ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಸಿಕಂದರ್' ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಜೂನ್ 18ರಂದು ಚಿತ್ರೀಕರಣ ಪ್ರಾರಂಭವಾಗಿದ್ದು, ಜುಲೈ 1ರಂದು ಮೊದಲ ಹಂತದ ಶೂಟಿಂಗ್ ಶೆಡ್ಯೂಲ್ ಪೂರ್ಣಗೊಂಡಿದೆ. ಇದು ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ಇದೀಗ, ಪಾಕಿಸ್ತಾನಿ ಅಭಿಮಾನಿಯೊಬ್ಬರು 'ಸಿಕಂದರ್'ನ ಆಕರ್ಷಕ ಪೋಸ್ಟರ್ ಮಾಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ, ಸಲ್ಮಾನ್ ಖಾನ್ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕುರ್ಚಿಯಲ್ಲಿ ಕುಳಿತಿದ್ದು, ಪಕ್ಕದಲ್ಲಿ ಶ್ವಾನವೊಂದಿದೆ. ಪೋಸ್ಟರ್ ಹಂಚಿಕೊಂಡ ಪಾಕಿಸ್ತಾನಿ ಅಭಿಮಾನಿ, "ಸಲ್ಮಾನ್ ಖಾನ್ರಿಂದ ಸ್ಫೂರ್ತಿ ಪಡೆದು, ಅವರ ಮುಂಬರುವ ಚಿತ್ರ 'ಸಿಕಂದರ್'ಗಾಗಿ ಇದನ್ನು ರಚಿಸಲಾಗುತ್ತಿದೆ'' ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಸಾಕಷ್ಟು ಲೈಕ್ಸ್, ಕಾಮೆಂಟ್‌ಗಳನ್ನು ಸ್ವೀಕರಿಸಿದೆ. ಅಭಿಮಾನಿಯೋರ್ವರು ಪ್ರತಿಕ್ರಿಯಿಸಿ, "ನನಗೆ ಅವರು ಜಾನಿ ಡೆಪ್‌ನಂತೆ ಕಂಡರು" ಎಂದು ಕಾಮೆಂಟ್ ಮಾಡಿದ್ದಾರೆ. ''ಹಾಲಿವುಡ್ ಸಲ್ಮಾನ್ ಖಾನ್" ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.