ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಪ್ರಸಕ್ತ ರಾಜಕೀಯ ವಿಷಯಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಬಂದವರು. ಇದೀಗ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ, ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯನ್ನು ಟೀಕಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್ (ಅಧಿಕೃತ) ಖಾತೆಯಲ್ಲಿ, 'ನಿಮಗೆ ಹಿಂದಿ ಗೊತ್ತು. ನೀವು ಹಿಂದಿ ಮಾತನಾಡುತ್ತೀರಿ. ನೀವು ನಮ್ಮನ್ನೂ ಹಿಂದಿ ಮಾತನಾಡುವಂತೆ ಒತ್ತಾಯಿಸುತ್ತಿದ್ದೀರಿ. ಆದರೆ ಈ ಹಾಸ್ಯಾಸ್ಪದ ಆಟ ನಮ್ಮೊಂದಿಗೆ ಕೆಲಸ ಮಾಡುವುದಿಲ್ಲ' ಎಂದಿದ್ದಾರೆ.
ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಗೆ ಸಂಬಂಧಿಸಿದ ಚರ್ಚೆಗಳು ಮುಂದುವರಿದಿವೆ. ಈ ನೀತಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ಹೇಳುವ ಮೂಲಕ ಎನ್ಇಪಿ 2020ನ್ನು ತಿರಸ್ಕರಿಸಿದ ತಮಿಳು ನಾಡು ಸರ್ಕಾರದ ನಿರ್ಧಾರವನ್ನು ಸಿಎಂ ಎಂ.ಕೆ.ಸ್ಟಾಲಿನ್ ಇತ್ತೀಚೆಗೆ ಸಮರ್ಥಿಸಿಕೊಂಡಿದ್ದರು.
ಇದೀಗ ನಮ್ಮ ರಾಜ್ಯ ತ್ರಿಭಾಷಾ ನೀತಿಯನ್ನು ಒಪ್ಪುವುದಿಲ್ಲ ಮತ್ತು ದ್ವಿಭಾಷಾ ನೀತಿಯನ್ನೇ ಅಳವಡಿಸಿಕೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಕೂಡಾ ತಿಳಿಸಿದ್ದಾರೆ. ಎನ್ಇಪಿಯನ್ನು ತಮಿಳುನಾಡು ಸರ್ಕಾರ ತನ್ನ ನಿಲುವನ್ನು ರಾಜಕೀಯಗೊಳಿಸುತ್ತಿದೆ ಎಂಬ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ:ನೀವಿನ್ನೂ ಶ್ರೀಮುರುಳಿ ನಟನೆಯ 'ಬಘೀರ' ವೀಕ್ಷಿಸಿಲ್ಲವೇ ? ನಾಳೆ ಮಧ್ಯಾಹ್ನ ಟಿವಿಯಲ್ಲಿ ಪ್ರಸಾರ
ಕುಂಭಮೇಳ- ಪ್ರಕಾಶ್ ರಾಜ್ ನಕಲಿ ಫೋಟೋ ವೈರಲ್: ಜನವರಿ 13, 2025ರಂದು ಮಹಾ ಕುಂಭಮೇಳ ಪ್ರಾರಂಭವಾಗಿದ್ದು, ಜನಸಾಮಾನ್ಯರೂ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಪವಿತ್ರ ಸ್ನಾನ ಮಾಡಿದ್ದಾರೆ. ಸೆಲೆಬ್ರಿಟಿಗಳೂ ಸೇರಿದಂತೆ ಗಣ್ಯರ ನಕಲಿ ಫೋಟೋಗಳನ್ನು ರಚಿಸಿ ವೈರಲ್ ಮಾಡಲಾಗಿದೆ. ಅದರಂತೆ ಪ್ರಕಾಶ್ ರಾಜ್ ಅವರ ಫೋಟೋ ಕೂಡಾ ವೈರಲ್ ಆಗಿತ್ತು. ಆದರೆ ಇದು ನಕಲಿ ಫೋಟೋ. ಪವಿತ್ರ ಮಹಾ ಕುಂಭಮೇಳದಲ್ಲಿ ಭಾಗಿಯಾಗಿರುವ ನಕಲಿ ಫೋಟೋ ವೈರಲ್ ಆದ ಬೆನ್ನಲ್ಲೇ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಕಾರಣಕರ್ತರು ಎಂದು ಆರೋಪಿಸಲಾದ ಪ್ರಶಾಂತ್ ಸಂಬರಗಿ ವಿರುದ್ಧವೂ ಕೇಸ್ ದಾಖಲಾಗಿದೆ.
ಇದನ್ನೂ ಓದಿ:ಒಂದೇ ವಾರದಲ್ಲಿ 200 ಕೋಟಿಗೂ ಹೆಚ್ಚು: ಹ್ಯಾಟ್ರಿಕ್ ಗೆಲುವಿಗೆ ರಶ್ಮಿಕಾ ರೆಡಿ, ವಿಕ್ಕಿ ವೃತ್ತಿಜೀವನದಲ್ಲೇ ಬಿಗ್ ಹಿಟ್ ಸುಳಿವು