ಕರ್ನಾಟಕ

karnataka

ETV Bharat / entertainment

KGF 2, ಬಾಹುಬಲಿ 2, RRR, ದಂಗಲ್ ಯಾವುದೂ ಅಲ್ಲವೇ ಅಲ್ಲ: ಹಾಗಾದರೆ 25 ಕೋಟಿ ಟಿಕೆಟ್ ಮಾರಾಟವಾದ ಚಿತ್ರ ಯಾವುದು ಗೊತ್ತಾ? - Most Tickets Sold Movie In India

ವಿಶ್ವದಾದ್ಯಂತ ಸಂಚಲನ ಮೂಡಿಸಿದ ಕೆಜಿಎಫ್​​-2, ಬಾಹುಬಲಿ, ಆರ್‌ಆರ್‌ಆರ್ ಮತ್ತು ದಂಗಲ್‌ನಂತಹ ಚಲನಚಿತ್ರಗಳು ಸಹ ಸಾಧಿಸದ ದಾಖಲೆಯನ್ನು ಭಾರತೀಯ ಚಲನಚಿತ್ರವೊಂದು ಪಡೆದುಕೊಂಡಿದೆ. ಥಿಯೇಟರ್‌ಗಳಲ್ಲಿ ಅತಿ ಹೆಚ್ಚು ವೀಕ್ಷಿಸಿದ ಚಿತ್ರ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ. ಯಾವುದಾ ಚಿತ್ರ ಅನ್ನೋದು ನಿಮ್ಮ ಕುತೂಹಲವೇ? ಇದೇ ನೋಡಿ ಆ ಸಿನಿಮಾ

KGF 2. ಬಾಹುಬಲಿ 2, RRR, ದಂಗಲ್ ಯಾವುದೂ ಅಲ್ಲ: 25 ಕೋಟಿ ಟಿಕೆಟ್ ಮಾರಾಟವಾದ ಚಿತ್ರ ಯಾವುದು ಗೊತ್ತಾ?
KGF 2. ಬಾಹುಬಲಿ 2, RRR, ದಂಗಲ್ ಯಾವುದೂ ಅಲ್ಲ: 25 ಕೋಟಿ ಟಿಕೆಟ್ ಮಾರಾಟವಾದ ಚಿತ್ರ ಯಾವುದು ಗೊತ್ತಾ?

By ETV Bharat Karnataka Team

Published : Apr 19, 2024, 11:08 AM IST

Updated : Apr 19, 2024, 11:36 AM IST

ಹೈದರಾಬಾದ್: ಪ್ರಸ್ತುತ ದಿನಗಳಲ್ಲಿ ನಾವು ಚಲನಚಿತ್ರಗಳು ಹಣ ಗಳಿಕೆ ಮಾಡಿದ ಆಧಾರದ ಮೇಲೆ ಚಲನಚಿತ್ರವು ಹಿಟ್ ಅಥವಾ ಫ್ಲಾಪ್ ಎಂಬುದನ್ನು ತೀರ್ಮಾನಿಸುತ್ತಿದ್ದೇವೆ ಹಾಗೂ ಆ ಬಗ್ಗೆಯೇ ಮಾತನಾಡುತ್ತೇವೆ. ಬಿಡುಗಡೆಯಾದ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ? ಥಿಯೇಟರ್‌ಗಳಲ್ಲಿ ಎಷ್ಟು ದಿನ ಓಡಿದೆ ಎಂಬುದನ್ನು ಲೆಕ್ಕ ಹಾಕುತ್ತಿದ್ದೇವೆ. ಆದರೆ, ರಂಗ ನಾಟಕಗಳಿಂದ ಥಿಯೇಟರ್‌ಗಳತ್ತ ಸಾಗುತ್ತಿದ್ದ ಆ ದಿನಗಳಲ್ಲಿ ಕಲೆಕ್ಷನ್‌ ಮಾತು ಅಷ್ಟಾಗಿ ಇರಲಿಲ್ಲ. ಎಷ್ಟು ಟಿಕೆಟ್‌ಗಳು ಮಾರಾಟವಾಗಿವೆ ಮತ್ತು ಎಷ್ಟು ದಿನಗಳ ಕಾಲ ಚಿತ್ರ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದೆ ಎಂಬುದರ ಆಧಾರದ ಮೇಲೆ ಚಿತ್ರದ ಯಶಸ್ಸನ್ನು ಪರಿಗಣಿಸಲಾಗುತ್ತಿತ್ತು.

