ಕರ್ನಾಟಕ

karnataka

ETV Bharat / entertainment

ಮಿಲನಾ, ಹರ್ಷಿಕಾ, ಪ್ರಣಿತಾ TO ಅನುಷ್ಕಾ ಕೊಹ್ಲಿ, ದೀಪಿಕಾ ಪಡುಕೋಣೆ: 2024ರಲ್ಲಿ ಪೋಷಕರಾದ ಸೆಲೆಬ್ರಿಟಿ ಕಪಲ್ಸ್​ - YEAR ENDER 2024

ಮೊದಲ ಬಾರಿಗೆ ಪೋಷಕರಾಗಿ ಭಡ್ತಿ ಪಡೆಯುವುದರಿಂದ ಹಿಡಿದು ತಮ್ಮ ಕುಟುಂಬವನ್ನು ವಿಸ್ತರಿಸುವವರೆಗೆ, ಈ ವರ್ಷ ತಮ್ಮ ಮಗುವನ್ನು ಬರಮಾಡಿಕೊಂಡ ತಾರಾ ದಂಪತಿಗಳು ಯಾರೆಲ್ಲ?

Celebrity Couples Who Embraced Parenthood in 2024
ಪೋಷಕರಾಗಿ ಭಡ್ತಿ ಪಡೆದ ಸೆಲೆಬ್ರಿಟಿ ಕಪಲ್ (Photo: ETV Bharat, ANI)

By ETV Bharat Entertainment Team

Published : 10 hours ago

2024 ಮುಕ್ತಾಯಗೊಳ್ಳಲು ಇನ್ನು 11 ದಿನಗಳಷ್ಟೇ ಬಾಕಿ. ಈ ವರ್ಷವನ್ನು ಮೆಲುಕು ಹಾಕುವ ಸಮಯ ಬಂದಿದೆ. ಕೋಟ್ಯಂತರ ಸಿನಿಪ್ರಿಯರಿಗೆ ಮನರಂಜನೆ ಒದಗಿಸುವ ತಾರೆಯರ ಬಾಳಲ್ಲಿ ನವಾರಂಭ ಆಗಿದೆ ಅಂತಲೇ ಹೇಳಬಹುದು. ಹೌದು, ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದ ಕೆಲ ಸೂಪರ್​ಸ್ಟಾರ್ಸ್​ ಈ ವರ್ಷ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಈ ಬಗ್ಗೆ ಫ್ಯಾನ್ಸ್ ಕೂಡಾ ಸಂತಸ ವ್ಯಕ್ತಪಡಿಸಿ, ಶುಭಾಶಯ ಕೋರಿದ್ದಾರೆ.

ಹೊಸ ಆರಂಭ ಹಿನ್ನೆಲೆಯಲ್ಲಿ ಅನೇಕ ಸೆಲೆಬ್ರಿಟಿಗಳಿಗೆ 2024 ಸ್ಮರಣೀಯ ಅಂತಲೇ ಹೇಳಬಹುದು. ನಮ್ಮ ಕನ್ನಡದ ಜೊತೆಗೆ ವಿವಿಧ ಭಾಷೆಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅಪಾರ ಸಂಖ್ಯೆಯ ಅಭಿಮಾನಿಗಳ ಮೆಚ್ಚಿನ ತಾರೆಯರು ಪೋಷಕರ ಜಗತ್ತಿಗೆ ಹೆಜ್ಜೆಯಿಟ್ಟಿದ್ದಾರೆ. ತಮ್ಮ ಹೃದಯಸ್ಪರ್ಶಿ ಅನೌನ್ಸ್​ಮೆಂಟ್​ಗಳ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮೊದಲ ಬಾರಿಗೆ ಪೋಷಕರಾಗಿ ಭಡ್ತಿ ಪಡೆಯುವುದರಿಂದ ಹಿಡಿದು ತಮ್ಮ ಕುಟುಂಬವನ್ನು ವಿಸ್ತರಿಸುವವರೆಗೆ, ಈ ಸಾಲಿನಲ್ಲಿ ಪುಟ್ಟ ಹೆಜ್ಜೆಗಳನ್ನು ಸ್ವಾಗತಿಸಿದ ಸೆಲೆಬ್ರಿಟಿ ಕಪಲ್​ ಯಾರೆಂಬುದನ್ನು ನೋಡೋಣ ಬನ್ನಿ.

