ಬಾಹುಬಲಿ ಮತ್ತು ಮಾಹಿಷ್ಮತಿ ಕುರಿತು ಜಗತ್ತು ಈವರೆಗೂ ಕೇಳಿರದ ಅನೇಕ ಘಟನೆಗಳಿವೆ. ಸಂಪೂರ್ಣ ಕಥೆಯನ್ನೀಗ ಅನಿಮೇಟೆಡ್ ಫಾರ್ಮೆಟ್‌ನಲ್ಲಿ ರವಾನಿಸಲಾಗುತ್ತಿದೆ. ನಟ ಶರದ್ ಕೇಲ್ಕರ್ ಹಲವು ಐತಿಹಾಸಿಕ ಪ್ರಾಜೆಕ್ಟ್‌ಗಳಿಗೆ ಧ್ವನಿ ನೀಡಿ ಖ್ಯಾತರಾಗಿದ್ದಾರೆ. ಇದೀಗ ಬಾಹುಬಲಿ ಸಿನಿಮಾ ನಾಯಕ ಪ್ರಭಾಸ್ ಅವರ ದೃಶ್ಯಕ್ಕೆ ಕಂಠದಾನ ಮಾಡಿ ಗಮನ ಸೆಳೆದಿದ್ದಾರೆ. ಈ ಬಗ್ಗೆ ತಮ್ಮ ಖುಷಿ ಹಂಚಿಕೊಂಡರು.
''ನಾನೊಬ್ಬ ನಟನಾಗಿ ನನ್ನ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಬಲ್ಲೆ. ವಿವಿಧ ಬಗೆಯ ಪಾತ್ರಗಳನ್ನು ಮಾಡುತ್ತಾ ಬಂದಿದ್ದೇನೆ. ಆದಾಗ್ಯೂ ಒಳ್ಳೆಯ ಕಾಲಕ್ಕೆ ಕಾಯುತ್ತಿದ್ದೇನೆ. ಅತ್ಯುತ್ತಮವಾದದ್ದು ಬರಬಹುದೆಂಬ ನಿರೀಕ್ಷೆಯಲ್ಲಿದ್ದೇನೆ. ಧ್ವನಿ ನೀಡುವಾಗ ಯಾವ ಆಯಾಮಕ್ಕೂ ತೆಗೆದುಕೊಂಡು ಹೋಗಬಲ್ಲೆ. ಬಾಹುಬಲಿಗೆ ಧ್ವನಿ ನೀಡಿದ್ದು, ಇದರ ಕೀರ್ತಿ ರಾಜಮೌಳಿ ಸರ್‌ಗೆ ಸಲ್ಲಬೇಕು. ಪಾತ್ರಕ್ಕೆ ತಕ್ಕಂತೆ ಡಬ್ ಮಾಡಲು ಸ್ವಾತಂತ್ರ್ಯ ನೀಡಿದರು. ಮೊದಲ ಭಾಗದಲ್ಲೇ ಸಂಜೆ ಬಂದು ಎಲ್ಲಾ ಡಬ್‌ಗಳನ್ನು ಪರೀಕ್ಷಿಸುತಿದ್ದರು. ಎರಡನೇ ಭಾಗದ ಡಬ್ಬಿಂಗ್ ನಡೆಯುವಾಗ ಬರಲಿಲ್ಲ. ನನ್ನ ಮೇಲೆ ಸಂಪೂರ್ಣ ವಿಶ್ವಾಸ ಇಟ್ಟಿದ್ದರು. ನಿಮ್ಮ ಕೆಲಸ ಮಾಡಿ ಎಂದು ಸ್ಫೂರ್ತಿ ನೀಡುತ್ತಿದ್ದರು. ಅವರಿಂದ ಶಹಬ್ಬಾಸ್ ಅನ್ನಿಸಿಕೊಂಡಿದ್ದು ಮರೆಯಲಾಗದ ಅನುಭವ'' - ನಟ ಶರದ್ ಕೇಲ್ಕರ್.