ರಶ್ಮಿಕಾ ಮಂದಣ್ಣ, ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬಹುಭಾಷಾ ನಟಿ. ನಟಿ ಕೈಯಲ್ಲಿ ಹಲವು ಪ್ರಾಜೆಕ್ಟ್ಗಳಿದ್ದು, ಕೆಲವು ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿವೆ. 'ಕುಬೇರ' ಸಿನಿಮಾ ನಟಿಯ ದಿ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ. ಇದೇ ಮೊದಲ ಬಾರಿಗೆ ಸೌತ್ ಸೂಪರ್ ಸ್ಟಾರ್ ಧನುಷ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಶೇಖರ್ ಕಮ್ಮುಲ ನಿರ್ದೇಶನದ ಚಿತ್ರದಿಂದ ನಟಿಯ ನೋಟ ಅನಾವರಣವಾಗಿದೆ.
ಕುಬೇರ ನಿರ್ಮಾಪಕರಿಂದು ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ರಶ್ಮಿಕಾ ನಗದು ತುಂಬಿದ ಸೂಟ್‌ಕೇಸ್ ಅನ್ನು ಅಗೆದು ತೆಗೆಯುವ ಕ್ಷಣಗಳನ್ನು ಈ ವಿಡಿಯೋ ಒಳಗೊಂಡಿದೆ.
ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ನಿರ್ಮಾಪಕರು ಪೋಸ್ಟರ್ ಒಂದನ್ನು ಹಂಚಿಕೊಂಡು, ಜುಲೈ 5ಕ್ಕೆ ಪಾತ್ರ ಬಹಿರಂಗಪಡಿಸುವ ಬಗ್ಗೆ ಸುಳಿವು ನೀಡಿದ್ದರು. ಕ್ಯಾಮರಾಗೆ ಬೆನ್ನು ಮಾಡಿ ನಿಂತಿದ್ದ ನಟಿಯ ಸ್ಪಷ್ಟ ನೋಟ ಸಿಕ್ಕಿರಲಿಲ್ಲ. ಆದರೆ ಇಂದು ವಿಡಿಯೋ ಹೊರಬಂದಿದೆ.
ಇದನ್ನೂ ಓದಿ:ಅನಂತ್ ಅಂಬಾನಿ ಸಂಗೀತ ಸಮಾರಂಭದಲ್ಲಿ ಜಸ್ಟಿನ್ ಬೀಬರ್: 83 ಕೋಟಿ ಪಡೆದ ವಿಶ್ವವಿಖ್ಯಾತ ಗಾಯಕ - Justin Bieber
ಚಿತ್ರದಲ್ಲಿ ನಾಗಾರ್ಜುನ ಮತ್ತು ಜಿಮ್ ಸರ್ಭ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮನೆಯಿಲ್ಲದ ವ್ಯಕ್ತಿ, ಹೇಗೆ ಮಾಫಿಯಾ ವ್ಯಕ್ತಿಯಾಗಿ ಬದಲಾಗುತ್ತಾನೆ ಅನ್ನೋದೇ ಚಿತ್ರದ ಕಥೆ. ಸಿನಿಮಾ ನಿರ್ಮಾಣ ಹಂತದಲ್ಲಿದ್ದು, ಡಿಸೆಂಬರ್ 31ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.