ದಕ್ಷಿಣ ಭಾರತದ ಸುಪ್ರಸಿದ್ಧ "RRR", "ಬಾಹುಬಲಿ", "KGF" ಮತ್ತು ಬಾಲಿವುಡ್‌ನಲ್ಲಿ ಬಿಡುಗಡೆಯಾದ "ಜವಾನ್" ನಂತಹ ಪ್ಯಾನ್ ಇಂಡಿಯಾ ಚಲನಚಿತ್ರಗಳು ವಾಣಿಜ್ಯಿಕ ಯಶಸ್ಸನ್ನು ಸಾಧಿಸಿವೆ, ಆದರೆ ರಮೇಶ್ ಸಿಪ್ಪಿ ನಿರ್ದೇಶನದ "ಶೋಲೆ" ಅಂದು ಭಾರಿ ಸದ್ದು ಮಾಡಿದ, ಭಾರತೀಯ ಚಿತ್ರರಂಗದ ಎವರ್​​ಗ್ರೀನ್ ಸಿನಿಮಾ ಎಂಬುದು ಈಗಿನವರಿಗೆ ಎಷ್ಟು ಗೊತ್ತು. ಅಮಿತಾಬ್ ಬಚ್ಚನ್, ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡ ನಟ- ನಟಿಯರಾಗಿದ್ದಾರೆ . ಬಾಕ್ಸ್ ಆಫೀಸ್ ದಾಖಲೆಗಳ ಪ್ರಕಾರ, 1975-80 ರ ಅವಧಿಯಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಭಾರತವೊಂದರಲ್ಲೇ 18 ಕೋಟಿ ಟಿಕೆಟ್‌ಗಳು ಮಾರಾಟವಾಗಿದ್ದವು. ಇದಲ್ಲದೇ, ಚಿತ್ರವು 60 ಚಿತ್ರಮಂದಿರಗಳಲ್ಲಿ ಗೋಲ್ಡನ್ ಜುಬಿಲಿ ಪ್ರದರ್ಶನವನ್ನು ಸಹ ನೀಡಿತ್ತು.

ಈ ಚಿತ್ರವು ಬಾಂಬೆಯ ಮಿನರ್ವ ಥಿಯೇಟರ್‌ನಲ್ಲಿ ಐದು ವರ್ಷಗಳ ಕಾಲ ಸತತವಾಗಿ ಹೌಸ್​​ಫುಲ್​ ಪ್ರದರ್ಶನ ನೀಡಿ ಗಮನ ಸೆಳೆದಿತ್ತು. ಅಷ್ಟೇ ಏಕೆ ಸೋವಿಯತ್ ರಷ್ಯಾದಲ್ಲಿ ಈ ಸಿನಿಮಾ ರಿಲೀಸ್ ಆಗಿ ಸುಮಾರು 4.8 ಕೋಟಿ ಜನ ಈ ಸಿನಿಮಾ ನೋಡಲು ಥಿಯೇಟರ್ ಗಳಿಗೆ ಹೋಗಿದ್ದರು. ಒಟ್ಟಾರೆ ಈ ಸಿನಿಮಾವನ್ನು 25 ಕೋಟಿ ಜನ ವೀಕ್ಷಣೆ ಮಾಡಿದ್ದರು ಎಂಬ ವಿಚಾರ ಹೊರ ಬಿದ್ದಿದೆ. 80 ರದಶಕದಲ್ಲಿ ಭಾರತದ ಜನಸಂಖ್ಯೆಯನ್ನೊಮ್ಮೆ ನೋಡಿ. ಈಗ ಭಾರತದ ಜನಸಂಖ್ಯೆ 140 ಕೋಟಿ ತಲುಪಿದೆ. ಇದರ ಅರ್ಧದಷ್ಟಿದ್ದ ಭಾರತದಲ್ಲಿ ಬರೋಬ್ಬರಿ 25 ಕೋಟಿ ಜನ ಶೋಲೆ ನೋಡಿದ್ದಾರೆ ಎಂದರೆ ಎಷ್ಟಿರಬೇಕು ಈ ಚಿತ್ರದ ಜನಪ್ರೀಯತೆ. ನೀವೇ ಊಹಿಸಿ.

