ಕರ್ನಾಟಕ

karnataka

ETV Bharat / entertainment

ರಿಷಬ್ ಶೆಟ್ಟಿ ಹಳೇ ಫೋಟೋ ವೈರಲ್: ಯಕ್ಷಗಾನದ ಮೇಲಿನ ಒಲವು ಸಾಬೀತುಪಡಿಸಿತು ಚಿತ್ರ - Rishab Shetty - RISHAB SHETTY

ರಿಷಬ್ ಶೆಟ್ಟಿ ಅವರ ವಿದ್ಯಾಭ್ಯಾಸ ದಿನಗಳ ಯಕ್ಷಗಾನ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

Rishab Shetty Yakshagana pictures
ರಿಷಬ್ ಶೆಟ್ಟಿ ಯಕ್ಷಗಾನ ಫೋಟೋ

By ETV Bharat Karnataka Team

Published : Apr 6, 2024, 6:50 PM IST

ಕನ್ನಡ ಚಿತ್ರರಂಗದ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಅವರ ಶಾಲಾ ದಿನಗಳ ಫೊಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಆರಂಭಿಕ ಕಲಾತ್ಮಕ ಪ್ರಯತ್ನಗಳನ್ನು ಈ ಚಿತ್ರ​ ತೋರಿಸಿದೆ. ಯಕ್ಷಗಾನ ಮತ್ತು ಜಾನಪದ ಕಲೆಯಲ್ಲಿ ಭಾಗಿಯಾಗಿರುವುದನ್ನು ಈ ವೈರಲ್ ಫೋಟೋ ಪ್ರದರ್ಶಿಸಿದೆ.

ರಿಷಬ್ ಶೆಟ್ಟಿ ಆರನೇ ತರಗತಿಯಲ್ಲಿರುವಾಗಲೇ ಯಕ್ಷಗಾನದ ಮೇಲೆ ಉತ್ಸಾಹ ತೋರುವುದರಿಂದ ಹಿಡಿದು ಭಾರತೀಯ ಚಿತ್ರರಂಗದ ಗಣ್ಯ ವ್ಯಕ್ತಿಯಾಗುವವರೆಗಿನ ಪ್ರಯಾಣವು ನಿಜವಾಗಿಯೂ ಅದ್ಭುತ ಪರಿವರ್ತನೆ. ಯಕ್ಷಗಾನ, ಜಾನಪದ ಕಲೆಗಳು, ಮನರಂಜನೆ ಮೇಲಿನ ಪ್ರೀತಿ ಈ ಫೋಟೋಗಳಲ್ಲಿ ಸಾಬೀತಾಗಿದೆ. ವೈರಲ್​​ ಫೋಟೋದಲ್ಲಿ, ಯಕ್ಷಗಾನ ಮೇಲಿನ ನಟನ ಅಚಲ ಸಮರ್ಪಣೆಯನ್ನು ಕಾಣಬಹುದು.

ಇತ್ತೀಚೆಗೆ, ರಿಷಬ್ ಶೆಟ್ಟಿ ತಮ್ಮ ಸ್ಥಳೀಯ ಪ್ರದೇಶದ ಜಾನಪದ ಕಲೆಯನ್ನು ಬಿಗ್​ ಸ್ಕ್ರೀನ್​ನಲ್ಲಿ ಪ್ರದರ್ಶಿಸುವ ತಮ್ಮ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. 6ನೇ ತರಗತಿಯಲ್ಲಿ ಯಕ್ಷಗಾನದಲ್ಲಿ ಅಭಿನಯಿಸುವ ಮೂಲಕ ತಮ್ಮ ಕಲಾ ಪಯಣ ಆರಂಭವಾಯಿತು ಎಂಬುದನ್ನು ಹಂಚಿಕೊಂಡಿದ್ದರು. ಅಂದಿನಿಂದಲೂ ಜಾನಪದ ಕಲೆಯನ್ನು ಬೆಳ್ಳಿ ಪರದೆ ಮೇಲೆ ಚಿತ್ರಿಸುವ, ಜಾಗತಿಕ ಪ್ರೇಕ್ಷಕರ ಗಮನ ಸೆಳೆಯುವ ಬಯಕೆ ಹೊಂದಿದ್ದಾರೆ. ಪ್ರಾದೇಶಿಕ ಸಂಸ್ಕೃತಿಯನ್ನು ಸಂರಕ್ಷಿಸುವುದು ಮತ್ತು ಉತ್ತೇಜಿಸುವುದು ನಟನ ಗುರಿಯಾಗಿದೆ.

ರಿಷಬ್ ಶೆಟ್ಟಿ ಪ್ರಸ್ತುತ 'ಕಾಂತಾರ: ಅಧ್ಯಾಯ 1' ಅಥವಾ ಪ್ರೀಕ್ವೆಲ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2022ರ ಸೆಪ್ಟೆಂಬರ್​ ಕೊನೆಗೆ ತೆರೆಕಂಡ ಮೊದಲ ಭಾಗ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶ ಕಂಡಿದೆ. ಈ ಚಿತ್ರದ ಮೂಲಕ ರಿಷಬ್​ ಶೆಟ್ಟಿ ಹೆಸರು ಭಾರತದಾಂತ್ಯದ ಜನಪ್ರಿಯವಾಗಿ, ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಮೊದಲ ಭಾಗದ ಕಥೆ, ನಿರೂಪಣೆ, ನಟನೆ, ಹಾಡುಗಳೆಲ್ಲವೂ ಮೆಚ್ಚುಗೆಗೆ ಪಾತ್ರವಾಗಿತ್ತು. ಸಿನಿಪ್ರಿಯರು ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಖ್ಯಾತನಾಮರು ಕೂಡ ಸಿನಿಮಾವನ್ನು ಕೊಂಡಾಡಿದ್ದರು. ಹಾಗಾಗಿ ಮತ್ತೊಂದು ಭಾಗದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ:ಅಪ್ಪ ಎಂಬ ದೇವರ ಸತ್ಯ ಕಥೆ 'ಅಪ್ಪ ಐ ಲವ್ ಯೂ': ಮುಂದಿನ ಶುಕ್ರವಾರ ತೆರೆಗೆ - Appa I Love You

ರಿಷಬ್​ ಶೆಟ್ಟಿ ನಟನೆ, ನಿರ್ದೇಶನದ ಜೊತೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ತಮ್ಮ ರಿಷಬ್ ಶೆಟ್ಟಿ ಫಿಲ್ಮ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಹೊಸ ಚಿತ್ರ 'ಲಾಫಿಂಗ್ ಬುದ್ಧ'. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಂದುವರಿದಿದೆ. ದೇಹದ ತೂಕ ಹೆಚ್ಚಿರುವ ಪೊಲೀಸ್ ಕಾನ್‌ಸ್ಟೇಬಲ್ ಸುತ್ತ ಸುತ್ತುವ ಕಥೆ. ಪ್ರಮೋದ್ ಶೆಟ್ಟಿ ಮತ್ತು ತೇಜು ಬೆಳವಾಡಿ ಸೇರಿದಂತೆ ಹಲವರು ನಟಿಸಿದ್ದಾರೆ.

ಇದನ್ನೂ ಓದಿ:ಟೀಸರ್​​ಗೂ ಮುನ್ನ ಮತ್ತೊಂದು ಪವರ್​ಫುಲ್ ಪೋಸ್ಟರ್ ಅನಾವರಣಗೊಳಿಸಿದ 'ಪುಷ್ಪ 2' ತಂಡ - Pushpa 2

ABOUT THE AUTHOR

...view details