ಕರ್ನಾಟಕ

karnataka

ETV Bharat / entertainment

ಪತಿ, ಪುತ್ರಿಯೊಂದಿಗೆ ಭಾರತದಲ್ಲಿ ಪ್ರಿಯಾಂಕಾ ಚೋಪ್ರಾ ಹೋಳಿ ಸಂಭ್ರಮಾಚರಣೆ - Priyanka Chopra - PRIYANKA CHOPRA

ಗ್ಲೋಬಲ್​ ಐಕಾನ್​​ ಪ್ರಿಯಾಂಕಾ ಚೊಪ್ರಾ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಹೋಳಿ ಸಂಭ್ರಮಾಚರಣೆಯ ಫೋಟೋ - ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

Priyanka Chopra holi celebration
ಪ್ರಿಯಾಂಕಾ ಚೋಪ್ರಾ ಹೋಳಿ ಸೆಲೆಬ್ರೇಶನ್

By ETV Bharat Karnataka Team

Published : Mar 26, 2024, 5:59 PM IST

Updated : Mar 26, 2024, 6:53 PM IST

ಪವರ್​ಫುಲ್​ ಸೆಲೆಬ್ರಿಟಿ ಕಪಲ್ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಸೋಮವಾರದಂದು ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಜೊತೆಗೆ 'ಹೋಳಿ' ಆಚರಿಸಿದ್ದಾರೆ. ಮಾಲ್ತಿಗೆ ಭಾರತದಲ್ಲಿ ಮೊದಲ ಹೋಳಿ ಇದು.

ನಿನ್ನೆ ಸೋಷಿಯಲ್​​ ಮೀಡಿಯಾದಲ್ಲಿ ಈ ಸಂಭ್ರಮಾಚರಣೆಯ ಕೆಲ ಫೋಟೋ - ವಿಡಿಯೋಗಳು ವೈರಲ್​​ ಆಗಿದ್ದವು. ಇಂದು ಸ್ವತಃ ಗ್ಲೋಬಲ್​ ಐಕಾನ್​​ ಪ್ರಿಯಾಂಕಾ ಚೊಪ್ರಾ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ಫೋಟೋ - ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ನೋಯ್ಡಾದಲ್ಲಿ ಸಂಪೂರ್ಣ ಕುಟುಂಬಸ್ಥರೊಂದಿಗೆ ಗ್ರ್ಯಾಂಡ್​ ಸೆಲೆಬ್ರೆಶನ್​ನಲ್ಲಿ ಪ್ರಿಯಾಂಕಾ ಭಾಗಿಯಾಗಿದ್ದರು.

ದೇಸಿ ಗರ್ಲ್ ಶೇರ್ ಮಾಡಿರೋ ಪೋಸ್ಟ್, ಪೂಲ್ ಪಾರ್ಟಿ ಫೋಟೋಗಳು ಸೇರಿದಂತೆ ಹಲವು ವಿಡಿಯೋಗಳನ್ನು ಒಳಗೊಂಡಿತ್ತು. ಸಂಪೂರ್ಣ ಕುಟುಂಬ ಈ ಸಂಭ್ರಮಾಚರಣೆಯಲ್ಲಿ ಹಾಜರಿದ್ದಂತೆ ತೋರಿದೆ. ಸೊಗಸಾದ ಬಿಳಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವ, ಪ್ರಿಯಾಂಕಾ, ನಿಕ್ ಮತ್ತು ಮಾಲ್ತಿ ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಉತ್ತಮ ಕ್ಷಣಗಳನ್ನು ಕಳೆಯುತ್ತಿದ್ದಾರೆ.

