ಮುಂಬೈ:ಸೂಪರ್ ಸ್ಟಾರ್ ಮಹೇಶ್ ಬಾಬು ಇತ್ತೀಚೆಗೆ ತಮ್ಮ 49ನೇ ಹುಟ್ಟುಹಬ್ಬವನ್ನು ರಾಜಸ್ಥಾನದಲ್ಲಿ ಕುಟುಂಬಸ್ಥರೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡರು. ಇನ್ನು, ನಟ ಮಹೇಶ್ ಬಾಬು ಜೈಪುರ ವಿಮಾನ ನಿಲ್ದಾಣದಲ್ಲಿ ಅವರ ಪತ್ನಿ ನಮ್ರತಾ ಶಿರೋಡ್ಕರ್ ಮತ್ತು ಮಕ್ಕಳಾದ ಸಿತಾರಾ ಮತ್ತು ಗೌತಮ್ ಘಟ್ಟಮನೇನಿ ಅವರೊಂದಿಗೆ ಕಾಣಿಸಿಕೊಂಡರು. ಈ ವೇಳೆ ಮಹೇಶ್ ಬಾಬು ಅವರ ಹೊಸ ಪೋನಿಟೈಲ್ ಲುಕ್ನಲ್ಲಿ ಗಮನ ಸೆಳೆದಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಅಭಿಮಾನಿಗಳ ಮನ ಗೆದ್ದ ಮಹೇಶ್ ಹೊಸ ಲುಕ್: ವೈರಲ್ ಆಗಿರುವ ವಿಡಿಯೋದಲ್ಲಿ ಮಹೇಶ್ ಬಾಬು ಎಸ್ಎಸ್ಎಂಬಿ 29 ಸಿನಿಮಾಗಾಗಿ ಹೊಸ ರಫ್ ಲುಕ್ ಅನ್ನು ಅಳವಡಿಸಿಕೊಂಡಿರುವುದು ಕಂಡುಬಂದಿದೆ. ಅವರು ತಮ್ಮ ಹೊಸ ಲುಕ್ಗಾಗಿ ಪೋನಿಟೈಲ್ ಮಾಡಿಕೊಂಡಿದ್ದು, ಬ್ರೌನ್ ಟಿ-ಶರ್ಟ್ ಮತ್ತು ಜೀನ್ಸ್‌ನೊಂದಿಗೆ ಬೀಜ್ ಕ್ಯಾಪ್ ಧರಿಸಿದ್ದರು. ಮತ್ತೊಂದೆಡೆ, ಪತ್ನಿ ನಮ್ರತಾ ಬಿಳಿ ಉಡುಪಿನಲ್ಲಿ ಕಂಗೊಳಿಸಿದ್ದರು. ಅವರೊಂದಿಗೆ ಮಗಳು ಸಿತಾರಾ ಜೊತೆಗಿರುವುದನ್ನು ಕಾಣಬಹುದು. ಇನ್ನು ಪುತ್ರ ಗೌತಮ್ ಕೂಡ ಜೈಪುರ ವಿಮಾನ ನಿಲ್ದಾಣದಲ್ಲಿ ಕ್ಯಾಶುಯಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು.