ಕರ್ನಾಟಕ

karnataka

ETV Bharat / entertainment

ವಿಶ್ವಮಟ್ಟದಲ್ಲಿ ಮನ್ನಣೆ ಗಳಿಸುತ್ತಿದೆ ರೂಪಾ ರಾವ್ ನಿರ್ಮಾಣದ 'ಕೆಂಡ' ಚಿತ್ರ - Kenda Movie - KENDA MOVIE

ನ್ಯೂಯಾರ್ಕ್‍ನ ಟಿಶ್ ಸ್ಕೂಲ್ ಆಫ್ ಆರ್ಟ್‍ನಲ್ಲಿ ಇಂದು ಕನ್ನಡದ 'ಕೆಂಡ' ಚಿತ್ರ ಪ್ರದರ್ಶನಗೊಳ್ಳಲಿದೆ.

Kenda team
ವಿಶ್ವಮಟ್ಟದಲ್ಲಿ 'ಕೆಂಡ' ಸಿನಿಮಾ ಸದ್ದು (ETV Bharat)

By ETV Bharat Karnataka Team

Published : Jun 28, 2024, 10:17 AM IST

ಕಂಟೆಂಟ್​ ಗಟ್ಟಿಯಾಗಿದ್ದರೆ ಹೆಚ್ಚಿನ ಪ್ರಚಾರವಿಲ್ಲದೆಯೂ ಚಿತ್ರವೊಂದು ಸದ್ದು ಮಾಡಬಲ್ಲದು. ಈ ಮಾತಿಗೆ ಉದಾಹರಣೆಯಂತೆ ಅನೇಕ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುವ ಜೊತೆಗೆ ದೊಡ್ಡ ಮಟ್ಟದಲ್ಲಿ ಗೆದ್ದಿವೆ. ಆ ಸಾಲಿಗೆ 'ಗಂಟುಮೂಟೆ' ಖ್ಯಾತಿಯ ರೂಪಾ ರಾವ್ ನಿರ್ಮಾಣದ 'ಕೆಂಡ' ಸಿನಿಮಾ ಸೇರಿದೆ.

ಸಹದೇವ್ ಕೆಲವಡಿ ನಿರ್ದೇಶನದ ಈ ಚಿತ್ರ ಹೆಜ್ಜೆ ಹೆಜ್ಜೆಗೂ ಸುದ್ದಿಯಲ್ಲಿದೆ. ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡ ಕೆಂಡ ಚಿತ್ರ, ಹಲವು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಮಾರ್ಟಿನ್ ಸ್ಕಾರ್ಸೆಸೆ, ಆಂಗ್ ಲೀ, ಜಿಮ್ ಜರ್ಮುಷ್, ಸ್ಟೈಕ್ ಲೀ, ಕೋಯೆನ್ ಬ್ರದರ್ಸ್ ಮುಂತಾದ ಘಟಾನುಘಟಿ ನಿರ್ದೇಶಕರಿಗೆ ತರಬೇತಿ ಕೊಟ್ಟಿರುವ ನ್ಯೂಯಾರ್ಕ್‍ನ ಟಿಶ್ ಸ್ಕೂಲ್ ಆಫ್ ಆರ್ಟ್‍ನಲ್ಲಿ ಇಂದು ಪ್ರದರ್ಶನಗೊಳ್ಳಲಿದೆ.

ರೂಪಾ ರಾವ್ ನಿರ್ಮಾಣದ 'ಕೆಂಡ' ಚಿತ್ರ (ETV Bharat)

ಕನ್ನಡದಲ್ಲಿ ತಯಾರುಗೊಂಡಿದ್ದ ಈ ಚಿತ್ರವೀಗ ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ. ಕನ್ನಡದ ತಿಥಿ ಸಿನಿಮಾದ ಹಾದಿಯಲ್ಲಿ ಮುಂದುವರೆದು, ನಾಳೆ ಸ್ವಿಟ್ಜರ್ಲ್ಯಾಂಡ್ ನಲ್ಲಿ ಕೂಡ ಕೆಂಡ ಪ್ರದರ್ಶನಗೊಳ್ಳಲಿದೆ. ಇದೇನು ಸಲೀಸಾದ ಹಾದಿಯಲ್ಲ. ತನ್ನ ಕಂಟೆಂಟಿನ ಕಾರಣದಿಂದಲೇ ಇವೆಲ್ಲವೂ ಸಾಧ್ಯವಾಗಿದೆ. ನ್ಯೂಯಾರ್ಕ್‍ನ ಟಿಶ್ ಸ್ಕೂಲ್ ಆಫ್ ಆರ್ಟ್‍ನಲ್ಲಿ ಪ್ರದರ್ಶನ ಕಾಣುವ ಮೊಟ್ಟ ಮೊದಲ ಕನ್ನಡ ಚಿತ್ರವಾಗಿಯೂ ಕೆಂಡ ದಾಖಲೆ ಬರೆಯಲಿದೆ.

ಕೆಂಡ ಚಿತ್ರತಂಡ (ETV Bharat)

ಇದನ್ನೂ ಓದಿ:ಅಬ್ಬಬ್ಬಾ!; 'ಕಲ್ಕಿ' ಕಲೆಕ್ಷನ್​​​ ₹180 ಕೋಟಿ: ಕೆಜಿಎಫ್​ 2, ಜವಾನ್ ಸೇರಿ ಹಿಟ್ ಸಿನಿಮಾಗಳ​ ದಾಖಲೆಗಳೆಲ್ಲಾ ಉಡೀಸ್ - Kalki 2898 AD Collection

ಈ ಹಿಂದೆ ದಾದಾ ಸಾಹೇಬ್ ಫಾಲ್ಕೆ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ಈ ಚಿತ್ರ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಜ್ಯೂರಿ ಅವಾರ್ಡ್ ಅನ್ನು ಪಡೆದುಕೊಂಡಿತ್ತು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಕಾಣುವ ಮೂಲಕ ಮತ್ತೊಂದು ದಾಖಲೆ ಕೆಂಡದ ಖಾತೆಗೆ ಜಮೆಯಾಗಿದೆ. ಗಂಟುಮೂಟೆ ಎಂಬ ಚಿತ್ರ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ರೂಪಾ ರಾವ್ ಕೆಂಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬದುಕಿಗೆ ಹತ್ತಿರಾದ, ಬರಿಗಣ್ಣಿಗೆ ನಿಲುಕದ ಸೂಕ್ಷ್ಮ ಕಥಾನಕದೊಂದಿಗೆ ಸಹದೇವ್ ಕೆಲವಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:'ಒಂದು ಮೊಟ್ಟೆಯ ಕಥೆ'ಯೊಂದಿಗೆ ರಾಜ್ ಬಿ ಶೆಟ್ಟಿ 'ರೂಪಾಂತರ': ಸದ್ಯದಲ್ಲೇ ಹೊಸ ಸಿನಿಮಾ ನಿಮ್ಮ ಮುಂದೆ - Roopantara

ಚಿತ್ರದಲ್ಲಿ ರಂಗಭೂಮಿ ಕಲಾವಿದರಾದ ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ ಮುಂತಾದವರ ತಾರಾಗಣವಿದೆ. ಚಿತ್ರವನ್ನು ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರ್​​ನಡಿಯಲ್ಲಿ ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೆಂಡ ಶೀಘ್ರದಲ್ಲೇ ತೆರೆಕಾಣಲಿದೆ. ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶನ, ಪ್ರದೀಪ್ ನಾಯಕ್ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಅವರ ಕಲಾ ನಿರ್ದೇಶನವಿದೆ.

ABOUT THE AUTHOR

...view details