ಕರ್ನಾಟಕ

karnataka

ETV Bharat / entertainment

ಪೋಷಕರೊಂದಿಗಿನ ಮೆಹಂದಿ ಸಮಾರಂಭದ ಫೋಟೋ ಹಂಚಿಕೊಂಡ ರಾಕುಲ್ ಪ್ರೀತ್ ಸಿಂಗ್ - Rakul Preet

ನಟಿ ರಾಕುಲ್ ಪ್ರೀತ್ ಸಿಂಗ್ ಅವರು ತಮ್ಮ ಮೆಹಂದಿ ಸಮಾರಂಭದ ಕೆಲವೊಂದು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮೆಹೆಂದಿ ಸಮಾರಂಭದ ಫೋಟೋ ಹಂಚಿಕೊಂಡ ರಕುಲ್ ಪ್ರೀತ್ ಸಿಂಗ್
ಮೆಹೆಂದಿ ಸಮಾರಂಭದ ಫೋಟೋ ಹಂಚಿಕೊಂಡ ರಕುಲ್ ಪ್ರೀತ್ ಸಿಂಗ್

By ETV Bharat Karnataka Team

Published : Mar 5, 2024, 10:46 PM IST

ಮುಂಬೈ :ಫೆಬ್ರವರಿ 21ರಂದು ಗೋವಾದಲ್ಲಿ ವಿವಾಹವಾದ ನಟಿ ರಾಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ದಂಪತಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮೆಹಂದಿ ಫಂಕ್ಷನ್‌ನ ಕೆಲವು ಅಪರೂಪದ ಫೋಟೋಗಳನ್ನ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಆ ಫೋಟೋಗಳಲ್ಲಿ ಅವರು ನಗುವುದು, ಸಿಹಿ ತಿಂಡಿಗಳನ್ನು ತಿನ್ನುವುದು ಮತ್ತು ತನ್ನ ಹೆತ್ತವರೊಂದಿಗೆ ಸುಂದರ ಸಮಯ ಕಳೆಯುತ್ತಿರುವುದು ಕಂಡು ಬಂದಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ರಾಕುಲ್ - ಜಾಕಿ ಅವರ ಫೋಟೋಗಳನ್ನ ಹೆಚ್ಚು ಇಷ್ಟಪಡುತ್ತಿದ್ದಾರೆ.

ಮೆಹೆಂದಿ ಸಮಾರಂಭದ ಫೋಟೋ ಹಂಚಿಕೊಂಡ ರಕುಲ್ ಪ್ರೀತ್ ಸಿಂಗ್

ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೆಹೆಂದಿ ಫಂಕ್ಷನ್‌ನ ಚಿತ್ರಗಳನ್ನು ಹಂಚಿಕೊಂಡ ರಾಕುಲ್ ಪ್ರೀತ್ ಸಿಂಗ್ ಅವರು ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ. ಮದುವೆಗಳು ಎಂದರೆ ಅಲ್ಲಿ ಪ್ರೀತಿ ಮತ್ತು ಬಾಂಧವ್ಯ ಮೇಳೈಸಿರುತ್ತದೆ. ಈ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇನ್ನು ವಿವಾಹ ಸಮಾರಂಭ ಎಂದರೆ ಬಗೆ ಬಗೆ ಆಹಾರಗಳನ್ನು ತಯಾರಿಸಿರುತ್ತಾರೆ. ನಾನು ಸಾಕಷ್ಟು ಲಡ್ಡುಗಳನ್ನು ಸವಿದಿದ್ದೇನೆ. ಶುದ್ಧವಾದ ಬೆಲ್ಲದಿಂದ ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನನ್ನ ಹೆತ್ತವರು ನನ್ನೊಂದಿಗೆ ಸಂತಸಪಟ್ಟರು. ಮದುವೆಯಲ್ಲಿ ಭಾಗವಹಿಸಿ, ಸಿಹಿ ತಿಂಡಿಗಳನ್ನು ಸವಿದು ಸಂತಸ ಪಟ್ಟಿದ್ದಕ್ಕೆ ಎಲ್ಲರಿಗೂ ಧನ್ಯವಾದ ಸಮರ್ಪಿಸುತ್ತೇನೆ ಎಂದು ಅವರು ತಮ್ಮ ಬರಹದಲ್ಲಿ ಹೇಳಿಕೊಂಡಿದ್ದಾರೆ.

