ಕರ್ನಾಟಕ

karnataka

ETV Bharat / entertainment

ಗಟ್ಟಿಮೇಳ ಖ್ಯಾತಿಯ ನಿಶಾ ಮೊದಲ ಸಿನಿಮಾದ ಹಾಡಿಗೆ ಧ್ವನಿಯಾದ ಜಸ್ಕರಣ್​ ಸಿಂಗ್​ - ANSHU

ನಿಶಾ ರವಿಕೃಷ್ಣನ್ ಅಭಿನಯದ ಚೊಚ್ಚಲ ಚಿತ್ರ 'ಅಂಶು'ವಿನಿಂದ ಹಾಡೊಂದು ಅನಾವರಣಗೊಂಡಿದೆ.

Actress Nisha Ravikrishnan, Singer Jaskaran Singh
ನಟಿ ನಿಶಾ ರವಿಕೃಷ್ಣನ್, ಗಾಯಕ ಜಸ್ಕರಣ್​ ಸಿಂಗ್​ (Photo: ETV Bharat)

By ETV Bharat Entertainment Team

Published : Nov 12, 2024, 8:02 PM IST

'ಗಟ್ಟಿಮೇಳ' ಧಾರಾವಾಹಿ ಖ್ಯಾತಿಯ ನಿಶಾ ರವಿಕೃಷ್ಣನ್ ಅಭಿನಯದ ಮೊದಲ ಸಿನಿಮಾ ಅಂಶು. ಟ್ರೇಲರ್​​ನಿಂದ ನೋಡುಗರಲ್ಲಿ ಕುತೂಹಲ ಹುಟ್ಟಿಸಿರೋ ಈ ಚಿತ್ರದ ಅರ್ಥಪೂರ್ಣ ಹಾಡೊಂದು ಇದೀಗ ಬಿಡುಗಡೆಗೊಂಡಿದೆ. ಕೇಳಿದಾಕ್ಷಣವೇ ನೇರವಾಗಿ ಎದೆಗಿಳಿದು ಬಿಡುವ ಈ ಹಾಡಿಗೀಗ ಕೇಳುಗರಿಂದ ಭರಪೂರ ಮೆಚ್ಚುಗೆ ಹರಿದು ಬರಲಾರಂಭಿಸಿವೆ.

ಚಿತ್ರ ಸನ್ನಿವೇಶಗಳಿಗೆ ತಕ್ಕುದಾಗಿ ರೂಪುಗೊಂಡಂತಿರುವ ಈ ಹಾಡು ಒಂದಿಡೀ ಕಥೆಯ ಆತ್ಮವನ್ನೇ ತನ್ನೊಳಗೆ ಬಚ್ಚಿಟ್ಟುಕೊಂಡಿರುವಂತೆ ಭಾಸವಾಗುತ್ತಿದೆ. 'ಅಂಶು' ಈ ಹಾಡಿನ ಮೂಲಕವೇ ಪ್ರೇಕ್ಷಕರಿಗೆ ಮತ್ತಷ್ಟು ಆಪ್ತವಾಗಿದೆ.

ಮೂಲತಃ ಪಂಜಾಬಿನವರಾಗಿದ್ದರೂ ಮ್ಯೂಸಿಕ್ ರಿಯಾಲಿಟಿ ಶೋ ಮೂಲಕ ಕನ್ನಡದವರೇ ಎಂಬಂತಾಗಿರುವಾತ ಗಾಯಕ ಜಸ್ಕರಣ್​ ಸಿಂಗ್​​. ಕನ್ನಡದಲ್ಲಿ ಬಹುಬೇಡಿಕೆ ಹೊಂದಿರುವ ಇವರು ಈ ಹಾಡಿಗೆ ದನಿಯಾಗಿದ್ದಾರೆ. ''ನೀರ ಮೇಲೆ ಗುಳ್ಳೆ. ಬಿಂಬ ಕಾಣೋ ವೇಳೆ, ನಿಜವು ಒಂದು ಸುಳ್ಳೇ ಅಲೆಮಾರಿ... ಮುಗಿದ ದಾರಿ'' ಎಂಬ ಸಮ್ಮೋಹಕ ಸಾಲುಗಳನ್ನು ಮಹೇಂದ್ರ ಗೌಡ ಅವರು ಒದಗಿಸಿದ್ದಾರೆ. ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಹಾಡಿಗೆ ಕೇಳುಗರ ಕಡೆಯಿಂದ ಬರುತ್ತಿರೋ ಪ್ರತಿಕ್ರಿಯೆಗಳೇ ಎಲ್ಲವನ್ನೂ ಹೇಳುವಂತಿವೆ. ಇದರ ದೃಶ್ಯಗಳ ಮೂಲಕ ನಿಶಾ ರವಿಕೃಷ್ಣನ್ ಪಾತ್ರದ ಒಂದಷ್ಟು ಚಹರೆಗಳನ್ನೂ ಕೂಡಾ ಚಿತ್ರತಂಡ ಜಾಹೀರು ಮಾಡಿದೆ.

