ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಹಾಗೂ ಕೆಜಿಎಫ್ ಸ್ಟಾರ್ ಯಶ್ ಭಾನುವಾರ, (ನವೆಂಬರ್ 10) ಮುಂಬೈನ ವರ್ಸೋವಾ ಬೀಚ್ ಬಳಿ ಕಾಣಿಸಿಕೊಂಡರು. ಸ್ಟಾರ್ ಕಲಾವಿದರು ಕ್ಯಾಶುಯಲ್ ಔಟ್ಫಿಟ್ನಲ್ಲಿ ಕಂಡುಬಂದರು. ಬಿಗಿ ಭದ್ರತೆ ನಡುವೆ ತಾರೆಯರು ದೋಣಿಯಲ್ಲಿ ಸಾಗುತ್ತಿರುವ ದೃಶ್ಯ ಸೆರೆಯಾಗಿದೆ. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸತ್ಯಪ್ರೇಮ್ ಕಿ ಕಥಾ ನಟಿ ಕಿಯಾರಾ ಅಡ್ವಾಣಿ ಬ್ಲ್ಯಾಕ್ ಜಿಮ್ ಪ್ಯಾಂಟ್ ಮತ್ತು ವೈಟ್ ಫಿಟ್ ಜಾಕೆಟ್ ಧರಿಸಿದ್ದರು. ಸ್ಪೋರ್ಟ್ಸ್ ಶೂ, ಸನ್‌ಗ್ಲಾಸ್‌ಗಳೊಂದಿಗೆ ತಮ್ಮ ನೋಟ ಬೀರಿದರು. ಕ್ಯಾಶುವರ್ ವೇರ್ ಆಗಿದ್ದರೂ ನಟಿ ಎಂದಿನಂತೆ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ. ಬಾಲಿವುಡ್ ನಟಿ 'ಟಾಕ್ಸಿಕ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಬಹಳ ದಿನಗಳಿಂದಲೂ ಇದ್ದು, ಅಧಿಕೃತ ಘೋಷಣೆಯನ್ನು ನಿರೀಕ್ಷಿಸಲಾಗಿದೆ.
ಸೌತ್ ಸೂಪರ್ ಸ್ಟಾರ್ ಯಶ್ ಕೂಡಾ ಕಾಣಿಸಿಕೊಂಡಿದ್ದಾರೆ. ಬೂದು ಬಣ್ಣದ ಟಿ-ಶರ್ಟ್ , ಬ್ಲ್ಯಾಕ್ ಡೆನಿಮ್, ಬ್ಲ್ಯಾಕ್ ಫೇಸ್ ಮಾಸ್ಕ್, ಸನ್‌ಗ್ಲಾಸ್‌ನೊಂದಿಗೆ ಸಖತ್ ಸ್ಟೈಲಿಶ್ ಲುಕ್ನಲ್ಲಿ ಕಂಡುಬಂದರು. ಫೇಸ್ ಮಾಸ್ಕ್ ಧರಿಸಿದ್ದ ರಾಕಿ ಭಾಯ್ ಸುತ್ತ ಬಿಗಿ ಭದ್ರತೆಯಿತ್ತು. ಸೌತ್ನಲ್ಲೂ ಸಕ್ರಿಯರಾಗಿರುವ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಮತ್ತು ತಮ್ಮ ತಂಡದ ಜೊತೆ ಬೋಟ್ ಒಳಗೆ ಹೋಗುತ್ತಿರುವುದು ಕಂಡುಬಂದಿದೆ.
ಕಿಯಾರಾ ಅಡ್ವಾಣಿ ಕೊನೆಯದಾಗಿ ಬಾಲಿವುಡ್ ಸ್ಟಾರ್ ಹೀರೋ ಕಾರ್ತಿಕ್ ಆರ್ಯನ್ ಜೊತೆ 'ಸತ್ಯಪ್ರೇಮ್ ಕಿ ಕಥಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಶೀಘ್ರದಲ್ಲೇ ಆರ್ಆರ್ಆರ್ ಸ್ಟಾರ್ ರಾಮ್ ಚರಣ್ ಅವರೊಂದಿಗೆ 'ಗೇಮ್ ಚೇಂಜರ್' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಅನಾವರಣಗೊಂಡಿದ್ದು, ಸಿನಿಮಾ ನೋಡುವ ಪ್ರೇಕ್ಷಕರ ಕುತೂಹಲ ದುಪ್ಪಟ್ಟಾಗಿದೆ. ಈ ಸಾಹಸಮಯ ಸಿನಿಮಾ ಜನವರಿ 10 ರಂದು ಬಿಡುಗಡೆ ಆಗಲಿದೆ.