ಹೈದರಾಬಾದ್: ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ಮಲತಂದೆ ಅನಿಲ್ ಮೆಹ್ತಾ ಇಂದು ಬೆಳಗ್ಗೆ ಮುಂಬೈನ ಬಾಂದ್ರಾ ನಿವಾಸದಲ್ಲಿ ಮೃತರಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬೆಳಗ್ಗೆ 9 ಗಂಟೆಯ ಸುಮಾರಿಗೆ ದುರ್ಘಟನೆ ಸಂಭವಿಸಿದ್ದು, ಅನಿಲ್ ಮೆಹ್ತಾ ಅವರನ್ನು ಆ ಕೂಡಲೇ ಭಾಭಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಟ್ಟಿದ್ದಾರೆ.
ಮನೆ ತಲುಪಿದ ರೂಮರ್ ಬಾಯ್ಫ್ರೆಂಡ್ ಅರ್ಜುನ್ ಕಪೂರ್ (ANI) ಅನಿಲ್ ಇನ್ನಿಲ್ಲ ಎಂದು ವೈದ್ಯರು ಘೋಷಿಸಿದ್ದಾರೆ. ಕಾರ್ಯಕ್ರಮವೊಂದರ ನಿಮಿತ್ತ ಪುಣೆಯಲ್ಲಿದ್ದ ಮಲೈಕಾ, ತಕ್ಷಣ ಮುಂಬೈಗೆ ಪ್ರಯಾಣ ಬೆಳೆಸಿದರು. ರೂಮರ್ ಬಾಯ್ಫ್ರೆಂಡ್ ಅರ್ಜುನ್ ಕಪೂರ್ ಈಗಾಗಲೇ ನಟಿಯ ಮನೆ ತಲುಪಿದ್ದಾರೆ.
ಹೌದು, ಮಲೈಕಾ ಅರೋರಾ ಗೆಳೆಯ ಅರ್ಜುನ್ ಕಪೂರ್ ಕೂಡಾ ನಟಿಯ ಮನೆಗೆ ಆಗಮಿಸಿದರು. ನಿಧನ ಸುದ್ದಿ ಹರಡುತ್ತಿದ್ದಂತೆ ಅರ್ಜುನ್ ಶೀಘ್ರವೇ ಮಲೈಕಾ ಮತ್ತು ಅವರ ಕುಟುಂಬಸ್ಥರಿಗೆ ಸಾಥ್ ನೀಡಲು ಆಗಮಿಸಿದರು. ಈ ಕಠಿಣ ಸಮಯದಲ್ಲಿ ತಮ್ಮ ಬೆಂಬಲ ಮತ್ತು ಸಾಂತ್ವನ ಸೂಚಿಸಿದ್ದಾರೆ. ಮಲೈಕಾ ಕೂಡಾ ಮನೆ ತಲುಪಿದ್ದಾರೆ.
