ಬಾಲಿವುಡ್ ಸೂಪರ್ಸ್ಟಾರ್ ಅಮೀರ್ ಖಾನ್ ಹಾಗೂ ನಿರ್ಮಾಪಕಿ ಕಿರಣ್ ರಾವ್ ಅವರು 15 ವರ್ಷಗಳ ದಾಂಪತ್ಯದ ಬಳಿಕ 2021ರಲ್ಲಿ ವಿಚ್ಛೇದನ ಪಡೆದಿದ್ದರು. ಇದೀಗ ತಮ್ಮ ವಿಚ್ಛೇದನದ ಬಗ್ಗೆ ಮಾತನಾಡಿರುವ ಕಿರಣ್, "ವಿಚ್ಛೇದನದ ಆ ನನ್ನ ನಿರ್ಧಾರ ನನಗೆ ಅಪಾರ ಸಂತೋಷವನ್ನು ನೀಡಿತ್ತು. ನಾನು ಅದನ್ನು 'ಸಂತೋಷದ ವಿಚ್ಛೇದನ' ಎಂದು ಹೇಳಲು ಬಯಸುತ್ತೇನೆ" ಎಂದಿದ್ದಾರೆ. ಬೇರೆ ಬೇರೆಯಾಗಿರುವುದರ ಹೊರತಾಗಿಯೂ, ದೂರವಾಗಿರುವ ದಂಪತಿ ತಮ್ಮ ಮಗ ಆಜಾದ್ನ ಸಹ-ಪೋಷಕರಾಗಿ, ಉತ್ತಮ ಸ್ನೇಹಿತರಾಗಿ ಮುಂದುವರಿದಿದ್ದಾರೆ.
ಮೂರು ವರ್ಷಗಳ ಹಿಂದೆ ದಂಪತಿ ಬೇರ್ಪಟ್ಟಿದ್ದರೂ, ತಮ್ಮ ಮಗನ ಪೋಷಣೆಯ ಸಲುವಾಗಿ ಇಂದಿಗೂ ಉತ್ತಮ ಸ್ನೇಹಿತರಾಗಿ ಉಳಿದಿದ್ದಾರೆ. ಇವರ ಜಂಟಿ ನಿರ್ಮಾಣ ಸಂಸ್ಥೆಯ ನಿರ್ಮಾಣ ಹಾಗೂ ಕಿರಣ್ ರಾವ್ ನಿರ್ದೇಶನದಲ್ಲಿ ಮೂಡಿಬಂದ 'Laapataa Ladies' ಸಿನಿಮಾ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದೆ.
ಕಿರಣ್ ರಾವ್ ಹಾಗೂ ರೀನಾ ದತ್ತಾ (ETV Bharat) ಇತ್ತೀಚಿನ ಸಂದರ್ಶನವೊಂದರಲ್ಲಿ ಕಿರಣ್ ರಾವ್ ಅವರು, ಅಮೀರ್ ಖಾನ್ ಅವರಿಂದ ವಿಚ್ಛೇದನ ಪಡೆದ ಬಗ್ಗೆ ಮಾತನಾಡಿದ್ದು, "ಸಂಬಂಧಗಳು ಹೇಗೆ ವಿಕಸಗೊಳ್ಳುತ್ತದೆ ಮತ್ತು ಕಾಲಾನಂತರ ಅದಕ್ಕೆ ಮರುವ್ಯಾಖ್ಯಾನದ ಅಗತ್ಯವಿರುತ್ತದೆ" ಎಂಬ ಅಂಶವನ್ನು ಒತ್ತಿಹೇಳಿದ್ದಾರೆ.
"ನನ್ನ ಸಂತೋಷ್ಕಾಗಿ ಬೇರೆಯಾಗುವ ನಿರ್ಧಾರ ಮುಖ್ಯವಾಗಿತ್ತು. ವಿಚ್ಛೇದನ ನನಗೆ ಅಪಾರ ಸಂತೋಷವನ್ನು ಕೊಟ್ಟಿದೆ. ಇದನ್ನು ಸಂತೋಷದ ವಿಚ್ಛೇದನ ಎಂದು ಹೇಳಬಹುದು" ಎಂದು ವಿವರಿಸಿದರು.
