ಕರ್ನಾಟಕ

karnataka

ETV Bharat / entertainment

ಪೂನಂ ಪಾಂಡೆ ಪರ ದನಿಯೆತ್ತಿದ ಪತಿ ಸ್ಯಾಮ್​​: 4 ತಿಂಗಳ ಹಿಂದೆಯೇ ಆರಂಭವಾಗಿತ್ತಂತೆ ಅಭಿಯಾನ!

ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು 4 ತಿಂಗಳಿನಿಂದ ತಯಾರಿ ನಡೆಸುತ್ತಿದ್ದೆವು ಎಂದು ಪೂನಂ ಪಾಂಡೆ ತಿಳಿಸಿದ್ದಾರೆ.

ಪೂನಂ ಪಾಂಡೆ
Poonam Pandey

By ETV Bharat Karnataka Team

Published : Feb 4, 2024, 4:35 PM IST

ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ರೂಪದರ್ಶಿ ಪೂನಂ ಪಾಂಡೆ ಬಳಸಿದ ವಿಧಾನ ವ್ಯಾಪಕ ಟೀಕೆಗೊಳಗಾಗಿದೆ. 'ಫೇಕ್​ ಡೆತ್ ನ್ಯೂಸ್' ಬಗ್ಗೆ ನೆಟ್ಟಿಗರು ಸೇರಿದಂತೆ ಸೆಲೆಬ್ರಿಟಿಗಳೂ ಸಹ ಕಿಡಿಕಾರುತ್ತಿದ್ದಾರೆ. ಆದ್ರೀಗ ಪತಿ ಸ್ಯಾಮ್ ಬಾಂಬೆ ಅವರು ಪೂನಂ ಪರ ನಿಂತಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಸ್ಯಾಮ್​ ಬಾಂಬೆ, ಪೂನಂ ಪಾಡೆ ಜೀವಂತವಾಗಿರುವುದಕ್ಕೆ ಸಂತೋಷವಾಗಿದೆ ಎಂದು ಸಂತಸ ಹಂಚಿಕೊಂಡರು. ಪೂನಂ ಅವರ 'ಫೇಕ್​ ಡೆತ್ ನ್ಯೂಸ್' ಬಗ್ಗೆ ಆಶ್ಚರ್ಯವಾಗಲಿಲ್ಲವೇ ಎಂದು ಪ್ರಶ್ನಿಸಿದಾಗ, "ಇಲ್ಲ, ಅವರು ಹಾಗೆ ಮಾಡಿದ್ದಕ್ಕೆ ನನಗೆ ಖುಷಿಯಾಗಿದೆ. ಅವರು ಬದುಕಿದ್ದಾರೆ. ನನಗೆ ಅಷ್ಟೇ ಸಾಕು" ಎಂದು ತಿಳಿಸಿದ್ದಾರೆ.

ಶುಕ್ರವಾರ ಬಾಲಿವುಡ್​ ನಟಿ ಪೂನಂ ಪಾಂಡೆ ಅವರ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಿಂದ ಪೋಸ್ಟ್ ಒಂದು ಶೇರ್ ಆಯಿತು. "ಗರ್ಭಕಂಠದ ಕ್ಯಾನ್ಸರ್‌ನಿಂದ ನಮ್ಮ ಪ್ರೀತಿಯ ಪೂನಂ ಅವರನ್ನು ನಾವು ಕಳೆದುಕೊಂಡಿದ್ದೇವೆ ಎಂಬುದನ್ನು ನಿಮಗೆ ತಿಳಿಸಲು ಬಹಳ ದುಃಖವಾಗಿದೆ" ಎಂದು ನಟಿಯ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಆದ ಪೋಸ್ಟ್​​ನಲ್ಲಿ ಬರೆಯಲಾಗಿತ್ತು. ಪೂನಂ ಗುರುವಾರ ರಾತ್ರಿ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ನಟಿಯ ಮ್ಯಾನೇಜರ್ ಅನೇಕ ಸೈಟ್‌ಗಳಿಗೆ ದೃಢಪಡಿಸಿದಾಗ, ಅನೇಕರು ಆಘಾತಕ್ಕೊಳಗಾದರು. ಆದರೆ ಈ ಸುದ್ದಿಯನ್ನು ಸ್ಯಾಮ್ ಬಾಂಬೆ ಅವರಿಗೆ ನಂಬಲು ಸಾಧ್ಯವಾಗಿರಲಿಲ್ಲವಂತೆ.

ಮಾತು ಮುಂದುವರಿಸಿದ ಸ್ಯಾಮ್ ಬಾಂಬೆ, "ನನಗೆ ಸುದ್ದಿ ಮುಟ್ಟಿದಾಗ ಏನೂ ಅನ್ನಿಸಲಿಲ್ಲ. ಕಳೆದುಕೊಂಡೆ ಎಂದೆನಿಸಲಿಲ್ಲ. ಅದು ಸಾಧ್ಯವಿಲ್ಲ ಅನಿಸಿತು. ಏಕೆಂದರೆ ನೀವು ಪರಸ್ಪರ ಕನೆಕ್ಟೆಡ್​ ಆಗಿದ್ದರೆ, ಎಲ್ಲವನ್ನೂ ಫೀಲ್​ ಮಾಡಬಹುದು. ನಾನು ಪ್ರತಿದಿನ ಪೂನಂ ಪಾಂಡೆ ಬಗ್ಗೆ ಯೋಚಿಸುತ್ತೇನೆ. ದಿನನಿತ್ಯ ಅವರಿಗಾಗಿ ಪ್ರಾರ್ಥಿಸುತ್ತೇನೆ. ಏನಾದರೂ ಸಂಭವಿಸಿದರೆ, ನನಗೆ ಗೊತ್ತಾಗುತ್ತದೆ" ಎಂದು ತಿಳಿಸಿದರು.

