ಕರ್ನಾಟಕ

karnataka

ETV Bharat / entertainment

ನಮ್ ಗಣಿ ಬಿ.ಕಾಂ ಪಾಸ್ ಸೀಕ್ವೆಲ್​ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಅಭಿಷೇಕ್ ಶೆಟ್ಟಿ - Nam Gani BCom Pass

ನಮ್ ಗಣಿ ಬಿ.ಕಾಂ ಪಾಸ್ ಚಿತ್ರದ ಸೀಕ್ವೆಲ್ ಬರಲಿದೆ.

Nam Gani BCom Pass
ನಮ್ ಗಣಿ ಬಿ.ಕಾಂ ಪಾಸ್

By ETV Bharat Karnataka Team

Published : Feb 23, 2024, 2:30 PM IST

ಒಬ್ಬ ನಟ ನಟನೆ ಮೇಲೆ‌ ಮಾತ್ರ ಗಮನ ಹರಿಸಬೇಕು. ಆದರೆ, ನಿರ್ದೇಶಕನಾದವನು ಎಲ್ಲಾ ಜವಾಬ್ದಾರಿಗಳನ್ನು ತಮ್ಮ ಹೆಗಲ ಮೇಲಿರಿಸಿ ಸಾಗಬೇಕು. ಹಾಗೆ ನೋಡಿದರೆ ಏಕಕಾಲಕ್ಕೆ ನಟನೆ ಹಾಗೂ ನಿರ್ದೇಶನ ಮಾಡುವುದು ಸುಲಭದ ಮಾತಲ್ಲ. ಸಾಹಸವೇ ಸರಿ. ಅಂಥ ಪ್ರಯತ್ನದಲ್ಲಿ ಗೆದ್ದವರು ಕೆಲವೊಂದಿಷ್ಟು ಮಂದಿ. ಆ ಸಾಲಿನಲ್ಲಿ ಯುವ ನಿರ್ದೇಶಕ ಹಾಗೂ ನಟ ಅಭಿಷೇಕ್ ಶೆಟ್ಟಿ ಇದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿದ್ದಾರೆ.

ನಮ್ ಗಣಿ ಬಿ.ಕಾಂ ಪಾಸ್

ಹೌದು, ಅಭಿಷೇಕ್ ಶೆಟ್ಟಿ‌ ನಟನೆ ಜೊತೆಗೆ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದಾರೆ. ನಮ್ ಗಣಿ ಬಿ.ಕಾಂ ಪಾಸ್ ಚಿತ್ರದ ಮೂಲಕ ನಟನಾಗಿ ಹಾಗೂ ನಿರ್ದೇಶಕರಾಗಿ ಸ್ಯಾಂಡಲ್ ವುಡ್​ಗೆ ಹೆಜ್ಜೆ ಇಟ್ಟವರು. ಮೊದಲ ಚಿತ್ರದಲ್ಲಿಯೇ ಗಮನಸೆಳೆದ ಅಭಿಷೇಕ್​ ಆನಂತರ 'ಗಜಾನನ ಅಂಡ್ ಗ್ಯಾಂಗ್' ಚಿತ್ರ ನಿರ್ದೇಶಿಸಿ ಸೈ ಎನಿಸಿಕೊಂಡರು. ಅನೀಶ್​​ ಅವರ ಆರಾಮ್ ಅರವಿಂದ್ ಸ್ವಾಮಿ ಸಿನಿಮಾಗೂ ಆ್ಯಕ್ಷನ್​ ಕಟ್​​​ ಹೇಳಿರುವ ಅಭಿಷೇಕ್ ಶೆಟ್ಟಿ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಆರಾಮ್ ಅರವಿಂದ್ ಸ್ವಾಮಿ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಅಭಿಷೇಕ್ ಶೆಟ್ಟಿ, ಈಗ ಹೊಸ ಚಿತ್ರ ಘೋಷಿಸಿದ್ದಾರೆ. ತಮ್ಮ ಜನ್ಮದಿನದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ರಿವೀಲ್ ಮಾಡಿದ್ದಾರೆ. ನಮ್ ಗಣಿ ಬಿ.ಕಾಂ ಪಾಸ್ ಸೀಕ್ವೆಲ್​ಗೆ ಮುನ್ನುಡಿ ಬರೆದಿದ್ದು, ಫಸ್ಟ್ ಲುಕ್ ಕೂಡ ರಿವೀಲ್ ಮಾಡಿದ್ದಾರೆ. ಸೂಟು ಬೂಟ್ ತೊಟ್ಟು, ಕೈಯಲ್ಲಿ ಕಾಫಿ ಕಪ್, ಬನ್ ಹಿಡಿದು ದುಬಾರಿ ಕಾರಿನ ಮುಂದೆ ಸ್ಟೈಲಿಶ್ ಆಗಿ ಅಭಿ ಪೋಸ್ ಕೊಟ್ಟಿದ್ದಾರೆ.

ಇದನ್ನೂ ಓದಿ:ಸಿನಿಮಾ ಸಂಖ್ಯೆ ಏರಿಕೆಯಾದರೂ ಇಳಿಕೆಯಾಯ್ತು ಪ್ರೇಕ್ಷಕರ ಸಂಖ್ಯೆ: ಚಿತ್ರತಂಡದವರು ಹೀಗಂದ್ರು!

ನಮ್ ಗಣಿ ಬಿ.ಕಾಂ ಪಾಸ್ 2 ಚಿತ್ರದ ಮೂಲಕ ಅಭಿಷೇಕ್ ಶೆಟ್ಟಿ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟು, ಹೀರೋ ಆಗಿ ಪ್ರೇಕ್ಷಕರ ಎದುರು ಬರಲಿದ್ದಾರೆ. ಅವರ ಹೊಸ‌ ಕನಸಿಗೆ ಬಿ ಎಸ್ ಪ್ರಶಾಂತ್ ಶೆಟ್ಟಿ ಶಕ್ತಿಯಾಗಿ ನಿಂತಿದ್ದಾರೆ. ಅದ್ವಿ ಕ್ರಿಯೇಷನ್ ಅಡಿ ಪ್ರಶಾಂತ್ ಸೀಕ್ವೆಲ್​ಗೆ ಹಣ ಹಾಕುತ್ತಿದ್ದು, ಸುಮಂತ್ ಆಚಾರ್ಯ ಕ್ಯಾಮರಾ ಹಿಡಿಯಲಿದ್ದಅರೆ. ಉಮೇಶ್ ಆರ್ ಬಿ ಸಂಕಲನ ನಿರ್ವಹಿಸಲಿದ್ದಾರೆ. ಆನಂದ್ ರಾಜವಿಕ್ರಂ ಟ್ಯೂನ್ ಹಾಕಲಿದ್ದಾರೆ. ನಮ್ ಗಣಿ ಬಿ.ಕಾಂ ಪಾಸ್-2 ಸಿನಿಮಾದ ಕಥೆ ಬರವಣಿಗೆ ಹಂತದಲ್ಲಿದ್ದು, ಶೀಘ್ರದಲ್ಲೇ ಮತ್ತೊಂದು ಅಪ್​​ಡೇಟ್​ನೊಂದಿಗೆ ಅಭಿಷೇಕ್ ಶೆಟ್ಟಿ ನಿಮ್ಮ ಮುಂದೆ ಹಾಜರಾಗಲಿದ್ದಾರೆ.

ಇದನ್ನೂ ಓದಿ:ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ಆರೋಪ: ನಟ ದರ್ಶನ್ ವಿರುದ್ಧ ದೂರು

ABOUT THE AUTHOR

...view details