ಕರ್ನಾಟಕ

karnataka

ETV Bharat / entertainment

ನಟಿ ಶ್ರೀಲೀಲಾ ಜನ್ಮದಿನ: ರಾಬಿನ್ ಹುಡ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ - Srileela Birthday - SRILEELA BIRTHDAY

ನಟಿ ಶ್ರೀಲೀಲಾ ಜನ್ಮದಿನದ ಪ್ರಯುಕ್ತ 'ರಾಬಿನ್ ಹುಡ್' ಸಿನಿಮಾದ ನಿರ್ಮಾಪಕರು ತಮ್ಮ ಚಿತ್ರದ ನಾಯಕಿಯನ್ನು ಘೋಷಿಸಿದ್ದಾರೆ. ನಟ ನಿತಿನ್‌ ಜತೆಗೆ ಜೋಡಿಯಾಗಿ ಶ್ರೀಲೀಲಾ ಈ ಚಿತ್ರದಲ್ಲಿ ನಟಿಸುತ್ತಿದ್ದು, ಅವರ ಫಸ್ಟ್ ಲುಕ್ ಸಹ ಬಿಡುಗಡೆ ಮಾಡಲಾಗಿದೆ.

SRILEELA BIRTHDAY
ನಟಿ ಶ್ರೀಲೀಲಾ (Robinhood film)

By ETV Bharat Karnataka Team

Published : Jun 15, 2024, 8:16 PM IST

ತೆಲುಗಿನ ಯುವ ನಟ ನಿತಿನ್ ಅಭಿನಯದ ಬಹುನಿರೀಕ್ಷಿತ 'ರಾಬಿನ್ ಹುಡ್​​' ಚಿತ್ರಕ್ಕೆ ಕಿಸ್ ಸುಂದರಿ ಶ್ರೀಲೀಲಾ ನಾಯಕಿ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಎಕ್ಸ್ ಅರ್ಡಿನರಿ ಮ್ಯಾನ್' ಚಿತ್ರದ ಮೂಲಕ ಮೋಡಿ ಮಾಡಿದ್ದ ನಿತಿನ್ ಹಾಗೂ ಶ್ರೀಲೀಲಾ ಮತ್ತೆ ಒಂದಾಗಿದ್ದಾರೆ. ಇಂದು ಶ್ರೀಲೀಲಾ ಹುಟ್ಟುಹಬ್ಬ. ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಚಿತ್ರತಂಡ ಸಣ್ಣ ವಿಡಿಯೋ ಮೂಲಕ ಅವರನ್ನು 'ರಾಬಿನ್ ಹುಡ್' ಬಳಗಕ್ಕೆ ಸ್ವಾಗತಿಸಿದೆ. ಅಲ್ಲದೇ ಅವರ ಫಸ್ಟ್ ಲುಕ್ ಸಹ ಬಿಡುಗಡೆ ಮಾಡಲಾಗಿದೆ.

ಕೆಂಪು ಬಣ್ಣದ ಉಡುಗೆಯಲ್ಲಿ ಸ್ಟೈಲಿಶ್ ಆಗಿ ವಿಮಾನದಿಂದ ನಟಿ ಇಳಿದು ಬರುತ್ತಿರುವ ಟೀಸರ್ ರಿವೀಲ್ ಮಾಡಿ ನಟಿಗೆ ಚಿತ್ರತಂಡ ಶುಭಾಶಯ ಕೋರಿದೆ.

ನಿತಿನ್ ಹಾಗೂ ಶ್ರೀಲೀಲಾ ಜೋಡಿಯಾಗಿ ನಟಿಸುತ್ತಿರುವ ಚಿತ್ರದಲ್ಲಿ ನಟ ಕಿರೀಟಿ ರಾಜೇಂದ್ರ ಪ್ರಸಾದ್ ಮತ್ತು ವೆನ್ನೆಲ ಕಿಶೋರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದೆ. ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡುತ್ತಿದ್ದು, ಪ್ರವೀಣ್ ಪುಡಿ ಸಂಕಲನ ಮತ್ತು ರಾಮ್ ಕುಮಾರ್ ಕಲಾ ನಿರ್ದೇಶನವಿದೆ.

ನಟಿ ಶ್ರೀಲೀಲಾ (Robinhood film)

'ಭೀಷ್ಮ', 'ಎಕ್ಸ್ ಅರ್ಡಿನರಿ ಮ್ಯಾನ್' ಅಂತಹ ಚಿತ್ರಗಳನ್ನು ನಿರ್ದೇಶಿಸಿದ್ದ ವೆಂಕಿ ಕುಡುಮುಲ 'ರಾಬಿನ್ ಹುಡ್'ಗೆ ಸೂತ್ರಧಾರಿ. ಆ್ಯಕ್ಷನ್ ಜೊತೆಗೆ ಕಾಮಿಡಿ ಕಥಾಹಂದರ ಹೊಂದಿರುವ ಸಿನಿಮಾ ಡಿಸೆಂಬರ್ 20 ರಂದು ಕ್ರಿಸ್‌ಮಸ್​ಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಪವನ್ ಕಲ್ಯಾಣ್ ನಟನೆಯ ಉಸ್ತಾದ್ ಭಗತ್ ಸಿಂಗ್, ಮಾಸ್ ಮಹಾರಾಜ ರವಿತೇಜ ಅವರ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಲು ಶ್ರೀಲೀಲಾ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:ಹೆಚ್.ಎಂ. ಕೃಷ್ಣಮೂರ್ತಿ ಅಭಿನಯದ 'ನಾಡಸಿಂಹ ಕೆಂಪೇಗೌಡ' ಆಲ್ಬಂ ಸಾಂಗ್​ ಬಿಡುಗಡೆ - Album song release

ABOUT THE AUTHOR

...view details