ಕರ್ನಾಟಕ

karnataka

ETV Bharat / entertainment

ಸ್ಯಾಂಡಲ್​​ವುಡ್ 'ಮರ್ಯಾದೆ ಪ್ರಶ್ನೆ' ಅಂತಿದ್ದಾರೆ ಆಲ್ ಓಕೆ! ಇದು ಸಕ್ಕತ್ ಸ್ಟುಡಿಯೋದ ಮತ್ತೊಂದು ಪ್ರಯತ್ನ - Kannada Movie - KANNADA MOVIE

'ಮರ್ಯಾದೆ ಪ್ರಶ್ನೆ' ಎಂಬ ಚಿತ್ರ ಸಿದ್ಧಗೊಳ್ಳುತ್ತಿದ್ದು ಸದ್ಯ ಸ್ಯಾಂಡಲ್​ವುಡ್​ನಲ್ಲಿ ಸಕ್ಕತ್​ ಸದ್ದು ಮಾಡುತ್ತಿದೆ.

Maryade Prashne Movie Is Attracting Attention In Sandalwood
ಮರ್ಯಾದೆ ಪ್ರಶ್ನೆ ಚಿತ್ರ (Maryade Prashne Movie)

By ETV Bharat Karnataka Team

Published : Jun 15, 2024, 9:02 PM IST

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚೆಗೆ ಸಖತ್ ಸುದ್ದಿ ಆಗ್ತಿರೋದು 'ಮರ್ಯಾದೆ ಪ್ರಶ್ನೆ'. ಹೌದು, ಸಕ್ಕತ್ ಸ್ಟುಡಿಯೋ ಮೂಲಕ ಆರ್ ಜೆ ಪ್ರದೀಪ್ ಅವರು ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾದ ಹೆಸರೇ 'ಮರ್ಯಾದೆ ಪ್ರಶ್ನೆ'! ಸಕ್ಕತ್ ಕಂಟೆಂಟ್​​ಗಳ ಮೂಲಕವೇ ಪ್ರೇಕ್ಷಕರ ಗಮನಸೆಳೆಯುತ್ತಿರುವ ಸಕ್ಕತ್ ಸ್ಟುಡಿಯೋ, ನಮ್ಮ ಚಿತ್ರರಂಗದ ಸೆಲಿಬ್ರಿಟಿಸ್ ಅವರವರ ಜೀವನದ 'ಮರ್ಯಾದೆ ಪ್ರಶ್ನೆ' ಬಗ್ಗೆ ಪೋಸ್ಟ್ ಮಾಡುವ ಮೂಲಕ ಶೀರ್ಷಿಕೆ ಬಿಡುಗಡೆ ಮಾಡಿತ್ತು.

ಮರ್ಯಾದೆ ಪ್ರಶ್ನೆ ಚಿತ್ರ (Maryade Prashne Movie)

ಆರ್ ಜೆ ಪ್ರದೀಪ್ ಪ್ರದೀಪ್ ಒಡೆತನದ ಸಕ್ಕತ್ ಸ್ಟುಡಿಯೋ ಬಹಳ ಕ್ರಿಯೇಟಿವ್ ಆಗಿ 'ಮರ್ಯಾದೆ ಪ್ರಶ್ನೆ' ಸಿನಿಮಾವನ್ನು ಪ್ರಮೋಷನ್ ಮಾಡ್ತಿದೆ. RCB ಕಪ್ ಗೆಲ್ಬೇಕು ಅಂತಾ ಕೊಹ್ಲಿ ತಂಡಕ್ಕೆ ಚಿಯರ್ ಹೇಳುವ ಹಾಡು ನಿರ್ಮಿಸಿದ್ದ ಸಕ್ಕತ್ ಸ್ಟುಡಿಯೋ ಈಗ ಆಲ್ ಓಕೆ ಕಡೆಯಿಂದಲೂ 'ಮರ್ಯಾದೆ ಪ್ರಶ್ನೆ'ಗಳಿಗೆ ಉತ್ತರ ಕೊಟ್ಟಿದೆ. ಕನ್ನಡದ ಖ್ಯಾತ ರ‍್ಯಾಪರ್ ಆಲ್ ಓಕೆ ಮಿಡಲ್​ ಕ್ಲಾಸ್ ಮಂದಿಯ ಸಡಗರಗಳ ಬಗ್ಗೆ ಬಹಳ ಅರ್ಥಪೂರ್ಣವಾದ ಗೀತೆಯೊಂದನ್ನು ತಯಾರಿಸಿದ್ದು ಸಕ್ಕತ್ ಸ್ಟುಡಿಯೋ ಈ ಹಾಡನ್ನು ನಿರ್ಮಿಸಿದೆ.

