ಹೈದರಾಬಾದ್:ತಮ್ಮ ಜೀವನದ ಕೆಲವು ಅದ್ಬುತ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಎಂದಿಗೂ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೊಸ ಮುಂಜಾನೆಯ ಕುರಿತು ಇದೀಗ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಮಗಳು ಮಾಲ್ತಿ ಮೇರಿ ಹೊಸ ದಿನದ ಆರಂಭವನ್ನು ಮಾಡಿರುವ ಕುರಿತು ಅಪ್ಡೇಟ್ ನೀಡಿದ್ದಾರೆ
ನಿಕ್ ಜೊತೆ ಲಾಂಗ್ ಡ್ರೈವ್ ಮಗಳು ಮಾಲ್ತಿ ಮೇರಿ ತಮ್ಮ ಸೊಂಟದಲ್ಲಿ ಕೂರಿಸಿಕೊಂಡು ಮುಂಜಾನೆಯ ಸೊಬಗನ್ನು ಸವಿದಿದ್ದಾರೆ. ಈ ಕುರಿತು ಫೋಟೋವೊಂದನ್ನು ಹಂಚಿಕೊಂಡಿರುವ ನಟಿ, ಬಿಳಿ ಪೈಜಾಮಾ ಸೆಟ್ನಲ್ಲಿ ಕಾಣಿಸಿಕೊಂಡಿದ್ದರೆ, ಪುಟ್ಟ ಮಗಳು ಮಾಲ್ತಿ ಮೇರಿ ಹಸಿರುವ ಸ್ಟೇಟ್ಶರ್ಟ್ನಲ್ಲಿ ಕಂಗೊಳಿಸಿದ್ದಾಳೆ. ಅಮ್ಮನ ತೋಳಿನಲ್ಲಿ ಬೆಚ್ಚಗೆ ವಿಶ್ರಮಿಸುತ್ತಾ ಆಗಸವನ್ನು ಕಾಣುತ್ತಿರುವ ಮಗುವಿನ ಚಿತ್ರಣಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ, ಬೆಳಗು ಹೀಗೆ ಎಂದು ಬರೆದುಕೊಂಡು ಕೆಂಪು ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಮುನ್ನ ತಮ್ಮ ಸ್ಟೋರಿಯಲ್ಲಿ ಗಂಡ ನಿಕ್ ಜೋನಸ್ ಜೊತೆಗಿನ ಡ್ರೈವಿಂಗ್ ಮಾಡುತ್ತಿರುವ ವಿಡಿಯೋ ಜೊತೆಗೆ ಮ್ಯಾಗಿ ಬೌಲ್ನ ಚಿತ್ರವನ್ನು ಹಂಚಿಕೊಂಡಿದ್ದು, ಹಿಂದೆ ಶ್ರೇಯಾ ಘೋಷಲ್ ಹಾಡನ್ನು ಸಹ ಕೇಳಬಹುದಾಗಿದೆ.
ತಮ್ಮ ಬ್ಯುಸಿ ಶೆಡ್ಯೂಲ್ನ ನಡುವೆ ಕೂಡ ನಟಿ ತಮ್ಮ ವೃತ್ತಿ ಹಾಗೂ ದಿನದ ಕುರಿತು ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಮಗಳು ಮತ್ತು ಗಂಡ ನಿಕ್ ಜೋನಸ್ಗೆ ಸದಾ ಸಮಯವನ್ನು ಮೀಸಲಿಡುವ ನಟಿ ಈ ಕುರಿತು ಆನ್ಲೈನ್ನಲ್ಲಿ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಸಾರ್ವಜನಿಕ ಕಾರ್ಯಕ್ರಮ ಇರಲೀ ಅಥವಾ ಸಾಮಾಜಿಕ ಜಾಲತಾಣವಿರಲೀ ನಿಕ್ ಜೋನಸ್ ಮತ್ತು ಪ್ರಿಯಾಂಕಾ ಸದಾ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ತಮ್ಮ ದಾಂಪತ್ಯದ ಗುರಿಯನ್ನು ನಿರ್ವಹಣೆ ಮಾಡುವ ಮೂಲಕ ಮೆಚ್ಚುಗೆ ಪಡೆದಿದ್ದಾರೆ.
ನಟಿ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ನಿಕ್ ಲಾಂಗ್ ಡ್ರೈವ್ ಫೋಟೋವನ್ನು ಹಂಚಿಕೊಂಡಿದ್ದರು. ಅಲ್ಲದೇ ಇತ್ತೀಚಿಗೆ ತಮ್ಮ ಲಾಸ್ ಎಂಜಲೀಸ್ ಮನೆಯಲ್ಲಿ ಮಳೆಗಾಲದ ಸಮಯವನ್ನು ಆಹ್ಲಾದಿಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಈ ವೇಳೆ, ಮ್ಯಾಗಿ ಬೌಲ್ ಫೋಟೋ ಹಂಚಿಕೊಂಡಿದ್ದು, ಮಳೆಯಲ್ಲಿ ಯಾರಿಗೆ ಬೇಕು ಮ್ಯಾಗಿ ನ್ಯೂಡಲ್ಸ್ ಎಂದು ಬರೆದುಕೊಂಡಿದ್ದರು.
ವೃತ್ತಿಯಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ ತಮ್ಮ ಮುಂದಿನ ಸಿನಿಮಾದಲ್ಲಿ ಜಾನ್ ಸೆನಾ ಮತ್ತು ಇದ್ರಿಸ್ ಎಲ್ಬಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಫಾರನ್ ಅಖ್ತರ್ ಅವರ ನಿರ್ದೇಶನದ ಜೀ ಲೇ ಜರಾ ಚಿತ್ರದಲ್ಲೂ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: 'Poacher' ಪ್ರಾಜೆಕ್ಟ್ಗೆ ನಿರ್ಮಾಪಕಿಯಾದ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್