ಪೂನಂ ಅವರ ಮಾಜಿ ಪತಿ ಎಂದು ಉಲ್ಲೇಖಿಸದ್ದನ್ನೂ ಸ್ಯಾಮ್ ಸರಿಪಡಿಸಿದರು. "ಇಲ್ಲ, ನಾವಿನ್ನೂ ವಿಚ್ಛೇದನ ಪಡೆದಿಲ್ಲ" ಎಂದು ಸ್ಪಷ್ಟಪಡಿಸಿದರು. ನಟಿ ಪ್ರಸ್ತುತ ವ್ಯಾಪಕ ಖಂಡನೆ ಸ್ವಿಕರಿಸುತ್ತಿದ್ದರೂ ಕೂಡ, ಸ್ಯಾಮ್ ಅವರು ಪೂನಂ ಅವರ ಉದ್ದೇಶಗಳನ್ನು ಎಂದಿಗೂ ಅನುಮಾನಿಸುವುದಿಲ್ಲ ಎಂದು ತಿಳಿಸುವ ಮೂಲಕ ಪತ್ನಿ ಪರ ಬ್ಯಾಟಿಂಗ್​ ಮಾಡಿದರು. "ಅವರು ಇನ್ನೂ ಜೀವಂತವಾಗಿರುವುದಕ್ಕೆ ನನಗೆ ಸಂತೋಷವಾಗಿದೆ, ಅವರು ಜಗತ್ತಿಗೆ ಕೊಡಬೇಕಿರುವುದು ಇನ್ನೂ ಸಾಕಷ್ಟಿವೆ. ನನ್ನ ಮಾತನ್ನು ಕೇಳಿ, ಯಾರಾದರೂ ತಮ್ಮ ಸೆಲೆಬ್ರಿಟಿ ಅಥವಾ ಪಾಪ್ಯುಲರ್ ಇಮೇಜ್ ಅನ್ನು ಲೆಕ್ಕಿಸದೇ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿದರೆ, ಅದನ್ನು ನಾವು ಗೌರವಿಸೋಣ. ಪೂನಂ ಪಾಂಡ ಟೈಮ್​ಲೆಸ್. ಅವರು ಬರುವ ಅನೇಕ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುತ್ತಾರೆ" ಎಂದು ತಿಳಿಸಿದರು.

ಇದನ್ನೂ ಓದಿ:ಫೇಕ್​​ ಡೆತ್ ನ್ಯೂಸ್‌ಗೆ ವ್ಯಾಪಕ ಖಂಡನೆ: ಪೂನಂ ಪಾಂಡೆ ಬಂಧನಕ್ಕೆ ಒತ್ತಾಯ

ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ತಮ್ಮ ಸಾವಿನ ನಕಲಿ ಸುದ್ದಿ ಸೃಷ್ಟಿಸಿ ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿರುವ ನಟಿ ಪೂನಂ ಪಾಂಡೆ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಚಾರಕ್ಕಾಗಿ ಈ ರೀತಿ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನು "ಒಂದೊಳ್ಳೆ ಕಾರಣಕ್ಕಾಗಿ" ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:'ಫೇಕ್​ ಡೆತ್​ ನ್ಯೂಸ್'; ​ಪೂನಂ ಪಾಂಡೆಗೆ ಸೆಲೆಬ್ರಿಟಿಗಳಿಂದ ಛೀಮಾರಿ, ನಟಿ ಪರ ನಿಂತ ಆರ್​ಜಿವಿ!

ನಟಿಯ ಲೇಟೆಸ್ಟ್ ಇನ್​ಸ್ಟಾಗ್ರಾಮ್​ ಪೋಸ್ಟ್​​ನಲ್ಲಿ, "ನಾವು ಈ ಘಟನೆ ಹಿಂದಿರುವ ಕಾರಣದ ಮೇಲೆ ನಂಬಿಕೆ ಇಡುತ್ತೇವೆ ಮತ್ತು ನಾವು 4 ತಿಂಗಳ ಹಿಂದೆ ಸೂಕ್ತ ಉದ್ದೇಶಗಳೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದ ಈ ಅಭಿಯಾನದ ಪರವಾಗಿ ನಿಲ್ಲುತ್ತೇವೆ. "ಯಾವುದೇ ಔಷಧೀಯ ಕಂಪನಿಯ ಭಾಗವಾಗಿಲ್ಲ". ಇದೆಲ್ಲವನ್ನೂ ಉತ್ತಮ ಉದ್ದೇಶದೊಂದಿಗೆ ಮಾಡಲಾಗಿದೆ'' ಎಂದು ನಟಿ ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details