ಮರ್ಯಾದೆ ಪ್ರಶ್ನೆ ಚಿತ್ರ (Maryade Prashne Movie)

ಈ ಹಾಡಿನ ಮೂಲಕ ಕನ್ನಡ ಚಿತ್ರರಂಗದ ಎಲ್ರಿಗೂ ಒಗ್ಗಟ್ಟಾಗಿ ದುಡಿಯುವ, ಬೆಳೆಯುವ ಹಾಗೂ ಸ್ಟಾರ್ ಸಿನಿಮಾಗಳ ಜೊತೆಗೆ ಹೊಸ ಪ್ರಯತ್ನಗಳಿಗೂ ಜನ ಜೈ ಎನ್ನಬೇಕು. ಇದು ಬರೀ 'ಮರ್ಯಾದೆ ಪ್ರಶ್ನೆ' ಅಲ್ಲಾ ನಮ್ಮೆಲ್ಲರ ಉಳಿವಿನ ಪ್ರಶ್ನೆ ಎಂಬ ಗಟ್ಟಿ ಕೂಗೊಂದನ್ನು ನೀಡಿದ್ದಾರೆ.

ಮರ್ಯಾದೆ ಪ್ರಶ್ನೆ ಚಿತ್ರ (Maryade Prashne Movie)

'ಮರ್ಯಾದೆ ಪ್ರಶ್ನೆ' ನಿರ್ಮಾಣದ ಜೊತೆಗೆ ಪ್ರದೀಪ್ ಕತೆ ಬರೆದಿದ್ದಾರೆ. ಕ್ರಿಯೇಟಿವ್ ಹೆಡ್ ಕೂಡ ಆಗಿದ್ದಾರೆ. ಈ ಮೂಲಕ ಕನ್ನಡಕ್ಕೆ ಹೊಸದೊಂದು ಕಥೆ ಕೊಡೊಕೆ ರೆಡಿ ಆಗಿದ್ದಾರೆ. ಈ ಚಿತ್ರವನ್ನ ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ದಿ ಬೆಸ್ಟ್ ಆ್ಯಕ್ಟರ್, ಮೈಕ್ರೋ ಮೂವಿ ಮಾಡಿದ್ದರು. 'ಮರ್ಯಾದೆ ಪ್ರಶ್ನೆ' ಚಿತ್ರಕ್ಕೆ ಸಂದೀಪ್ ವೆಲ್ಲುರಿ ಕ್ಯಾಮರಾವರ್ಕ್ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ಕೊಟ್ಟಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಯಾರೆಲ್ಲ ಇದ್ದಾರೆ ಅನ್ನೋ ಕುತೂಹಲ ಇದೆ. ಕನ್ನಡದ ಅದ್ಭುತ ಕಲಾವಿದರ ದಂಡೇ ಇದರಲ್ಲಿದೆ ಎಂಬ ಮಾಹಿತಿಯಿದೆ. ಅತಿ ಶೀಘ್ರದಲ್ಲೇ ಆ ವಿವರಗಳನ್ನು ಜನರಿಗೆ ನೀಡುವ ತಯಾರಿಯಲ್ಲಿದ್ದಾರೆ. ಸದ್ಯಕ್ಕೆ ಜೀವನದಲ್ಲಿ ಅಲ್ ಓಕೆ. ಮರ್ಯಾದೆ ಪ್ರಶ್ನೆ ಹಾಡನ್ನು ಎಂಜಾಯ್ ಮಾಡಿ, ಶೇರ್ ಮಾಡಿ ಹಾಗೂ ಕನ್ನಡ ಹುಡುಗರನ್ನು ಬೆಳೆಸುವ ಪ್ರಯತ್ನ ಮಾಡಿ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ:ಹೆಚ್.ಎಂ. ಕೃಷ್ಣಮೂರ್ತಿ ಅಭಿನಯದ 'ನಾಡಸಿಂಹ ಕೆಂಪೇಗೌಡ' ಆಲ್ಬಂ ಸಾಂಗ್​ ಬಿಡುಗಡೆ - Album song release

ABOUT THE AUTHOR

...view details