ಇದನ್ನೂ ಓದಿ:ಶ್ರೀಮುರುಳಿ, ರುಕ್ಮಿಣಿ ವಸಂತ್ 'ಬಘೀರ' ಸಿನಿಮಾದ ಈವರೆಗಿನ ಕಲೆಕ್ಷನ್​​​ ಎಷ್ಟು ಗೊತ್ತಾ?

ಚಿತ್ರದಲ್ಲಿ ಸುನೀಲ್ ನರಸಿಂಹಮೂರ್ತಿ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಆಶಾ ಎಂ ಥಾಮಸ್ ವಸ್ತ್ರವಿನ್ಯಾಸದ ಮೂಲಕ ಈ ಚಿತ್ರ ಕಳೆಗಟ್ಟಿಕೊಂಡಿದೆ. ಜಿ.ವಿ ಪ್ರಕಾಶ್, ನವ ಪ್ರತಿಭೆ ವಿಘ್ನೇಶ್ ಶಂಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಎಂ.ಸಿ ಚನ್ನಕೇಶವ ನಿರ್ದೇಶನದ ಚೊಚ್ಚಲ ಚಿತ್ರ. ಗ್ರಹಣ ಎಲ್ ಎಲ್ ಪಿ ಬ್ಯಾನರ್​​​ನಡಿ ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚೆಲುವರಾಜ್, ಜಯಚಂದ್ರ ಯಲ್ಲಪ್ಪ, ಪ್ರಮೋದ್ ಚಿನ್ನಸ್ವಾಮಿ, ಡಾ.ಮಧುರಾಜ್ ಸಹ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಇದೇ ನವೆಂಬರ್ 21ರಂದು ಅಂಶು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.

'ಅಂಶು' ಪೋಸ್ಟರ್ (Photo: ETV Bharat)

ಇದನ್ನೂ ಓದಿ:'ಅವನಲ್ಲ ಅವಳು': ಲಿಂಗ ಬದಲಿಸಿಕೊಂಡ ಸಿನಿ ಸೆಲೆಬ್ರಿಟಿಗಳಿವರು; ಒಮ್ಮೆ ನೋಡಿಬಿಡಿ

ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಭದ್ರ ಸ್ಥಾನ ಗಿಟ್ಟಿಸಿಕೊಳ್ಳುವ ಕೆಲವರು ಹಿರಿತೆರೆಯಲ್ಲೂ ಸಾಧನೆ ಮಾಡಿರುವ ಹಲವು ಉದಾಹರಣೆಗಳಿವೆ. ಕಿರುತೆರೆಯ ಬಹುತೇಕ ಕಲಾವಿದರು ಹಿರಿತೆರೆಯಲ್ಲಿ ಛಾಪು ಮೂಡಿಸಬೇಕು ಎಂಬ ಕನಸು ಕಾಣೋದು ಸಹಜ. ಈ ಪೈಕಿ ಕೆಲವರು ಯಶಸ್ವಿಯಾದರೆ, ಕೆಲವರು ಬಂದ ದಾರಿಯಲ್ಲೇ ಹಿಂದೆ ಹೋಗ್ತಾರೆ. ಸದ್ಯ ಗಟ್ಟಿಮೇಳ ಧಾರಾವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ ಅಮೂಲ್ಯ ಪಾತ್ರಧಾರಿ ನಿಶಾ ರವಿಕೃಷ್ಣನ್ 'ಅಂಶು' ಎಂಬ ಮಹಿಳಾ ಪ್ರಧಾನ ಸಿನಿಮಾ ಮೂಲಕ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಲು ಸಜ್ಜಾಗುತ್ತಿದ್ದಾರೆ. ಸಿನಿಮಾ ಎಷ್ಟರ ಮಟ್ಟಿಗೆ ಯಶ ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details