ಕರ್ನಾಟಕ

karnataka

ETV Bharat / entertainment

ಒಟಿಟಿಯಲ್ಲಿ ಲಭ್ಯವಾದ ಮೂರೇ ದಿನಗಳಲ್ಲಿ ದಾಖಲೆ ಬರೆದ 'ದಿ ಕೇರಳ ಸ್ಟೋರಿ' - ಕೇರಳ ಸ್ಟೋರಿ ಒಟಿಟಿ ರೆಕಾರ್ಡ್

ಚಿತ್ರಮಂದಿರಗಳಲ್ಲಿ ಸದ್ದು ಮಾಡಿದ್ದ 'ದಿ ಕೇರಳ ಸ್ಟೋರಿ' ಒಟಿಟಿ ವೇದಿಕೆಯಲ್ಲೂ ಭರ್ಜರಿ ರೆಸ್ಪಾನ್ಸ್ ಸ್ವೀಕರಿಸುತ್ತಿದೆ.

The Kerala Story
ದಿ ಕೇರಳ ಸ್ಟೋರಿ

By ETV Bharat Karnataka Team

Published : Feb 20, 2024, 11:04 AM IST

ಬಾಲಿವುಡ್ ನಟಿ ಅದಾ ಶರ್ಮಾ ಅವರ 'ದಿ ಕೇರಳ ಸ್ಟೋರಿ' ಕಳೆದ ಮೇ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಮಿಶ್ರ ಪ್ರತಿಕ್ರಿಯೆ, ಪ್ರತಿಭಟನೆಗಳ ಹೊರತಾಗಿಯೂ ಈ ಚಿತ್ರ ಹೆಚ್ಚಿನ ಸಂಖ್ಯೆಯ ಜನರನ್ನು ಥಿಯೇಟರ್​ಗೆ ಸೆಳೆಯುವಲ್ಲಿ ಯಶ ಕಂಡಿತ್ತು. ಸುದೀಪ್ತೋ ಸೇನ್​ ನಿರ್ದೇಶನದ ಈ ಚಿತ್ರ, ಸರಿಸುಮಾರು 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು, ಬರೋಬ್ಬರಿ 300 ಕೋಟಿ ರೂ. ಕಲೆಕ್ಷನ್​ ಮಾಡಿತ್ತು ಎಂಬ ಮಾಹಿತಿ ಇದೆ.

ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹಲವು ತಿಂಗಳುಗಳ ಕಾಯುವಿಕೆಯ ನಂತರ 'ದಿ ಕೇರಳ ಸ್ಟೋರಿ' ಓಟಿಟಿ ಪ್ರವೇಶಿಸಿದೆ. ಹಲವು ತಿಂಗಳುಗಳ ನಂತರವೂ ಈ ಚಿತ್ರ ಸದ್ದು ಮಾಡುತ್ತಿದೆ. ಒಟಿಟಿಯಲ್ಲಿಯೂ ಪ್ರೇಕ್ಷಕರಲ್ಲಿ ಸಾಕಷ್ಟು ಆಸಕ್ತಿ ಹುಟ್ಟು ಹಾಕಿದೆ. ಥಿಯೇಟರ್​ನ ಯಶಸ್ವಿ ಪ್ರದರ್ಶನದಂತೆ, ಒಟಿಟಿಯಲ್ಲೂ ಭರ್ಜರಿ ರೆಸ್ಪಾನ್ಸ್ ಸ್ವೀಕರಿಸಿದೆ. ಹೌದು, 'ದಿ ಕೇರಳ ಸ್ಟೋರಿ' ಫೆಬ್ರವರಿ 16 ರಂದು ಝೀ5 ನಲ್ಲಿ ಪ್ರಸಾರ ಪ್ರಾರಂಭಿಸಿತು. ಒಟಿಟಿಯಲ್ಲಿ ಲಭ್ಯವಾದ ಮೂರೇ ದಿನಗಳಲ್ಲಿ ಹೊಸ ದಾಖಲೆ ಮಾಡುವಲ್ಲಿ ಈ ಚಿತ್ರ ಯಶ ಕಂಡಿದೆ.