ನಟಿ ಹಂಚಿಕೊಂಡಿರುವ ಫೋಟೋವೊಂದರಲ್ಲಿ, ಆಪ್ತ ಸ್ನೇಹಿತೆ ತಮನ್ನಾ ದತ್ ಮತ್ತು ಅವರ ಕುಟುಂಬದೊಂದಿಗೆ ಚೋಪ್ರಾ ಫ್ಯಾಮಿಲಿ ಪೋಸ್ ನೀಡಿದ್ದಾರೆ. ಉತ್ಸಾಹಭರಿತ ಸಂಭ್ರಮಾಚರಣೆಯಿಂದ ನಿಕ್ ಅವರ ಕ್ಯಾಂಡಿಡ್ ವಿಡಿಯೋಗಳನ್ನು ಸಹ ಹಂಚಿಕೊಳ್ಳಲಾಗಿದೆ. ನಿಕ್ ಮಡಿಲಲ್ಲಿ ಕುಳಿತು ಮ್ಯೂಸಿಕ್​ ಅನ್ನು ಆನಂದಿಸುತ್ತಿರುವ ಪ್ರಿಯಾಂಕಾ ಅವರ ರೊಮ್ಯಾಂಟಿಕ್​ ಕ್ಷಣ ಸಹ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ. ಅಲ್ಲದೇ, ಪ್ರಿಯಾಂಕಾ ಅವರ ಸೋದರ ಸಂಬಂಧಿ ಮನಾರಾ ಚೋಪ್ರಾ ಮತ್ತು ತಾಯಿ ಮಧು ಚೋಪ್ರಾ ಅವರನ್ನು ಒಳಗೊಂಡಿರುವ ಫೋಟೋ - ವಿಡಿಯೋಗಳು ಸಹ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ:ಬಣ್ಣದೋಕುಳಿಯಲ್ಲಿ ಮಿಂದೆದ್ದ ಭಾರತ: ಫೋಟೋಗಳಲ್ಲಿ ನೋಡಿ ಕಲರ್​ಫುಲ್ ಹೋಳಿ - Holi 2024

ಜನವರಿಯಲ್ಲಿ ಅಯೋಧ್ಯೆಯಲ್ಲಿ ನಡೆದ ರಾಮಮಂದಿರದ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇತ್ತೀಚೆಗಷ್ಟೇ, ನಿಕ್ ಮತ್ತು ಮಾಲ್ತಿ ಜೊತೆ ಪ್ರಿಯಾಂಕಾ ರಾಮಮಂದಿರಕ್ಕೂ ಭೇಟಿ ನೀಡಿದ್ದರು. ಇದಕ್ಕೂ ಮೊದಲು, ಮುಂಬೈನಲ್ಲಿ ನಡೆದ ಇಶಾ ಅಂಬಾನಿ ಅವರ ಹೋಳಿ ಆಚರಣೆಯಲ್ಲಿ ಪ್ರಿಯಾಂಕಾ ಕಾಣಿಸಿಕೊಂಡರು. ಅಲ್ಲದೇ ನಗರದ ವಿವಿಧೆಡೆ ನಡೆದ ಹಲವು ಪ್ರಚಾರ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗಿದ್ದರು. ಮಾರ್ಚ್ 14ರಂದು ಪ್ರಿಯಾಂಕಾ ಮಗಳೊಂದಿಗೆ ಮುಂಬೈಗೆ ಬಂದರು. ಒಂದು ದಿನದ ನಂತರ ನಿಕ್ ಆಗಮಿಸಿದರು.

ಇದನ್ನೂ ಓದಿ:'ರಾಮಾಯಣ'ಕ್ಕಾಗಿ ಆರ್ಚರಿ ಕಲಿಯುತ್ತಿರುವ ರಣ್​ಬೀರ್ ಕಪೂರ್: ತರಬೇತುದಾರರೊಂದಿಗಿನ ಫೋಟೋ ವೈರಲ್ - Ramayan

ಸಿನಿಮಾ ವಿಚಾರ ಗಮನಿಸೋದಾದರೆ, ಪ್ರಿಯಾಂಕಾ ಆಸ್ಕರ್ - ನಾಮನಿರ್ದೇಶಿತ ಸಾಕ್ಷ್ಯಚಿತ್ರ 'ಟು ಕಿಲ್ ಎ ಟೈಗರ್‌'ನ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ತಂಡದ ಭಾಗವಾಗಿದ್ದಾರೆ. ಫ್ರಾಂಕ್ ಇ ಫ್ಲವರ್ಸ್ ನಿರ್ದೇಶನದ ದಿ ಬ್ಲಫ್ ಪ್ರೊಜೆಕ್ಟ್​​ ಇದೆ. ಜಾನ್ ಸೀನಾ ಮತ್ತು ಇಡ್ರಿಸ್ ಎಲ್ಬಾ ಜೊತೆಗಿನ ಹೆಡ್ಸ್ ಆಫ್​ ಸ್ಟೇಟ್​​ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.

Last Updated : Mar 26, 2024, 6:53 PM IST

ABOUT THE AUTHOR

...view details