈ ಸಿನಿಮಾಗೆ ಆಯ್ಕೆ ಮಾಡಿದೆವು. ರಚಿತಾ ರಾಮ್ ಅವರು ಗೀತಾಳಾಗಿ ಸಿನಿ ಪ್ರೇಕ್ಷಕರ ಮನಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡಿ, ನಮ್ಮ ಸಿನಿಮಾ ಜೊತೆಗೆ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಕಂಟೆಂಟ್ ಚೆನ್ನಾಗಿದ್ರೆ ಜನರು ಥಿಯೇಟರ್​ಗೆ ಬರ್ತಾರೆ. ಆ ರೀತಿಯ ಕಥೆ ಈ ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿದೆ. ಸಿನಿಮಾ ಚೆನ್ನಾಗಿ ಬಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಅಮೀರ್​, ಸಮಂತಾ, ಕಮಲ್ ಹಾಸನ್​, ಧನುಷ್​​...! ವಿಚ್ಛೇದನ ಪಡೆದ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿ ಹೀಗಿದೆ! - Divorced Celebrities list

ರಚಿತಾ ರಾಮ್ ಜೊತೆ ಶ್ರೀನಗರ ಕಿಟ್ಟಿ ರೊಮ್ಯಾನ್ಸ್ ಮಾಡಿದ್ದಾರೆ. ಇವರೊಂದಿಗೆ ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೇ ಖಳನಟ ಸಂಪತ್ ಕುಮಾರ್ ಸೇರಿದಂತೆ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ.

ಇದನ್ನೂ ಓದಿ:Watch.. ಮದುವೆ ಯಾವಾಗ? ನಟಿ ಶ್ರದ್ಧಾ ಕಪೂರ್ ಕೊಟ್ಟ ಉತ್ತರವಿದು - Shraddha Kapoor Marriage

ಪವಿತ್ರಾ ಇಂಟರ್ ನ್ಯಾಷನಲ್ ಮೂವಿಮೇಕರ್ಸ್ ಅಡಿಯಲ್ಲಿ ನಿರ್ಮಾಪಕ ಛಲವಾದಿ ಕುಮಾರ್ ಈ ಚಿತ್ರವನ್ನು ಅದ್ಧೂರಿ ಬಜೆಟ್​ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ‌ ಶ್ರೀಧರ ವಿ.ಸಂಭ್ರಮ 5 ಸುಂದರ ಹಾಡುಗಳನ್ನು ಮಾಡಿದ್ದು, ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ಹಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಯಲ್ಲಿ ಸಂಜು ವೆಡ್ಸ್ ಗೀತಾ 2 ಅನ್ನು ದಸರಾ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ.

ABOUT THE AUTHOR

...view details