ETV Bharat / business

ಭಾರತದ ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ಟೆಸ್ಲಾ ಕಾರು: ಬೆಲೆ ಎಷ್ಟು ಗೊತ್ತಾ? - TESLA LIKELY TO ENTER INDIA

ಸಂಪೂರ್ಣವಾಗಿ ಅಸೆಂಬಲ್‌ ಆಗಿರುವ ಟೆಸ್ಲಾ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಕಂಪನಿ ಮುಂದಾಗಿದೆ.

Tesla likely to enter India with fully built  pricier Model Y scouting for showrooms
ಟೆಸ್ಲಾ (IANS)
author img

By ETV Bharat Tech Team

Published : Feb 19, 2025, 4:03 PM IST

Updated : Feb 19, 2025, 5:16 PM IST

ನವದೆಹಲಿ: ಈ ವರ್ಷಾಂತ್ಯದೊಳಗೆ ಭಾರತದ ವಾಹನ ಮಾರುಕಟ್ಟೆಗೆ ಟೆಸ್ಲಾ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. ಸಂಪೂರ್ಣವಾಗಿ ಜೋಡಿಸಿದ ಎಲೆಕ್ಟ್ರಿಕ್​ ವಾಹನವನ್ನು ಕಂಪನಿ ಆಮದು ಮಾಡಲಿದೆ. ಆರಂಭದಲ್ಲಿ ದುಬಾರಿ ಬೆಲೆಯ ಮಾಡೆಲ್​ ಬಿಡುಗಡೆಗೆ ಯೋಜಿಸಿದ್ದು, ಬಳಿಕ ಕಡಿಮೆ ದರದ ವಾಹನವನ್ನು ಮಾರುಕಟ್ಟೆಗೆ ತರಲು ಚಿಂತಿಸಿದೆ.

ಬರ್ಲಿನ್​ನ ಗಿಗಾ ಫ್ಯಾಕ್ಟರಿಯಿಂದ ಸಂಪೂರ್ಣವಾಗಿ ನಿರ್ಮಾಣ ಮಾಡಿರುವ ವೈ ಮಾಡೆಲ್​ ಇವಿ ಕಾರನ್ನು ಆಮದು ಮಾಡಿ ಇಲ್ಲಿನ ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಫ್ಯಾಕ್ಟರಿಯಲ್ಲಿ ಯುರೋಪಿಯನ್​ ಸೌಲಭ್ಯದಲ್ಲಿ ಬಲಗೈಚಾಲಿತ ಚಾಲನೆ ಹೊಂದಿರುವ ಎಲೆಕ್ಟ್ರಿಕ್​ ಎಸ್​ಯುವಿ ಉತ್ಪಾದನೆ ಮಾಡಲಾಗುತ್ತಿದೆ.

ಭಾರತದ ಆಮದು ಸುಂಕ ಪರಿಷ್ಕರಣೆಯ ಬಳಿಕ ಟೆಸ್ಲಾ ಮಾಡೆಲ್​ ವೈ ಇವಿ ಕಾರು 60ರಿಂದ 70 ಲಕ್ಷ ರೂ ಮೌಲ್ಯ ಹೊಂದಿರುವ ಸಾಧ್ಯತೆ ಇದೆ. ದೇಶವು ಸದ್ಯ 40,000 ಡಾಲರ್​ಗಿಂತ ಹೆಚ್ಚಿನ ಬೆಲೆಯ ಹೈ ಎಂಡ್ ಕಾರುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ.110ರಿಂದ ಶೇ.70ರಷ್ಟು ಇಳಿಸಿದೆ.

ಶಾಂಘೈನಲ್ಲೂ ಕೂಡ ರೈಟ್​ ಹ್ಯಾಂಡ್​ ಡ್ರೈವ್‌ ಮಾಡೆಲ್​ 3 ಕಾರುಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಆದರೆ, ಚೀನಾ ಕಾರುಗಳು ಆಮದಾಗುವ ಸಾಧ್ಯತೆ ಕಡಿಮೆ ಇದೆ. ಉದ್ಯಮ ತಜ್ಞರ ಪ್ರಕಾರ, ಟೆಸ್ಲಾ ವಾಹನವನ್ನು ಭಾರತದಲ್ಲಿ ಸ್ಥಳೀಯವಾಗಿ ಜೋಡಿಸುವ ಕೆಲಸ ಮಾಡುವುದಿಲ್ಲ. ಆದರೆ, ಭವಿಷ್ಯದಲ್ಲಿ ಈ ನಿರ್ಧಾರ ಬದಲಾಗಬಹುದು.

ಮಹಾರಾಷ್ಟ್ರದ ಪುಣೆಯಲ್ಲಿ ಕಚೇರಿ ಹೊಂದಿರುವ ಟೆಸ್ಲಾ, ಇದೀಗ ಮುಂಬೈನಲ್ಲಿನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್​​ನಲ್ಲಿ ಹಾಗೂ ದೆಹಲಿಯ ಏರೋಸಿಟಿಯಲ್ಲಿ ತನ್ನ ಮೊದಲ ಶೋರೂಂ ಆರಂಭಿಸಲು ಸ್ಥಳಕ್ಕಾಗಿ ಹುಡುಕಾಟ ಆರಂಭಿಸಿದೆ. ಈ ನಡುವೆ ಸಂಸ್ಥೆ ಮುಂಬೈನಲ್ಲಿ 13 ಹುದ್ದೆಗಳಿಗೆ ನೇಮಕಾತಿಗೆ ಮುಂದಾಗಿದೆ. ಈ ಕುರಿತು ಕಂಪನಿ ಲಿಂಕ್ಡಿನ್​ನಲ್ಲೂ ಪ್ರಕಟಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ವಿಶ್ವದ ಶ್ರೀಮಂತ ವ್ಯಕ್ತಿಯಾಗಿರುವ ಟೆಸ್ಲಾ ಮಾಲೀಕ ಎಲೋನ್ ಮಸ್ಕ್​ ಭಾರತದ ಮಾರುಕಟ್ಟೆಯಲ್ಲಿ ಭಾರತೀಯರ ಕೈಗೆಟುಕುವ ದರದ ಕಾರನ್ನು ಅಭಿವೃದ್ಧಿಪಡಿಸುವ ಯೋಚನೆ ಹೊಂದಿದ್ದು, ಇದು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.

ಇದನ್ನೂ ಓದಿ: ಗೂಗಲ್​ನ ವಿಶ್ವದ ಅತಿದೊಡ್ಡ ಕ್ಯಾಂಪಸ್ 'ಅನಂತ' ಬೆಂಗಳೂರಿನಲ್ಲಿ ಕಾರ್ಯಾರಂಭ

ಇದನ್ನೂ ಓದಿ: ಮಸ್ಕ್​ ಸಂಸ್ಥೆಯಲ್ಲಿ ಕೆಲಸ ಮಾಡಲು ಅದ್ಭುತ ಅವಕಾಶ; ಮುಂಬೈನಲ್ಲಿ ನೇಮಕಾತಿ ಆರಂಭಿಸಿದ ಟೆಸ್ಲಾ

Last Updated : Feb 19, 2025, 5:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.