ಕರ್ನಾಟಕ

karnataka

ETV Bharat / entertainment

37ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪ್ರದ್ಮಶ್ರೀ ಪುರಸ್ಕೃತೆ ಕಂಗನಾ ರಣಾವತ್ - Kangana Ranaut birthday - KANGANA RANAUT BIRTHDAY

ಹಲವು ಹಿಟ್ ಸಿನಿಮಾಗಳ ಜೊತೆಗೆ ಸ್ತ್ರೀ ಪ್ರಧಾನ ಚಿತ್ರಗಳಲ್ಲಿ ತನ್ನ ಮನಮೋಹಕ ಅಭಿನಯದಿಂದಲೇ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಹೊಂದಿರುವ ಪ್ರದ್ಮಶ್ರೀ ಪುರಸ್ಕೃತೆ ಕಂಗನಾ ರಣಾವತ್ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಪ್ರದ್ಮಶ್ರೀ ಪುರಸ್ಕೃತೆ ಕಂಗನಾ ರಣಾವತ್
ಪ್ರದ್ಮಶ್ರೀ ಪುರಸ್ಕೃತೆ ಕಂಗನಾ ರಣಾವತ್

By ETV Bharat Karnataka Team

Published : Mar 23, 2024, 6:25 PM IST

ಹೈದರಾಬಾದ್ : ಬಾಲಿವುಡ್​ನ ಬಹುಬೇಡಿಕೆಯ ನಟಿ ಹಾಗೂ ಪ್ರದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಂಗನಾ ರಣಾವತ್ ಇಂದು ಮಾರ್ಚ್ 23 ರಂದು ತಮ್ಮ 37 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂಭ್ರಮದಂದು ನಟಿ ತಮ್ಮ ಕುಟುಂಬದೊಂದಿಗೆ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಹಿಮಾಚಲ ಪ್ರದೇಶದ ಪ್ರಸಿದ್ಧ ಬಾಗ್ಲಾಮುಖಿ ಜಿ ಮತ್ತು ಶಕ್ತಿಪೀಠ ಜ್ವಾಲಾ ಜಿ ಸನ್ನಿಧಿಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ.

ಕಂಗನಾ ರಣಾವತ್ ಅವರು ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ದೇವಾಲಯಗಳಿಗೆ ಭೇಟಿ ನೀಡಿರುವ ಫೋಟೋಗಳನ್ನು ಪೋಸ್ಟ್​ ಮಾಡಿಕೊಂಡಿದ್ದಾರೆ. "ಈ ವರ್ಷವೂ ನನ್ನ ಜನ್ಮದಿನದಂದು ನಾನು ಮಾ ಶಕ್ತಿಯ ದರ್ಶನ ಪಡೆದಿದ್ದೇನೆ. ಹಿಮಾಚಲದಲ್ಲಿ ವಿಶ್ವವಿಖ್ಯಾತ ಬಾಗ್ಲಾಮುಖಿಜಿಯ ದರ್ಶನ ಪಡೆದ ನಂತರ, ನಾನು ನನ್ನ ಕುಟುಂಬದೊಂದಿಗೆ ಶಕ್ತಿಪೀಠ ಜ್ವಾಲಾ ಜಿಯ ದರ್ಶನವನ್ನು ಹೊಂದಿದ್ದೇನೆ. ಇದರಲ್ಲಿ ಪುರಾತನ ಶಕ್ತಿಪೀಠ, ಮಾ ಸತಿಯ ಸ್ವಾಧಿಷ್ಠಾನ (ಜಿಂಭಾ) ಪ್ರಾಚೀನ ಕಾಲದಿಂದಲೂ ಇಲ್ಲಿ ಬಿದ್ದಿದ್ದು, "ಜ್ವಾಲೆಯು ಉರಿಯುತ್ತಿದೆ. ಯಾವುದೇ ನೀರು ಅಥವಾ ವಸ್ತುವು ಆ ಜ್ವಾಲೆಯನ್ನು ನಂದಿಸಲು ಸಾಧ್ಯವಿಲ್ಲ.

ಪಂಡಿತ್ ಜೀ ಅವರು ಜ್ವಾಲೆಯ ಮೇಲೆ ಕುಂಡದಿಂದ ನೀರನ್ನು ಸುರಿದಾಗ, ಆ ನೀರಿಗೂ ಬೆಂಕಿ ಹೊತ್ತಿಕೊಂಡಿತ್ತು. ಮಾತೃದೇವತೆಯ ಈ ದಿವ್ಯ ರೂಪವನ್ನು ಕಂಡು ಎಲ್ಲೆಡೆ ಭಕ್ತರು ಆಶ್ಚರ್ಯಚಕಿತರಾಗಿ ಸ್ತುತಿಗಳನ್ನು ಹಾಡಲು ಪ್ರಾರಂಭಿಸಿದರು. ನಾನು ನನ್ನ ಬಾಲ್ಯದಲ್ಲಿ ನಿಯಮಿತವಾಗಿ ಜ್ವಾಲಾ ದೇವಿಯ ದರ್ಶನ ಮಾಡುತ್ತಿದ್ದೆ, ಇಂದು ಅನೇಕ ವರ್ಷಗಳ ನಂತರ ನನಗೆ ತಾಯಿ ಕರೆ ಮಾಡಿದ್ದಾರೆ. ನಾನು ಎಲ್ಲರ ಸಂತೋಷ ಮತ್ತು ಸಮೃದ್ಧಿಯನ್ನು ಬಯಸುತ್ತೇನೆ. ಜೈ ಮಾತಾ ದಿ, ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ :2025ರಲ್ಲಿ ಸೆಟ್ಟೇರಲಿದೆ ರಣ್​ವೀರ್​, ಕಿಯಾರಾ ನಟನೆಯ 'ಡಾನ್​​ 3'? - Don 3

ABOUT THE AUTHOR

...view details