ಅಮೀರ್ ಖಾನ್ ಅವರೊಂದಿಗಿನ ಸಂಬಂಧಕ್ಕಿಂತಲೂ ಮೊದಲು ಕಿರಣ್ ಅವರು, ಸ್ವತಂತ್ರವಾಗಿದ್ದರು ಹಾಗೂ ಕೆಲವೊಮ್ಮೆ ಒಂಟಿತನವನ್ನು ಅನುಭವಿಸಿದ್ದೂ ಇದೆ. ಆದರೆ ಈಗ ವಿಚ್ಛೇದನ ಬಳಿಕ ಆ ಒಂಟಿನತ ಇರುವುದಿಲ್ಲ. ಈಗ ಮಗ ಆಜಾದ್ ಇದ್ದಾನೆ. ಎರಡೂ ಕುಟುಂಬಗಳು ಅವನ ಬೆಂಬಲಕ್ಕೆ ನಿಂತಿವೆ. ಹಾಗಾಗಿ ಕಿರಣ್ ಅವರು ತಮ್ಮ ವಿಚ್ಛೇದನವನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುವುದಾಗಿ ಹೇಳಿದ್ದಾರೆ.
ಇರಾ ಖಾನ್ ಮದುವೆಯಲ್ಲಿ ಕಿರಣ್ ರಾವ್ (ETV Bharat) ಅಮೀರ್ ಖಾನ್ ಈ ಹಿಂದೆ 1986ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಆ ಜೋಡಿಗೆ ಇರಾ ಖಾನ್ ಹಾಗೂ ಮಗ ಜುನೈದ್ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. 16 ವರ್ಷಗಳ ಸಹಜೀವನದ ಬಳಿಕ 2002ರಲ್ಲಿ ಈ ಜೋಡಿ ವಿಚ್ಛೇದನ ಪಡೆದಿದ್ದರು. 2005ರ ಡಿಸೆಂಬರ್ 28 ರಂದು ಅಮೀರ್ ಖಾನ್ ಹಾಗೂ ಕಿರಣ್ ಅವರು ಮದುವೆಯಾಗಿದ್ದರು. 2011ರಲ್ಲಿ ಈ ಜೋಡಿ ಬಾಡಿಗೆ ತಾಯ್ತನದ ಮೂಲಕ ಮಗ ಆಜಾದ್ನನ್ನು ಪಡೆದರು. 15 ವರ್ಷಗಳ ವೈವಾಹಿಕ ಜೀವನದ ಬಳಿಕ 2021ರಲ್ಲಿ ಇವರಿಬ್ಬರು ವಿಚ್ಛೇದನ ಪಡೆದರು.
ಇತ್ತೀಚೆಗೆ ಬಿಡುಗಡೆಗೊಂಡ Laapaata Ladies ಸಿನಿಮಾದ ಪ್ರಚಾರದ ಸಮಯದಲ್ಲಿ ಕಿರಣ್ ಅವರು "ನನ್ನ ಹಾಗೂ ಅಮೀರ್ ಖಾನ್ ಅವರ ನಡುವೆ ಯಾವುದೇ ಕಹಿ ಇಲ್ಲ. ನಿರಂತರ ಪ್ರೀತಿ, ಗೌರವ ಇದೆ. ವಿಚ್ಛೇದನದ ನಂತರವೂ ನಮ್ಮಿಬ್ಬರ ನಡುವಿನ ಸಂಬಂಧ ಗಟ್ಟಿಯಾಗಿದ್ದು, ಅರ್ಥಪೂರ್ಣವಾಗಿದೆ. ಇದು ಹೀಗೆಯೇ ಭವಿಷ್ಯದಲ್ಲೂ ಮುಂದುವರಿಯಲಿದೆ" ಎಂದು ಒತ್ತಿ ಹೇಳಿದ್ದರು.
