ಬಾಲಿವುಡ್ನ ವಿಚ್ಛೇದಿತ ದಂಪತಿ ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್ ಅವರ ಪುತ್ರ ಅರ್ಹಾನ್ ಖಾನ್ ನಿನ್ನೆ ಜನ್ಮದಿನ ಆಚರಿಸಿಕೊಂಡಿದ್ದಾರೆ. ಈ ಸೆಲೆಬ್ರೇಶನ್ಗೆ ಕುಟುಂಬಸ್ಥರು ಒಟ್ಟುಗೂಡಿದ್ದಾರೆ. ಮುಂಬೈನಲ್ಲಿ ಶುಕ್ರವಾರ ರಾತ್ರಿ ಜರುಗಿದ ಈ ಪಾರ್ಟಿಗೆ ಎರಡನೇ ಪತ್ನಿ ಶುರಾ ಖಾನ್ ಅವರೊಂದಿಗೆ ಅರ್ಬಾಜ್ ಖಾನ್ (ಮಲೈಕಾ ಅರೋರಾ ಮಾಜಿ ಪತಿ, ಸಲ್ಮಾನ್ ಖಾನ್ ಸಹೋದರ) ಆಗಮಿಸಿದರು.
ಮುಂಬೈನಲ್ಲಿ ನಿನ್ನೆ ರಾತ್ರಿ ಫ್ಯಾಮಿಲಿ ಗ್ಯಾದರಿಂಗ್ ನಡೆಯಿತು. ತಮ್ಮ ಮಗ ಅರ್ಹಾನ್ ಖಾನ್ ಅವರ ಹುಟ್ಟುಹಬ್ಬವನ್ನು ಆಚರಿಸಲು ಮಾಜಿ ದಂಪತಿ ಒಟ್ಟಿಗೆ ಸೇರಿದರು. ಅಲ್ಲದೇ ಅರ್ಬಾಜ್ ಅವರ ತಂದೆ, ಸ್ಕ್ರಿಪ್ಟ್ ರೈಟರ್ ಸಲೀಂ ಖಾನ್, ಮಲೈಕಾ ಅವರ ತಾಯಿ ಜಾಯ್ಸ್ ಪಾಲಿಕಾರ್ಪ್, ಸಹೋದರಿ ಅಮೃತಾ ಅರೋರಾ ಮತ್ತು ಅವರ ಮಗ ಅಜಾನ್ ಬಾಂದ್ರಾದ ಪಾಪ್ಯುಲರ್ ರೆಸ್ಟೋರೆಂಟ್‌ಗೆ ಬಂದು ಸೇರಿದ್ದರು.
ಅರ್ಬಾಜ್ ಮತ್ತು ಶುರಾ ನಗುಮೊಗದಿಂದ ಪಾರ್ಟಿ ಆಯೋಜನೆಗೊಂಡಿದ್ದ ಸ್ಥಳಕ್ಕೆ ಆಗಮಿಸಿದರು. ಮತ್ತೊಂದೆಡೆ, ಮಲೈಕಾ ಸೊಗಸಾದ ಬಿಳಿ ಉಡುಗೆಯಲ್ಲಿ ಬೆರಗುಗೊಳಿಸುವ ನೋಟ ಬೀರಿದರು. ಆಕೆಯ ತಾಯಿಯೊಂದಿಗೆ ಸೆರೆಹಿಡಿಯಲಾದ ಫೋಟೋ-ವಿಡಿಯೋಗಳು ಹೊರಬಿದ್ದಿವೆ. ಅರ್ಬಾಜ್ ಅವರ ಆಪ್ತ ಸ್ನೇಹಿತೆ, ನಟಿ ರವೀನಾ ಟಂಡನ್ ಈ ಬರ್ತ್ಡೇ ಪಾರ್ಟಿಗೆ ಸೇರಿಕೊಂಡರು.
ಬಾಲಿವುಡ್ನ ಫಿಟ್ನೆಸ್ ಐಕಾನ್ ಮಲೈಕಾ ಅರೋರಾ ಕಂಪ್ಲೀಟ್ ವೈಟ್ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಶುರಾ ಖಾನ್ ಕಂಪ್ಲೀಟ್ ಬ್ಲ್ಯಾಕ್ ಡ್ರೆಸ್ ಧರಿಸಿದ್ದರು. ಮತ್ತೊಂದೆಡೆ ಅರ್ಬಾಜ್ ಬ್ಲ್ಯೂ ಶರ್ಟ್ನಲ್ಲಿ ಕಾಣಿಸಿಕೊಂಡರು. ಅರ್ಹಾನ್ ಅವರ ಜನ್ಮದಿನವನ್ನು ಒಟ್ಟಿಗೆ ಆಚರಿಸಿದರೂ, ಮೂವರೂ ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡಿಲ್ಲ. ರೆಸ್ಟೋರೆಂಟ್‌ನ ಹೊರಗೆ ಪಾಪರಾಜಿಗಳು ಸೆರೆಹಿಡಿದಿರುವ ಫೋಟೋ, ವಿಡಿಯೋಗಳೀಗ ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.