ನಟಿ ಪ್ರಣಿತಾ ಸುಭಾಷ್-ಉದ್ಯಮಿ ನಿತಿನ್ ರಾಜ್​​​: ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ಜನಪ್ರಿಯ ನಟಿ ಪ್ರಣಿತಾ ಸುಭಾಷ್ ಸೆಪ್ಟೆಂಬರ್​ ಮೊದಲ ವಾರ ಗಂಡು ಮಗುವಿಗೆ ಜನ್ಮ ನೀಡಿದರು. ನಟಿ 2022ರ ಜೂನ್​ನಲ್ಲಿ ಮೊದಲ ಮಗಳನ್ನು ಸ್ವಾಗತಿಸಿದ್ದರು. 2021ರ ಮೇನಲ್ಲಿ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜ್​​​ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ ಪ್ರಣಿತಾ ಸುಭಾಷ್ ಹಾಲ್ಗೆನ್ನೆ ಚೆಲುವಿಗೆ ಹೆಸರುವಾಸಿಯಾಗಿದ್ದಾರೆ.

ನಟಿ ಮಿಲನಾ ನಾಗರಾಜ್-ನಟ ಡಾರ್ಲಿಂಗ್ ಕೃಷ್ಣ: ಸ್ಯಾಂಡಲ್​ವುಡ್​ನ ಕ್ಯೂಟ್​ ಕಪಲ್​​​​ ಮಿಲನಾ ಕೃಷ್ಣ ಕೂಡಾ ಸೆಪ್ಟೆಂಬರ್​ ಮೊದಲ ವಾರ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡರು. ಮಿಲನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ''ಹೆಮ್ಮೆಯ ಕ್ಷಣವಿದು, ಏಕೆಂದರೆ ನನಗೀಗ ಮಗಳಿದ್ದಾಳೆ'' ಎಂದು ಕೃಷ್ಣ ತಿಳಿಸಿದ್ದರು. ಈ ತಾರಾ ಜೋಡಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂಡಿದ್ದಾರೆ. ಬಹುಸಮಯದಿಂದ ಪ್ರೀತಿಯಲ್ಲಿ ಜೋಡಿ 2021ರ ಪ್ರೇಮಿಗಳ ದಿನದಂದು ಅದ್ಧೂರಿಯಾಗಿ ಹಸೆಮಣೆ ಏರಿದ್ದರು.

ನಟಿ ಹರ್ಷಿಕಾ ಪೂಣಚ್ಚ-ನಟ ಭುವನ್​ ಪೊನ್ನಣ್ಣ: ಕಳೆದ ವರ್ಷ ಹಸೆಮಣೆ ಏರಿದ್ದ ಚಂದನವನದ ಪ್ರೀತಿಯ ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್​ ಪೊನ್ನಣ್ಣ ಅಕ್ಟೋಬರ್​ 4ರಂದು ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡರು. ಹರ್ಷಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, "ಚೈಕಾರ್ತಿ ಮೂಡಿ" ಎಂಬ ಆಕರ್ಷಕ ಹೆಸರಿಟ್ಟಿದ್ದಾರೆ.

ಅದಿತಿ ಪ್ರಭುದೇವ-ಉದ್ಯಮಿ ಯಶಸ್:ಗ್ಲ್ಯಾಮರ್ ಜೊತೆಗೆ ಅಭಿನಯ, ಕಿರಿತೆರೆ ಶೋನ ತೀರ್ಪುಗಾರ್ತಿಯಾಗಿ ಗುರುತಿಸಿಕೊಂಡಿರುವ ನಟಿ ಅದಿತಿ ಪ್ರಭುದೇವ ಏಪ್ರಿಲ್​ 4ರಂದು ತಾಯಿಯಾಗಿ ಭಡ್ತಿ ಪಡೆದರು. 2022ರ ನವೆಂಬರ್​ ಕೊನೆಗೆ ಉದ್ಯಮಿ ಯಶಸ್ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನ ಆರಂಭಿಸಿದ ನಟಿ ಯಶಸ್ವಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಕಿರುತೆರೆಯಿಂದ ವೃತ್ತಿಜೀವನ ಆರಂಭಿಸಿದ ಬೆಣ್ಣೆನಗರಿಯೀಗ ಕನ್ನಡ ಚಿತ್ರರಂಗದಲ್ಲಿ ಹೆಸರು ಸಂಪಾದಿಸಿದ್ದಾರೆ.

ನಟಿ ಕವಿತಾ ಗೌಡ-ನಟ ಚಂದನ್​ ಕುಮಾರ್​: ಒಂದೇ ಧಾರವಾಹಿಯಲ್ಲಿ ನಟಿಸಿ, ಪ್ರೀತಿಸಿ ಮದುವೆಯಾದ ಕಿರಿತೆರೆಯ ಜನಪ್ರಿಯ ತಾರೆಯರಾದ ಕವಿತಾ ಗೌಡ ಹಾಗೂ ಚಂದನ್​ ಕುಮಾರ್ ಅಕ್ಟೋಬರ್​​ ಎರಡನೇ ವಾರ ಪೋಷಕರಾಗಿ ಭಡ್ತಿ ಪಡೆದರು. 2021ರ ಮೇ ತಿಂಗಳಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದ ಲಕ್ಷ್ಮೀ ಬಾರಮ್ಮ ಜೋಡಿಯೀಗ ಗಂಡು ಮಗುವಿನ ಪೋಷಕರು.