ಸಿನಿ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು 'ದಿ ಕೇರಳ ಸ್ಟೋರಿ' ಕುರಿತು ಎಕ್ಸ್​ ಪೋಸ್ಟ್ ಶೇರ್ ಮಾಡಿದ್ದಾರೆ. ''ದಿ ಕೇರಳ ಸ್ಟೋರಿ - ಇನ್​ಕ್ರೆಡಿಬಲ್​​ ವೀವರ್​​ಶಿಪ್​. ಕೇರಳ ಸ್ಟೋರಿ ಒಟಿಟಿಯಲ್ಲಿಯೂ ಯಶಸ್ಸಿನ ಕಥೆಯಾಗಿದೆ. ಒಟಿಟಿ ಪ್ರವೇಶಿಸಿ ಮೊದಲ ವಾರಾಂತ್ಯಕ್ಕೆ 150 ಮಿಲಿಯನ್ + ನಿಮಿಷಗಳಷ್ಟು ವೀಕ್ಷಣೆ ಆಗಿದೆ. ಝೀ5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಹುಲಿ ಉಗುರಿನ ವಿವಾದದ ಕುರಿತು ಮಾತನಾಡಿದ್ದ ಜಗ್ಗೇಶ್​​ಗೆ ಬೆದರಿಕೆ ಆರೋಪ: ಎಫ್ಐಆರ್ ದಾಖಲು

ಸುದೀಪ್ತೋ ಸೇನ್ ನಿರ್ದೇಶನದ ಈ ಚಿತ್ರವನ್ನು ವಿಪುಲ್ ಅಮೃತ್​​ಲಾಲ್ ಶಾ ನಿರ್ಮಿಸಿದ್ದಾರೆ. 15-20 ಕೋಟಿ ರೂಪಾಯಿಯ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಸರಿಸುಮಾರು 300 ಕೋಟಿ ರೂಪಾಯಿಗೂ ಹೆಚ್ಚು ಗಳಿಸುವಲ್ಲಿ ಯಶಸ್ವಿ ಆಗಿದೆ. ಅದಾ ಶರ್ಮಾ ಅವರಲ್ಲದೇ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ, ಸೋನಿಯಾ ಬಲಾನಿ ಮತ್ತು ದೇವದರ್ಶಿನಿ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೇ.5ರಂದು ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆ ಆಗಿತ್ತು. ಮಂತಾಂತರ ಮತ್ತು ಬಲವಂತವಾಗಿ ಭಯೋತ್ಪಾದಕ ಸಂಘಟನೆಗೆ ಹಿಂದೂ ಮಹಿಳೆಯರನ್ನು ಸೇರಿಸುವ ಕಥೆಯನ್ನು 'ದಿ ಕೇರಳ ಸ್ಟೋರಿ' ಒಳಗೊಂಡಿದೆ. ನೈಜ ಘಟನೆ ಆಧಾರಿತ ಚಿತ್ರವೆಂದು ಚಿತ್ರತಂಡ ಹೇಳಿಕೊಂಡಿತ್ತು. ಮತಾಂತರ ವಿಷಯ ಇದ್ದ ಹಿನ್ನೆಲೆ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದನ್ನೂ ಓದಿ:ಶಿವರಾಜ್​ಕುಮಾರ್ ಸಿನಿಪಯಣಕ್ಕೆ 38ರ ಸಂಭ್ರಮ; ಸರ್ವರಿಗೂ ಧನ್ಯವಾದ ಅರ್ಪಿಸಿದ ಹ್ಯಾಟ್ರಿಕ್ ಹೀರೋ

ABOUT THE AUTHOR

...view details