ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಹಾಗೂ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ತೆರೆಹಂಚಿಕೊಂಡಿರುವ ಬಹುನಿರೀಕ್ಷಿತ ಚಿತ್ರ 'ಗೇಮ್ ಚೇಂಜರ್' ಅನ್ನು ಈ ಸಾಲಿನ ಕ್ರಿಸ್ಮಸ್ನಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದ್ರೀಗ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಗೇಮ್ ಚೇಂಜರ್‌ನ ಹೊಸ ರಿಲೀಸ್ ಡೇಟ್ ಅನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಚಲನಚಿತ್ರ ನಿರ್ಮಾಪಕ ದಿಲ್ ರಾಜು ದಸರಾ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಗೇಮ್ ಚೇಂಜರ್ ಯಾವಾಗ ಬಿಡುಗಡೆಯಾಗುತ್ತದೆ ಎಂಬುದನ್ನು ತಿಳಿಸಲಾಗಿದೆ. ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ತಿಳಿಯೋಣ ಬನ್ನಿ.
ಯಾವಾಗ ಬಿಡುಗಡೆ ಆಗಲಿದೆ ಗೇಮ್‌ಚೇಂಜರ್?ಸೌತ್ ಮತ್ತು ಬಾಲಿವುಡ್ನಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಪ್ರಮಖ ಪಾತ್ರಗಳನ್ನು ನಿರ್ವಹಿಸಿರುವ ಗೇಮ್ ಚೇಂಜರ್ ಚಿತ್ರವನ್ನು ಈ ಮೊದಲು 2024ರ ಕ್ರಿಸ್ಮಸ್ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದ್ರೀಗ ಬಹುನಿರೀಕ್ಷಿತ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಸಿನಿಮಾ ಮುಂದಿನ ವರ್ಷ ತೆರೆಕಾಣಲಿದೆ. ಹೌದು, 2025ರ ಸಂಕ್ರಾಂತಿ ಸಂದರ್ಭ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.
ಚಲನಚಿತ್ರ ನಿರ್ಮಾಪಕ ದಿಲ್ ರಾಜು ಅವರು ವಿಡಿಯೋ ಅನಾವರಣಗೊಳಿಸಿ, ಸಿನಿಮಾ ಮುಂದಕ್ಕೆ ಹೋಗಿರೋದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ವಿತರಣೆಗೆ ಸಂಬಂಧಿಸಿದ ಕಾರಣಗಳಿಂದಾಗಿ, ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಹಾಗಾಗಿ ಸಂಕ್ರಾಂತಿಯ (ಜನವರಿ 14) ಸಮಯವೇ ಸರಿ ಎಂದು ನಿರ್ಮಾಪಕರು ನಿರ್ಧರಿಸಿದ್ದಾರೆ.
ಚಿತ್ರದ ಟೀಸರ್ ಯಾವಾಗ ಬಿಡುಗಡೆಯಾಗಲಿದೆ? ಈ ವರ್ಷದ ಡಿಸೆಂಬರ್ ವೇಳೆಗೆ ಗೇಮ್ ಚೇಂಜರ್‌ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ತಯಾರಕರು ಭರವಸೆ ನೀಡಿದ್ದಾರೆ. ಚಿತ್ರದ ಟೀಸರ್ ಕೂಡಾ ಡಿಸೆಂಬರ್‌ನಲ್ಲಿಯೇ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಇದನ್ನೂ ಓದಿ:'ಜಿಗ್ರಾ' vs 'ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ': ಆಲಿಯಾ ಮತ್ತು ರಾಜ್‌ಕುಮಾರ್ ರಾವ್, ತೃಪ್ತಿ ದಿಮ್ರಿ ಸಿನಿಮಾಗಳ ಕಲೆಕ್ಷನ್
ರಾಮ್ ಚರಣ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವನ್ನು ಶಂಕರ್ ನಿರ್ದೇಶಿಸಿದ್ದಾರೆ. ಈ ಪೊಲಿಟಿಕಲ್ ಡ್ರಾಮಾದಲ್ಲಿ, ರಾಮ್ ಚರಣ್ ತನ್ನ ಸುತ್ತಲಿನ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸುವ ಐಎಎಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ರಾಮ್ ಜೊತೆಗೆ ಕಿಯಾರಾ ಅಡ್ವಾಣಿ, ಎಸ್‌ಜೆ ಸೂರ್ಯ, ಅಂಜಲಿ, ಜಯರಾಂ, ಶ್ರೀಕಾಂತ್, ಶುಭಲೇಖಾ ಸುಧಾಕರ್, ಸುನೀಲ್, ನಾಸರ್ ಸೇರಿದಂತೆ ಅನೇಕ ನಟರು ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:ಚಿರಂಜೀವಿ ಮುಖ್ಯಭೂಮಿಕೆಯ ''ವಿಶ್ವಂಭರ'' ಟೀಸರ್: ಹನುಮಂತನ ಗದೆ ಹಿಡಿದ ಮೆಗಾಸ್ಟಾರ್
ಗೇಮ್ ಚೇಂಜರ್ ಅಲ್ಲದೇ, ರಾಮ್ ಚರಣ್ ನಿರ್ದೇಶಕ ಬುಚ್ಚಿ ಬಾಬು ಸನಾ ಅವರೊಂದಿಗೆ ತಮ್ಮ ಮತ್ತೊಂದು ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಇದನ್ನು ತಾತ್ಕಾಲಿಕವಾಗಿ ಆರ್‌ಸಿ 16 ಎಂದು ಹೆಸರಿಸಲಾಗಿದೆ. ಈ ಚಿತ್ರ ಸ್ಪೋರ್ಟ್ಸ್ ಡ್ರಾಮಾವಾಗಿದ್ದು, ಇದರಲ್ಲಿ ಜಾಹ್ನವಿ ಕಪೂರ್ ಮತ್ತು ಶಿವ ರಾಜ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಒಟ್ಟಾರೆ, ಆರ್ಆರ್ಆರ್ ಬಳಿಕ ಬರುತ್ತಿರುವ ರಾಮ್ ಚರಣ್ ಅವರ ಮೊದಲ ಸಿನಿಮಾ ಆದ ಹಿನ್ನೆಲೆ, 'ಗೇಮ್ ಚೇಂಜರ್' ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಆರ್ಆರ್ಆರ್ಸಹನಟ ಜೂನಿಯರ್ ಎನ್ಟಿಆರ್ ನಟನೆಯ ದೇವರ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.