ದೀಪಿಕಾ ಪಡುಕೋಣೆ-ರಣ್​ವೀರ್ ಸಿಂಗ್​: ಬಾಲಿವುಡ್‌ನ ಪವರ್​​​ಫುಲ್​ ಕಪಲ್​​ ದೀಪಿಕಾ ಪಡುಕೋಣೆ ಮತ್ತು ರಣ್​​ವೀರ್ ಸಿಂಗ್, ಸೆಪ್ಟೆಂಬರ್ 8ರಂದು ತಮ್ಮ ಹೆಣ್ಣು ಮಗುವನ್ನು ಬರಮಾಡಿಕೊಂಡು ಜೀವನದ ಹೊಸ ಅಧ್ಯಾಯ ಪ್ರಾರಂಭಿಸಿದರು. ಸ್ಟಾರ್​ ಕಪಲ್​​ ಮಗಳಿಗೆ ದುವಾ ಪಡುಕೋಣೆ ಸಿಂಗ್ ಎಂದು ನಾಮಕರಣ ಮಾಡಿದ್ದು, ನವೆಂಬರ್‌ನಲ್ಲಿ ಸಾರ್ವಜನಿಕವಾಗಿ ಈ ಹೆಸರನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡರು. ಆನ್​ಸ್ಕ್ರೀನ್​ ಅಲ್ಲದೇ ಆಫ್​​ಸ್ಕ್ರೀನ್​ನ ಅದ್ಭುತ ಕೆಮಿಸ್ಟ್ರಿಗೆ ಹೆಸರಾಗಿರುವ ಜೋಡಿ 2018ರಲ್ಲಿ ವಿದೇಶದಲ್ಲಿ ಹಸೆಮಣೆ ಏರಿದರು.

ಅನುಷ್ಕಾ ಶರ್ಮಾ-ವಿರಾಟ್​ ಕೊಹ್ಲಿ: ಪವರ್‌ಫುಲ್‌ ಕಪಲ್‌ ಅನುಷ್ಕಾ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಈ ವರ್ಷ ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. 2024ರ ಫೆಬ್ರವರಿ 15ರಂದು ಗಂಡು ಮಗುವಿಗೆ ಜನ್ಮನೀಡಿದ್ದು, ಸ್ಟಾರ್​​ ದಂಪತಿ ಮಗನಿಗೆ ಅಕಾಯ್‌ ಕೊಹ್ಲಿ ಎಂದು ಹೆಸರಿಟ್ಟಿದ್ದಾರೆ. 2021ರಲ್ಲಿ ಮೊದಲ ಮಗಳು ವಾಮಿಕಾಳನ್ನು ಸ್ವಾಗತಿಸಿದ್ದರು.

ವರುಣ್ ಧವನ್-ನತಾಶಾ ದಲಾಲ್: ಬಾಲಿವುಡ್‌ನ ಬಹುಬೇಡಿಕೆ ನಟ ವರುಣ್ ಧವನ್ ಮತ್ತು ನತಾಶಾ ದಲಾಲ್ ಅವರು ಜೂನ್ 3ರಂದು ಪೋಷಕರಾಗಿ ಭಡ್ತಿ ಪಡೆದರು. ಮಗಳ ಆಗಮನದಿಂದ ಸಂಸತಗೊಂಡ ದಂಪತಿ ಸೋಷಿಯಲ್​ ಮೀಡಿಯಾದಲ್ಲಿ ಖುಷಿ ವ್ಯಕ್ತಪಡಿಸಿದ್ದರು.

ಯಾಮಿ ಗೌತಮ್​-ಆದಿತ್ಯ ಧರ್: ತಮ್ಮ ಪ್ರೈವೇಟ್​ ಲೈಫ್​ನಿಂದ ಹೆಸರುವಾಸಿಯಾಗಿರುವ ಯಾಮಿ ಗೌತಮ್ ಮತ್ತು ಫಿಲ್ಮ್​​ಮೇಕರ್​ ಆದಿತ್ಯ ಧರ್ ಅವರು ತಮ್ಮ ಮೊದಲ ಮಗುವನ್ನು ಮೇ 20ರಂದು ಸ್ವಾಗತಿಸಿದರು. ಮಗನಿಗೆ ವೇದವಿದ್ ಎಂದು ಹೆಸರಿಟ್ಟಿದ್ದಾರೆ. ನಟಿ ತಮ್ಮ ಆರ್ಟಿಕಲ್ 370 ಟ್ರೇಲರ್ ಬಿಡುಗಡೆ ಸಂದರ್ಭ (ಪೆಬ್ರವರಿ) ಗರ್ಭಧಾರಣೆಯನ್ನು ಘೋಷಿಸಿದ್ದರು.