ಆದರೆ, ಅಚ್ಚರಿ ಎಂದರೆ ಸ್ವಾತಂತ್ರ್ಯ ದಿನಾಚರಣೆಯಂದು ತೆರೆಕಂಡ “ಶೋಲೆ” ಚಿತ್ರ ಬಿಡುಗಡೆಯಾಗಿ ಸುಮಾರು ಎರಡು ವಾರಗಳ ಕಾಲ ಫ್ಲಾಪ್ ಶೋ ನೀಡಿತ್ತು. ಆದರೆ ಮೂರನೇ ವಾರದಿಂದ ಅದು ಚೇತರಿಸಿಕೊಳ್ಳಲು ಪ್ರಾರಂಭಿಸಿತು. ಈ ಚಿತ್ರ ಅಂದು ಒಟ್ಟು ರೂ.30 ಕೋಟಿ ಕಲೆಕ್ಷನ್ ಮಾಡಿ "ಮೊಘಲ್ ಏ ಆಜಮ್" ಮತ್ತು "ಮದರ್ ಇಂಡಿಯಾ ಬೈ ಎ ಮೈಲ್" ಚಿತ್ರಗಳ ದಾಖಲೆಯನ್ನು ಪುಡಿಗಟ್ಟಿತ್ತು. ಏತನ್ಮಧ್ಯೆ, ಪ್ಯಾನ್-ಇಂಡಿಯಾ ಚಿತ್ರವಾಗಿ ಬಿಡುಗಡೆಯಾದ ಬಾಹುಬಲಿ-2 15 - 20 ಕೋಟಿ ಟಿಕೆಟ್‌ಗಳು ಮತ್ತು ಆರ್‌ಆರ್‌ಆರ್, ಕೆಜಿಎಫ್ ಚಾಪ್ಟರ್-2 ಮತ್ತು ದಂಗಲ್‌ಗೆ 10 ಕೋಟಿ ಟಿಕೆಟ್‌ಗಳು ಮಾರಾಟವಾಗಿವೆ ಎಂದು ತಿಳಿದು ಬಂದಿದೆ. ಇಂದಿನ ಎಲ್ಲ ಜನಪ್ರಿಯ ಸಿನಿಮಾಗಳು ಶೋಲೆ ಮುಂದೇ ಏನೇನು ಅಲ್ಲ ಎಂಬುದನ್ನು ಈ ಅಂಕಿ ಅಂಶಗಳು ಹೇಳುತ್ತಿವೆ.

ಇದನ್ನು ಓದಿ:ಗೋಟ್​​ ಚಿತ್ರ ತಂಡದಿಂದ ಎಐ ಮೂಲಕ ದಿವಂಗತ ನಟ ವಿಜಯ್​​ಕಾಂತ್​ ಜೀವಂತವಾಗಿಸುವ ಯತ್ನ - Late Actor Vijayakanth in Goat

Last Updated : Apr 19, 2024, 11:36 AM IST

ABOUT THE AUTHOR

...view details