ಅನಿಲ್ ಮೆಹ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ದೃಢಪಡಿಸಿದ್ದಾರೆ. ಡೆತ್ ನೋಟ್ ಬರೆದಿದ್ದಿಟ್ಟಿದ್ದಾರೆಯೇ ಎಂಬುದನ್ನು ತಿಳಿಯಲು ತನಿಖೆ ಮುಂದುವರಿದಿದೆ. ಆದರೆ ಈ ದುರಂತದ ಬಗ್ಗೆ ಕುಟುಂಬಸ್ಥರು ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಮಲೈಕಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಬಾಂದ್ರಾ ನಿವಾಸಕ್ಕೆ ಆಗಮಿಸಿದ ಮೊದಲಿಗರಾಗಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಕುಟುಂಬಕ್ಕೆ ತಮ್ಮ ಬೆಂಬಲ ನೀಡಿದ್ದಾರೆ. ನಟಿಗೂ ಮುನ್ನ ಅರ್ಬಾಜ್ ಆಗಮಿಸಿ ಪೊಲೀಸ್ ಅಧಿಕಾರಿಗಳ ಬಳಿ ಮಾತನಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:''ಲೆಕ್ಕವಿಲ್ಲದಷ್ಟು ಬಾರಿ ನನ್ನ ಮದುವೆ ಮಾಡಿಸಿಬಿಟ್ಟಿರಿ'': ಮದುವೆ ವದಂತಿ ಬಗ್ಗೆ ಅಸಮಧಾನಗೊಂಡ ನಟಿ ರಮ್ಯಾ - Ramya Reacts Wedding Rumors
ಭಾರತೀಯ ಮರ್ಚೆಂಟ್ ನೇವಿಯ ಮಾಜಿ ಸದಸ್ಯ ಅನಿಲ್ ಮೆಹ್ತಾ ಅವರು ತಮ್ಮ ಪುತ್ರಿಯರಾದ ಮಲೈಕಾ ಮತ್ತು ಅಮೃತಾ ಅರೋರಾ ಅವರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು. ಮಲೈಕಾ 11 ವರ್ಷದವರಿದ್ದಾಗ ಅನಿಲ್ ಅವರು ಪತ್ನಿ ಜಾಯ್ಸ್ ಪಾಲಿಕಾರ್ಪ್‌ನಿಂದ ವಿಚ್ಛೇದನ ಪಡೆದರು. ನಂತರ ಮಲೈಕಾ ತಮ್ಮ ತಾಯಿ ಮತ್ತು ಸಹೋದರಿಯೊಂದಿಗೆ ಮುಂಬೈನ ಚೆಂಬೂರಿನಲ್ಲಿ ಬೆಳೆದರು. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಒಟ್ಟಿಗೆ ಇದ್ದರು ಎಂದು ಹೇಳಲಾಗಿದೆ. ಸದ್ಯ ಬಾಂದ್ರಾ ನಿವಾಸದ ಬಳಿ ಚಿತ್ರರಂಗದವರು ಬಂದು ಸೇರುತ್ತಿದ್ದಾರೆ.
ಇದನ್ನೂ ಓದಿ:ಮಲೈಕಾ ಅರೋರಾ ತಂದೆ ಅನಿಲ್ ಆತ್ಮಹತ್ಯೆ: ನಟಿಯ ಮನೆಗೆ ಬಂದ ಮಾಜಿ ಪತಿ ಅರ್ಬಾಜ್ ಖಾನ್ - Malaika Arora Father Suicide
1998ರಲ್ಲಿ ಮಲೈಕಾ ಅರೋರಾ ಮತ್ತು ನಟ ಅರ್ಬಾಜ್ ಖಾನ್ ದಾಂಪತ್ಯ ಜೀವನ ಆರಂಭಿಸಿದ್ದರು. 2017 ರಲ್ಲಿ ದಂಪತಿ ವಿಚ್ಛೇದನ ಪಡೆದಿದ್ದು, ಇವರಿಗೆ ಆರ್ಹಾನ್ ಖಾನ್ ಎಂಬ ಮಗನಿದ್ದಾನೆ. ಅರ್ಬಾಜ್ ಖಾನ್ ಎರಡನೇ ಮದುವೆ ಆಗಿದ್ದಾರೆ. ನಟಿಯ ಹೆಸರು ನಟ ಅರ್ಜುನ್ ಕಪೂರ್ ಅವರೊಂದಿಗೆ ಆಗಾಗ್ಗೆ ಸದ್ದು ಮಾಡುತ್ತಿರುತ್ತದೆ. ಸದ್ಯ ದುರ್ಘಟನೆ ಸಂಭವಿಸಿದ ಮನೆಗೆ ಮಲೈಕಾ, ಅರ್ಬಾಜ್, ಅರ್ಜುನ್ ಸೇರಿದಂತೆ ಹಲವರು ತಲುಪಿದ್ದಾರೆ.