ವಿಕ್ರಾಂತ್ ಮಸ್ಸೆ-ಶೀತಲ್ ಠಾಕೂರ್:ಪ್ರತಿಭಾನ್ವಿತ ನಟ ವಿಕ್ರಾಂತ್ ಮಾಸ್ಸೆ ಮತ್ತು ಪತ್ನಿ ಶೀತಲ್ ಠಾಕೂರ್ ಫೆಬ್ರವರಿ 7ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಮಗನಿಗೆ ವರ್ದನ್ ಎಂದು ನಾಮಕರಣ ಮಾಡಿದ್ದಾರೆ.

ರಿಚಾ ಚಡ್ಡಾ-ಅಲಿ ಫಜಲ್: ಹೀರಾಮಂಡಿ ಮತ್ತು ಮಿರ್ಜಾಪುರ್​ ಮೂಲಕ ಗುರುತಿಸಿಕೊಂಡ ರಿಚಾ ಚಡ್ಡಾ ಮತ್ತು ಅಲಿ ಫಜಲ್ ಅವರು ತಮ್ಮ ಮೊದಲ ಮಗುವನ್ನು ಜುಲೈ 16 ರಂದು ಸ್ವಾಗತಿಸಿದರು. ದಂಪತಿಗಳು ತಮ್ಮ ಆರೋಗ್ಯಕರ ಮತ್ತು ಮುದ್ದು ಮಗುವಿನ ತಮ್ಮ ಸಂತೋಷ, ಕೃತಜ್ಞತೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಮಾರ್ಟಿನ್​​ TO ಕಂಗುವ: 2024ರಲ್ಲಿ ಬಾಕ್ಸ್​​ ಆಫೀಸ್​ನಲ್ಲಿ ಮುಗ್ಗರಿಸಿದ ಬಿಗ್​ ಬಜೆಟ್​​ ಸಿನಿಮಾಗಳು

ರಾಧಿಕಾ ಆಪ್ಟೆ-ಬೆನೆಡಿಕ್ಟ್ ಟೇಲರ್: ಇದೇ ತಿಂಗಳು, ನಟಿ ರಾಧಿಕಾ ಆಪ್ಟೆ ಮತ್ತು ಸಂಗೀತಗಾರ ಬೆನೆಡಿಕ್ಟ್ ಟೇಲರ್ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಕ್ಯಾಂಡಿಡ್ ಫೋಟೋ ಪೋಸ್ಟ್ ಮಾಡಿ ಖುಷಿ ಹಂಚಿಕೊಂಡಿದ್ದರು.

ಇದನ್ನೂ ಓದಿ:ಚಂದನ್‌ ಶೆಟ್ಟಿ-ನಿವೇದಿತಾ ಗೌಡ TO ರೆಹಮಾನ್​​​, ಧನುಷ್​: 2024ರಲ್ಲಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಸೆಲೆಬ್ರಿಟಿಗಳ ಡಿವೋರ್ಸ್ ಲಿಸ್ಟ್

ದೇವೋಲಿನಾ ಭಟ್ಟಾಚಾರ್ಜಿ-ಶಾನವಾಜ್ ಶೇಖ್: ಬಿಗ್ ಬಾಸ್ 13ರ ಮೂಲಕ ಹೆಸರುವಾಸಿಯಾದ ಕಿರುತೆರೆ ನಟಿ ದೇವೋಲೀನಾ ಭಟ್ಟಾಚಾರ್ಜಿ ಡಿಸೆಂಬರ್ 18ರಂದು ತಮ್ಮ ಗಂಡು ಮಗುವನ್ನು ಸ್ವಾಗತಿಸಿದರು.

ಇದನ್ನೂ ಓದಿ:ಹುಸಿಯಾಯ್ತು ಅಭಿಮಾನಿಗಳ ನಿರೀಕ್ಷೆ! 2024ರಲ್ಲಿ ಸಿನಿಮಾ ಮಾಡದ ಸ್ಯಾಂಡಲ್​​ವುಡ್​ ಸೂಪರ್​​ಸ್ಟಾರ್​ಗಳಿವರು

ABOUT THE AUTHOR

...view details