ಕರ್ನಾಟಕ

karnataka

ETV Bharat / entertainment

'ಅಕ್ಯುಪಂಕ್ಚರ್'​ ತನ್ನಿಷ್ಟದ ಚಿಕಿತ್ಸೆ ಎಂದ ನಟಿ ಮಲ್ಲಿಕಾ ಶೆರಾವತ್​​ - mallika sherawat shares acupuncture treatment - MALLIKA SHERAWAT SHARES ACUPUNCTURE TREATMENT

ಈ ಚಿಕಿತ್ಸೆ ಪಡೆಯುತ್ತಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿರುವ ನಟಿ, ನನ್ನ ಅಚ್ಚುಮೆಚ್ಚಿನ ಚಿಕಿತ್ಸೆ ಅಂಕ್ಯುಪಂಕ್ಚರ್ ಎಂದಿದ್ದಾರೆ.

mallika-sherawat-shares-her-acupuncture-treatment-calls-its-my-favorite
ನಟಿ ಮಲ್ಲಿಕಾ ಶೆರವಾತ್​​ (ಐಎಎನ್​ಎಸ್​)

By IANS

Published : Jun 10, 2024, 11:51 AM IST

ಮುಂಬೈ: ಬಾಲಿವುಡ್​ ಬೆಡಗಿ ಮಲ್ಲಿಕಾ ಶರವಾತ್ ​ಅಕ್ಯುಪಂಕ್ಚರ್ ತಮ್ಮ ಮೆಚ್ಚಿನ ಚಿಕಿತ್ಸೆಯಾಗಿದ್ದು, ಇದನ್ನು ಇಷ್ಟಪಡುವುದಾಗಿ ತಿಳಿಸಿದ್ದಾರೆ. ಈ ಕುರಿತು ತಮ್ಮ ಇನ್​​ಸ್ಟಾಗ್ರಾಂ ಸ್ಟೇಟಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ, ಬೆಡ್​ ಮೇಲೆ ಮಲಗಿ, ಸೂಜಿಗಳಿಂದ ತಮ್ಮ ಮುಖಕ್ಕೆ ಚುಚ್ಚಿಸಿಕೊಂಡಿರುವುದನ್ನು ಕಾಣಬಹುದಾಗಿದೆ.

ಅಕ್ಯುಪಂಕ್ಚರ್ ಚಿಕಿತ್ಸೆಯಲ್ಲಿ ದೇಹದ ನಿರ್ದಿಷ್ಟ ಪಾಯಿಂಟ್​ನಲ್ಲಿ ಉತ್ತೇಜಿಸಲು ಸಣ್ಣ ಸೂಜಿಗಳನ್ನು ತ್ವಚೆಯ ಮೇಲೆ ಚುಚ್ಚಲಾಗುವುದು. ಈ ಚಿಕಿತ್ಸೆಯು ನೋವು ಸೇರಿದಂತೆ ಹಲವು ಆರೋಗ್ಯ ಪರಿಸ್ಥಿತಿಗಳನ್ನು ಸುಧಾರಣೆಗೆ ಸಹಾಯ ಮಾಡುತ್ತದೆ. ಇದು ಸಾಂಪ್ರದಾಯಿಕ ಚೀನಿ ಚಿಕಿತ್ಸೆಯಾಗಿದೆ. ಒಟ್ಟಾರೆ ಯೋಗಕ್ಷೇಮ ಮತ್ತು ಒತ್ತಡ ನಿವಾರಣೆ ಸೇರಿದಂತೆ ಹಲವು ಆರೋಗ್ಯ ಸಂಬಂಧಿತ ಪ್ರಯೋಜನವನ್ನು ಈ ಚಿಕಿತ್ಸೆ ಹೊಂದಿದೆ.

ಈ ಚಿಕಿತ್ಸೆ ಪಡೆಯುತ್ತಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡಿರುವ ನಟಿ. ನನ್ನ ಅಚ್ಚುಮೆಚ್ಚಿನ ಚಿಕಿತ್ಸೆ ಅಂಕ್ಯುಪಂಕ್ಚರ್​ ಎಂದಿದ್ದಾರೆ. ಇದಕ್ಕೆ ಮೊದಲು ಅವರು, ಶನಿವಾರ ಹಂಚಿಕೊಂಡ ಪೋಸ್ಟ್​ನಲ್ಲಿ ಬಿಸಿಲಿನ ಬೇಗೆ ನಿವಾರಿಸಲು ಈಜುಕೊಳದಲ್ಲಿ ಇಳಿದಿರುವುದಾಗಿ ತಿಳಿಸಿದ್ದಾರೆ.

