ಟಾಲಿವುಡ್ ನಟ ಸಾಯಿ ಧರಂ ತೇಜ್ ಅವರು ಸಂಬಂಧಿ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅನ್ಫಾಲೋ ಮಾಡಿದ್ದು, ತೀವ್ರ ಚರ್ಚೆಗೆ ಗುರಿಯಾಗಿದೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಸಂಬಂಧಿ, ನಟಿ ನಿಹಾರಿಕಾ ಕೊನಿಡೇಲಾ ತಿಳಿಸಿದ್ದಾರೆ.
ಸಿನಿಮಾ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ನಿಹಾರಿಕಾ ಅವರಿಗೆ ಸುದ್ದಿಗಾರರಿಂದ ಈ ಬಗ್ಗೆ ಪ್ರಶ್ನೆಗಳು ಎದುರಾಗಿವೆ. ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ನಟಿ ಈ ವಿಷಯಗಳ ಬಗ್ಗೆ ತನಗೇನೂ ಗೊತ್ತಿಲ್ಲ. ಅದಕ್ಕೆ ಅವರದ್ದೇ ಆದ ಕಾರಣಗಳಿರಬಹುದು ಎಂದು ತಿಳಿಸಿದ್ದಾರೆ.
ಟಾಲಿವುಡ್ನ ಮೆಗಾಸ್ಟಾರ್ ಕುಟುಂಬ ಭಾರತೀಯ ಚಿತ್ರರಂದಲ್ಲಿ ದೊಡ್ಡ ಹೆಸರು ಮಾಡಿದೆ. ಅಪ್ಪ ಮಕ್ಕಳಿಂದ ಹಿಡಿದು ಹೆಚ್ಚಿನವರು ಚಿತ್ರರಂದಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ತಮ್ಮದೇ ಆದ ಬೇಡಿಕೆ, ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕುಟುಂಬದೊಳಗೆ ಅತ್ಯುತ್ತಮ ಭಾಂದವ್ಯ ಹೊಂದಿದ್ದು, ಆಗಾಗ್ಗೆ ಅದು ಸಭೆ - ಸಮಾರಂಭಗಳಲ್ಲಿ ಗೋಚರಿಸುತ್ತದೆ. ಇವರ ಕಸಿನ್ಸ್ ತಂಡದ ಹಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ. ಆದ್ರೀಗ ಸಾಯಿ ಧರಂ ತೇಜ್ ಮತ್ತು ಅಲ್ಲು ಅರ್ಜುನ್ ನಡುವೆ ಏನಾಗಿದೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಸಾಯಿ ಧರಂ ತೇಜ್ ಅವರು ಸಂಬಂಧಿ ಅಲ್ಲು ಅರ್ಜುನ್ ಅವರನ್ನು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಅನ್ಫಾಲೋ ಮಾಡಿದ್ದಾದರೂ ಏಕೆ ಎಂಬ ಪ್ರಶ್ನೆ ನೆಟ್ಟಿಗರನ್ನು ಕಾಡುತ್ತಿದೆ.