'ಕಲ್ಕಿ 2898 ಎಡಿ' ಯಶಸ್ಸಿನಲೆಯಲ್ಲಿ ತೇಲುತ್ತಿರುವ ಜನಪ್ರಿಯ ನಟ ಪ್ರಭಾಸ್ ಅವರ ಮುಂದಿನ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಬಳಿ ಹಲವು ಪ್ರಾಜೆಕ್ಟ್ಗಳಿದ್ದು, ಈಗಾಗಲೇ ಕೆಲವು ಘೋಷಣೆಯಾಗಿದೆ. ಉಳಿದ ಸಿನಿಮಾಗಳು ಅಧಿಕೃತವಾಗಿ ಶೀಘ್ರದಲ್ಲೇ ಅನೌನ್ಸ್ ಆಗಲಿದೆ.
ಬಹುಬೇಡಿಕೆ ನಟ, ಮುಂದಿನ ಸಿನಿಮಾಗಾಗಿ ಸೂಪರ್ ಹಿಟ್ 'ಸೀತಾ ರಾಮಂ' ಖ್ಯಾತಿಯ ಹನು ರಾಘವಪುಡಿ ಅವರೊಂದಿಗೆ ಕೈ ಜೋಡಿಸಲಿದ್ದಾರೆ. ಸಿನಿಮಾದ ಅಧಿಕೃತ ಅನೌನ್ಸ್ಮೆಂಟ್ಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದಾರೆ.
ವರದಿಗಳ ಪ್ರಕಾರ, ಈ ರೊಮ್ಯಾಂಟಿಕ್ ಸಿನಿಮಾವನ್ನು ಅಧಿಕೃತವಾಗಿ ಆಗಸ್ಟ್ 22ರಂದು ಘೋಷಿಸಲಾಗುವುದು. ಚಿತ್ರೀಕರಣ ಸಹ ಅದೇ ಸಂದರ್ಭದಲ್ಲಿ ಶುರುವಾಗಲಿದೆ. ಪ್ರಭಾಸ್ ಈ ಪ್ರಾಜೆಕ್ಟ್ಗಾಗಿ ಹೆಚ್ಚು ದಿನಗಳನ್ನು ಮೀಸಲಿಡಲಿದ್ದಾರೆ. ಇದಕ್ಕಾಗಿ ನಿರ್ಮಾಪಕರು ಬೃಹತ್ ಸೆಟ್ಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಸೆಟ್ನಲ್ಲೇ ಚಿತ್ರದ ಮಹತ್ವದ ಭಾಗಗಳನ್ನು ಚಿತ್ರೀಕರಿಸಲಾಗುವುದು.
ಬ್ರೇಕ್ನಲ್ಲಿರುವ ಪ್ರಭಾಸ್ ಮಾರುತಿ ನಿರ್ದೇಶನದ 'ದಿ ರಾಜಾ ಸಾಬ್' ಶೂಟಿಂಗ್ಗೆ ಮರಳಲಿದ್ದಾರೆ. ಆಗಸ್ಟ್‌ನಲ್ಲಿ ಚಿತ್ರೀಕರಣ ಪುನಾರಂಭಿಸಲು ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಸಂದೀಪ್ ವಂಗಾ ಅವರ 'ಸ್ಪಿರಿಟ್' ಸಿನಿಮಾದತ್ತ ಗಮನ ಹರಿಸೋ ಮುನ್ನ 'ದಿ ರಾಜಾ ಸಾಬ್' ಮತ್ತು ಹನು ರಾಘವಪುಡಿ ಅವರ ಸಿನಿಮಾಗಳನ್ನು ಪೂರ್ಣಗೊಳಿಸಲಿದ್ದಾರೆ ಎಂಬ ಮಾಹಿತಿ ಇದೆ. 'ಸ್ಪಿರಿಟ್' ಸಿನಿಮಾ ಈಗಾಗಲೇ ಸಾಕಷ್ಟು ವಿಳಂಬ ಎದುರಿಸಿದೆ.