ಸಮಂತಾ ರುತ್ ಪ್ರಭು, ಸೌತ್ ಸಿನಿಮಾ ಇಂಡಷ್ಟ್ರಿಯ ಟಾಪ್ ಹೀರೋಯಿನ್. ಆದ್ರೆ ಸದ್ಯ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದಾರೆ. ಶೀಘ್ರದಲ್ಲೇ ಕೆಲಸಕ್ಕೆ ಮರಳಲಿರುವ ಶಾಕುಂತಲಂ ನಟಿ, ಆಗಾಗ್ಗೆ ಸಂದರ್ಶನಗಳಲ್ಲಿ ಭಾಗಿಯಾಗೋದ್ರಿಂದ ಹಿಡಿದು ಪ್ರತಿಷ್ಠಿತ ಸಮಾರಂಭಗಳಿಗೆ ಸಾಕ್ಷಿ ಆಗೋ ಮೂಲಕ ಜನಮನದಲ್ಲಿ ಉಳಿದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆ ವಿಚಾರದಲ್ಲೂ ತುಸು ಮುಂದೆ ಎನ್ನಬಹುದು.
ಹೀಗೆ ನಟಿ ಸಮಂತಾ ರುತ್ ಪ್ರಭು ಸಂದರ್ಶನವೊಂದರಲ್ಲಿ, ಅಲ್ಲು ಅರ್ಜುನ್ ಮುಖ್ಯಭೂಮಿಕೆಯ 'ಪುಷ್ಪ' ಚಿತ್ರದ ಹಿಟ್ ಸಾಂಗ್ ಊ ಅಂಟಾವಾ ಮತ್ತು ದಿ ಫ್ಯಾಮಿಲಿ ಮ್ಯಾನ್ 2 ಸರಣಿಯಲ್ಲಿನ ಸವಾಲಿನ ಪಾತ್ರದಲ್ಲಿ ನಟಿಸೋ ಹಿಂದಿದ್ದ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ. ಈ ಅನುಭವಗಳು ತಮ್ಮ ವೈಯಕ್ತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ಬೀರಿವೆ ಎಂಬುದನ್ನು ಒಪ್ಪಿಕೊಂಡರು.
ಸಂದರ್ಶನದಲ್ಲಿ ಸಮಂತಾ, ದಿ ಫ್ಯಾಮಿಲಿ ಮ್ಯಾನ್ 2 ಮತ್ತು ಊ ಅಂಟಾವಾದಲ್ಲಿನ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಯಾವುದೇ ಹೊರಗಿನ ಪ್ರಭಾವಗಳಿಲ್ಲದೇ ಕೆಲಸ ಮಾಡುವುದರಿಂದ ಅನುಕೂಲಗಳು ಮತ್ತು ತಪ್ಪುಗಳನ್ನು ಮಾಡುವುದರ ಪ್ರಾಮುಖ್ಯತೆಯನ್ನು ತಿಳಿಸಿದರು. ಏಕೆಂದರೆ ಈ ವಿಚಾರಗಳಿಂದ ಕಲಿಯುವುದು ಸಾಕಷ್ಟಿದೆ ಎಂದು ನಟಿ ತಿಳಿಸಿದ್ದಾರೆ.
ಇದನ್ನೂ ಓದಿ:ಮೊದಲ ದಿನವೇ ₹ 4 ಕೋಟಿ ವ್ಯವಹಾರ ನಡೆಸಿದ 'ಯೋಧ': ಸಿದ್ಧಾರ್ಥ್ ಮಲ್ಹೋತ್ರಾ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ
ಸೆಲ್ಫ್ ಇಮೇಜ್ ಮತ್ತು ಲೈಂಗಿಕತೆ ನಡುವಿನ ತಮ್ಮ ಹೋರಾಟದ ಬಗ್ಗೆಯೂ ಮಾತನಾಡಿದ್ದಾರೆ. ತಮ್ಮ ನಟನಾ ಸಾಮರ್ಥ್ಯದ ವಿಭಿನ್ನ ಅಂಶವನ್ನು ಅನ್ವೇಷಿಸೋ ಸಲುವಾಗಿ ಊ ಅಂಟಾವಾ ಹಾಡಿನಲ್ಲಿ ಬಣ್ಣ ಹಚ್ಚಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಅಭದ್ರತಾ ಭಾವನೆಗಳನ್ನೂ ಒಪ್ಪಿಕೊಂಡಿದ್ದಾರೆ. "ಯಾವಾಗಲೂ ನನ್ನ ಲೈಂಗಿಕತೆಯ (sexuality) ಬಗ್ಗೆ ಅನ್ಕಂಫರ್ಟೆಬಲ್ ಆಗಿದ್ದೆ. ನಾನು ಕಂಫರ್ಟೆಬಲ್ ಅಥವಾ ಕಾನ್ಫಿಡೆಂಟ್ ಆಗಿರಲಿಲ್ಲ. ನಾನು ಸುಂದರವಾಗಿಲ್ಲ, ನಾನು ಇತರೆ ಹುಡುಗಿಯರಂತೆ ಕಾಣುವುದಿಲ್ಲ ಎನ್ನುವಂತಹ ವಾತಾವರಣದಲ್ಲಿದ್ದೆ'' ಎಂದು ತಿಳಿಸಿದರು.
ಇದನ್ನೂ ಓದಿ:ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅನಾರೋಗ್ಯದ ವದಂತಿ: ಸ್ಪಷ್ಟನೆ ನೀಡಿದ ಬಿಗ್ ಬಿ
ತಮ್ಮ ಆರಂಭಿಕ ಭಯದಿಂದ ಹೊರಬಂದು, ಎದುರಾದ ಸವಾಲುಗಳನ್ನು ಸ್ವೀಕರಿಸಿದರು. ವೃತ್ತಿಪರ ಮತ್ತು ವೈಯಕ್ತಿಕವಾಗಿ ಬೆಳವಣಿಗೆಗಿರುವ ಅವಕಾಶಗಳನ್ನು ಗುರುತಿಸಿದರು. 'ಸೆಕ್ಸಿ'ಯಾಗಿ ಚಿತ್ರಿಸುವುದು ತಮ್ಮ ವಿಷಯವಲ್ಲ ಎಂಬುದನ್ನು ಒಪ್ಪಿಕೊಂಡರೂ, ಅಡೆತಡೆಗಳನ್ನು ನೇರವಾಗಿ ಎದುರಿಸುವ ಮತ್ತು ತಮ್ಮ ಅಭದ್ರತೆಯನ್ನು ಜಯಿಸುವ ತಮ್ಮ ಬದ್ಧತೆಯನ್ನು ಈ ಸಂದರ್ಶನದಲ್ಲಿ ಒಪ್ಪಿಕೊಂಡರು. ಸಿನಿಮಾ ವಿಚಾರ ಗಮನಿಸೋದಾದರೆ, 'ಸಿಟಾಡೆಲ್' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಪ್ರೊಜೆಕ್ಟ್ನಲ್ಲಿ ಇದೇ ಮೊದಲ ಬಾರಿಗೆ ಬಾಲಿವುಡ್ ಸ್ಟಾರ್ ವರುಣ್ ಧವನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.