ಬೇಸಿಗೆಯ ಬಿರು ಬಿಸಿಲನ್ನು ಕಡಿಮೆ ಮಾಡುವಲ್ಲಿ ಪೂಲ್​ಗಿಂತ ತಾಜಾತನ ನೀಡುವುದು ಮತ್ತೊಂದಿಲ್ಲ. ಈ ಬಿಸಿಲನ್ನು ನೀವು ಹೇಗೆ ನಿವಾರಿಸುತ್ತೀರಾ ಎಂದು ಅಭಿಮಾನಿಗಳಿಗೆ ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೇ, ಫಿಟ್ನೆಸ್​ ಬಗ್ಗೆ ಅತ್ಯುತ್ಸಾಹವನ್ನು ಹೊಂದಿರುವ ನಟಿ ಮಲ್ಲಿಕಾ, ಆಗ್ಗಿಂದಾಗೆ ತಮ್ಮ ವರ್ಕ್​ಔಟ್​ ವಿಡಿಯೋಗಳನ್ನು ಕೂಡ ಹಂಚಿಕೊಳ್ಳುತ್ತಿರುತ್ತಾರೆ.

ವೃತ್ತಿ ಜೀವನದೆಡೆಗೆ ಗಮನಿಸಿಸುವುದಾದರೆ ನಟಿ, ಕಡೇಯ ಬಾರಿ ಕಾಮಿಡಿ ಡ್ರಾಮಾವಾಗಿದ್ದ, 'ಆರ್​ಕೆ'. ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ರಜತ್​ ಕಪೂರ್​​ ನಿರ್ದೇಶನದ ಈ ಸಿನಿಮಾದಲ್ಲಿ ರಣವೀರ್​ ಶೋರೆಯ್​​, ಮನು ರಿಷಿ ಚಧಾ, ಕುಬ್ರಾ ಶೇಠ್​​ ಕಾಣಿಸಿಕೊಂಡಿದ್ದರು.

2002ರಲ್ಲಿ ಜೀನಾ ಸಿರ್ಫ್​​ ಮೆರೆ ಲಿಯಾ ಚಿತ್ರದ ಮೂಲಕ ನಟಿ ಬಾಲಿವುಡ್​ ಪ್ರವೇಶಿಸಿದ್ದರು. ಇತ್ತೀಚಿಗೆ ಖ್ವಾಹಿಶ್​ ಮತ್ತು 'ಕಿಸ್​ ಕಿಸ್​ ಕಿ ಕಿಸ್ಮತ್​' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 2004ರಲ್ಲಿ ನಟ ಇಮ್ರಾನ್ ಹಶ್ಮಿ ಜೊತೆಗೆ ಮರ್ಡರ್​ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್​ ಆಗಿ ನಟಿಸಿದ ಬಳಿಕ ಇವರು ಚಿತ್ರರಂಗದಲ್ಲಿ ಮುನ್ನಲೆಗೆ ಬಂದಿದ್ದರು.

ಬಾಲಿವುಡ್​ ಮಾತ್ರವಲ್ಲದೇ, ಹಾಲಿವುಡ್​ನಲ್ಲೂ ಮಲ್ಲಿಕಾ ಶೆರಾವತ್​ ಮಿಂಚಿದ್ದಾರೆ. 'ಹಿಸ್ಸ್​​'​​ ಮತ್ತು 'ಪೊಲಿಟಿಕ್ಸ್​ ಆಫ್​ ಲವ್'​ ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚಿನ ದಿನಗಳಲ್ಲಿ ತೆರೆಮರೆಗೆ ಸರಿದಿರುವ ನಟಿ, ಅಂತಹ ಹೇಳಿಕೊಳ್ಳುವ ಪಾತ್ರಗಳಲ್ಲಿ ಮಿಂಚುತ್ತಿಲ್ಲ. ಆದರೆ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: 18 ವರ್ಷಗಳ ನಂತರ ತೆಲುಗು ಪರದೆ ಮೇಲೆ ಈ ನಟಿಯ ಮಿಂಚು

ABOUT THE AUTHOR

...view details