ಅಮೀರ್ ಖಾನ್ ಹಾಗೂ ರೀನಾ ಅವರ ಮಗಳು ಇರಾ ಅವರ ವಿವಾಹ ಸಮಾರಂಭದಲ್ಲಿ ಕಿರಣ್ ಅವರು ಭಾಗವಹಿಸಿದ್ದು, ಅವರ ಕುಟುಂಬದ ಸದಸ್ಯರಲ್ಲೊಬ್ಬರಾಗಿ ಕಾಣಿಸಿಕೊಂಡಿದ್ದರು. ಅದಲ್ಲದೆ ಕಿರಣ್ ಹಾಗೂ ರೀನಾ ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಇದು ಪ್ರಾರಂಭವಾದಾಗ ನನಗೆ ಆಶ್ಚರ್ಯವಾಗಿತ್ತು. ರೀನಾ ಮತ್ತು ನಾನು ಎಲ್ಲಿಯಾದರೂ ಒಟ್ಟಿಗೆ ಹೋದಾಗ, ಕ್ಯಾಮರಾಗಳು ನಮ್ಮನ್ನೇ ಗುರಿ ಮಾಡುತ್ತವೆ. ಅವುಗಳಿಗೆ ಅಮೀರ್ ಬಗ್ಗೆ ಆಸಕ್ತಿಯೇ ಇರುವುದಿಲ್ಲ. ರೀನಾ ಮತ್ತು ನಾನು ಒಟ್ಟಿಗೆ ಕಿರುನಗೆ ಬೀರುತ್ತೇವೆ, ಏಕೆಂದರೆ ನಾವು ಸ್ನೇಹಿತರಾಗಿದ್ದೇವೆ. ಯಾಕದನ್ನು ಅಷ್ಟು ದೊಡ್ಡ ವಿಷಯ ಮಾಡ್ತಾರೋ ಗೊತ್ತಿಲ್ಲ"
"ಎಲ್ಲಿ ಜನರು ಆಧುನಿಕ ಕುಟುಂಬಗಳು ಮತ್ತು ಕುಟುಂಬ 2.0 ಬಗ್ಗೆ ಮಾತನಾಡುತ್ತಾರೋ, ಅಲ್ಲಿ ನಾನು ಈ ರೀತಿಯ ಆಧುನಿಕ, ಅಂತರ್ಗತ ಕುಟುಂಬಕ್ಕೆ ಪೋಸ್ಟರ್ ಗರ್ಲ್ ಆಗಿರುತ್ತೇನೆ. ದಯವಿಟ್ಟು, ತಮ್ಮ ಮಾಜಿ ಪತ್ನಿ ಮತ್ತು ಮಾಜಿ ಪತಿಯೊಂದಿಗೆ ಸ್ನೇಹಿತರಾಗಲು ಬಯಸುವ ಯಾರಿಗಾದರೂ ಸಲಹೆಗಳನ್ನು ನೀಡಲು ನಾನು ಸಂತೋಷಪಡುತ್ತೇನೆ. ಮದುವೆ ಒಂದು ಅದ್ಭುತವಾದ ಸಂಬಂಧವಾಗಿದೆ. ಜನರು ಅದರಿಂದ ಹೊರ ಬಂದು ಸ್ನೇಹಿತರು ಅಥವಾ ಕುಟುಂಬವಾಗಿಯೂ ಮುಂದುವರಿಯಬಹುದು ಎಂದು ತೋರಿಸುವ ಹೆಚ್ಚಿನ ಜನರ ಅಗತ್ಯವಿದೆ" ಎಂದು ವಿವರಿಸಿದರು.
ಇದನ್ನೂ ಓದಿ:ಯಶಸ್ವಿ 25ನೇ ದಿನಕ್ಕೆ ಕಾಲಿಟ್ಟ ಕಲ್ಕಿ 2898 AD: ಹಲವು ದಾಖಲೆಗಳು ಉಡೀಸ್ - Kalki 2898 AD Box Office Collection