ಮೆಹೆಂದಿ ಸಮಾರಂಭದ ಚಿತ್ರಗಳಲ್ಲಿ ರಾಕುಲ್ ಪ್ರೀತ್ ಸಿಂಗ್ ತನ್ನ ಹೆತ್ತವರೊಂದಿಗೆ ಕ್ಯಾಮೆರಾಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ ರಾಕುಲ್ ಜೊತೆಗೆ ಆಕೆಯ ಪೋಷಕರು ಸಹ ನಗುತ್ತಾ, ಸಿಹಿ ತಿನ್ನಿಸುತ್ತಿದ್ದಾರೆ. ಚಿತ್ರಗಳಲ್ಲಿ ರಾಕುಲ್ ಕಿತ್ತಳೆ-ಕೆಂಪು ಕಸೂತಿ ಲೆಹೆಂಗಾದಲ್ಲಿ ಹೊಂದಿಕೆಯಾಗುವ ಪಂಜಾಬಿ ಜುಟ್ಟಿಗಳೊಂದಿಗೆ ಮತ್ತು ಪೋನಿಟೇಲ್‌ನಲ್ಲಿ ಕೂದಲನ್ನು ಕಟ್ಟಿಕೊಂಡು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಭಾರವಾದ ಕಿವಿಯೋಲೆಗಳು ಮತ್ತು ಹೂವಿನ ಮಾಂಗ್-ಟಿಕಾದೊಂದಿಗೆ ಸುಂದರ ನಗುಮೊಗದೊಂದಿಗೆ ರಾಕುಲ್​ ಮಿರ ಮಿರ ಮಿಂಚಿದ್ದಾರೆ. ಅದೇ ಸಮಯದಲ್ಲಿ ರಾಕುಲ್ ಅವರ ತಂದೆ ನೆಹರು ಜಾಕೆಟ್‌ನೊಂದಿಗೆ ಕುರ್ತಾ - ಪೈಜಾಮವನ್ನು ಧರಿಸಿದ್ದಾರೆ ಮತ್ತು ಅವರ ತಾಯಿ ಬಿಳಿ ಮತ್ತು ಹಳದಿ ಬಣ್ಣದ ಹೂವಿನ ಲೆಹೆಂಗಾ ಕೂಡಾ ಧರಿಸಿದ್ದಾರೆ.

ರಾಕುಲ್ ಪ್ರೀತ್ ಸಿಂಗ್ ಅವರು ಬಾಲಿವುಡ್‌ನಲ್ಲಿ ಮಾತ್ರವಲ್ಲದೇ ದಕ್ಷಿಣದಲ್ಲೂ ಅನೇಕ ಯೋಜನೆಗಳನ್ನು ಹೊಂದಿದ್ದಾರೆ. ರಾಕುಲ್ ತನ್ನ ಕಿಟ್ಟಿಯಲ್ಲಿ ಕಮಲ್ ಹಾಸನ್ ಜೊತೆಗೆ ಇಂಡಿಯನ್ 2 ಅನ್ನು ಸಹ ಹೊಂದಿದ್ದಾರೆ. ಅದೇ ಸಮಯದಲ್ಲಿ, ಜಾಕಿ ಭಗ್ನಾನಿ ಅವರ ಮುಂಬರುವ ಆಕ್ಷನ್ ಚಿತ್ರ 'ಬಡೆ ಮಿಯಾನ್ ಛೋಟೆ ಮಿಯಾನ್' ಬಿಡುಗಡೆಗೆ ಸಿದ್ಧವಾಗಿದೆ.

ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿರಿಸಿದ ರಾಕುಲ್ ​ -ಜಾಕಿ: ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಸಲ್ಲಿಕೆ

ABOUT THE AUTHOR

...view details