ಕರ್ನಾಟಕ

karnataka

ETV Bharat / entertainment

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಣಿಕಂದನ್ ನಿವಾಸದಲ್ಲಿ ದರೋಡೆ

ಖ್ಯಾತ ನಿರ್ದೇಶಕ ಮಣಿಕಂದನ್ ಅವರ ಮನೆಯಲ್ಲಿ ರಾಷ್ಟ್ರ ಪ್ರಶಸ್ತಿಯ ಬೆಳ್ಳಿ ಪದಕ ಸೇರಿದಂತೆ ಚಿನ್ನಾಭರಣ, ನಗದು ಕಳವಾಗಿದ್ದು, ಮಧುರೈ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

By ETV Bharat Karnataka Team

Published : Feb 9, 2024, 12:24 PM IST

robbery at Director Manikandan's Residence
ನಿರ್ದೇಶಕ ಮಣಿಕಂದನ್ ನಿವಾಸದಲ್ಲಿ ದರೋಡೆ

ನಿರ್ದೇಶಕ ಮಣಿಕಂದನ್ ನಿವಾಸದಲ್ಲಿ ದರೋಡೆ

ಮಧುರೈ (ತಮಿಳುನಾಡು): ಮಧುರೈನ ಉಸಿಲಂಪಟ್ಟಿ ಮೂಲದ ಖ್ಯಾತ ಚಲನಚಿತ್ರ ನಿರ್ದೇಶಕ ಮಣಿಕಂದನ್ ಅವರ ನಿವಾಸದಲ್ಲಿ ದರೋಡೆ ನಡೆದಿದೆ. "ಕಾಕ ಮುತ್ತೈ" ಮತ್ತು "ಕಡೈಸಿ ವಿವಸಾಯಿ" ನಂತಹ ಅಸಾಧಾರಣ ಸಿನಿಮಾಗಳಿಗೆ ಜನಪ್ರಿಯರಾದ ಇವರು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಸಿನಿಮಾ ಕೆಲಸ ಹಿನ್ನೆಲೆ ಚೆನ್ನೈನಲ್ಲಿರದಿರುವಾಗ ಈ ಘಟನೆ ನಡೆದಿದೆ.

ಮಧುರೈ ಜಿಲ್ಲೆಯ ಉಸಿಲಂಪಟ್ಟಿಯಲ್ಲಿ ಇರುವ ಖ್ಯಾತ ನಿರ್ದೇಶಕ ಮಣಿಕಂದನ್ ಅವರ ಮನೆಯ ಬೀಗ ಮುರಿದು ದುಷ್ಕರ್ಮಿಗಳು ಒಳನುಗ್ಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಸರಿಸುಮಾರು 1 ಲಕ್ಷ ರೂಪಾಯಿ ನಗದು ಹಾಗೂ ಐದು ಚಿನ್ನಾಭರಣಗಳು ಲೂಟಿಯಾಗಿವೆ. ಅಷ್ಟೇ ಅಲ್ಲದೇ, ನಿರ್ದೇಶಕರು ತಮ್ಮ ಅತ್ಯುತ್ತಮ ಸಿನಿಮಾ ಸಾಧನೆಗಳಿಗಾಗಿ ಮುಡಿಗೇರಿಸಿಕೊಂಡಿರುವ ರಾಷ್ಟ್ರೀಯ ಪ್ರಶಸ್ತಿಗಳಿಗೆ ಸಂಬಂಧಿಸಿದ ಬೆಳ್ಳಿ ಪದಕಗಳನ್ನು ಸಹ ಕಳ್ಳರು ಕದ್ದೊಯ್ದಿದ್ದಾರೆ.

ಈ ಘಟನೆ ಸಂಬಂಧ ಉಸಿಲಂಪಟ್ಟಿ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರೋ ದುಷ್ಕರ್ಮಿಗಳನ್ನು ಬಂಧಿಸಲು ಕೂಲಂಕಷ ತನಿಖೆ ಆರಂಭಿಸಿದ್ದಾರೆ. ಇಂತಹ ಮಹತ್ವದ ವಸ್ತುಗಳು ಮತ್ತು ವೈಯಕ್ತಿಕ ವಸ್ತುಗಳ ಕಳ್ಳತನವು ನಿರ್ದೇಶಕ ಮಣಿಕಂದನ್ ಮತ್ತು ಅವರ ಕುಟುಂಬಕ್ಕೆ ಆರ್ಥಿಕ ನಷ್ಟ ಮಾತ್ರವಲ್ಲದೇ ಭಾವನಾತ್ಮಕ ಪ್ರಕ್ಷುಬ್ಧತೆಯನ್ನೂ ಉಂಟುಮಾಡಿದೆ.

ಇದನ್ನೂ ಓದಿ:'ಕೈಲಾಸ ಕಾಸಿದ್ರೆ' ಅಂತಿದ್ದಾರೆ 'ತಾರಕಾಸುರ' ಹೀರೋ ರವಿ

ಹಿನ್ನಡೆಯ ಹೊರತಾಗಿಯೂ, ನಿರ್ದೇಶಕ ಮಣಿಕಂದನ್ ಅವರ ಕಲೆಯ ಮೇಲಿನ ಸಮರ್ಪಣೆ ಹಾಗೇ ಉಳಿದಿದೆ. ಸಿನಿಮಾಗಳ ಮೇಲಿನ ಒಲವು ಅಪಾರ. ಚೆನ್ನೈನಲ್ಲಿ ತಮ್ಮ ಚಲನಚಿತ್ರ ಸಂಬಂಧಿತ ಕೆಲಸಗಳನ್ನು ಮುಂದುವರಿಸಿದ್ದಾರೆ. ಇದೀಗ ಮಧುರೈನ ಸಿನಿಮಾ ಬಂಧುಗಳು ಮತ್ತು ಸ್ಥಳೀಯ ಸಮುದಾಯವು ಒಗ್ಗಟ್ಟಿನಿಂದ ನಿರ್ದೇಶಕರ ಪರ ನಿಂತಿದೆ. ಆಘಾತಕಾರಿ ಘಟನೆಯ ತ್ವರಿತ ಪರಿಹಾರಕ್ಕೆ ಪ್ರಾರ್ಥಿಸುತ್ತಿದ್ದಾರೆ. ಕಳವಾಗಿರೋ ವಸ್ತುಗಳನ್ನು, ವಿಶೇಷವಾಗಿ ಭರಿಸಲಾಗದ ರಾಷ್ಟ್ರೀಯ ಪ್ರಶಸ್ತಿ ಪದಕಗಳನ್ನು ಮರುಪಡೆಯಲು ಆಶಿಸುತ್ತಿದ್ದಾರೆ.

ಇದನ್ನೂ ಓದಿ:ಯಾಮಿ ಗೌತಮ್ ನಟನೆಯ 'ಆರ್ಟಿಕಲ್ 370' ಸಿನಿಮಾ ಟ್ರೇಲರ್ ಔಟ್

ABOUT THE AUTHOR

...view details