ಕರ್ನಾಟಕ

karnataka

ETV Bharat / entertainment

'ಕೌನ್ ಬನೇಗಾ ಕರೋಡ್ಪತಿ' ಆರಂಭಿಸಿದ ಬಿಗ್​ ಬಿ: 16ನೇ ಸೀಸನ್‌ಗೂ ಅಮಿತಾಭ್​​ ಬಚ್ಚನ್ ಹೋಸ್ಟ್​​ - KBC 16 - KBC 16

ಜನಪ್ರಿಯ ಕ್ವಿಝ್​ ಶೋ 'ಕೌನ್ ಬನೇಗಾ ಕರೋಡ್ಪತಿ'ಯ ಹೊಸ ಸೀಸನ್‌ ಪ್ರಾರಂಭವಾಗಿದೆ. ಬಾಲಿವುಡ್ ಸೂಪರ್‌ ಸ್ಟಾರ್ ಅಮಿತಾಭ್​​ ಬಚ್ಚನ್​​ ತಮ್ಮ ಭಾವನಾತ್ಮಕ ಮಾತುಗಳೊಂದಿಗೆ ಕೆಬಿಸಿ 16ನ್ನು ಶುರು ಮಾಡಿದ್ದಾರೆ. 16ನೇ ಸೀಸನ್ ಸೋಮವಾರ ರಾತ್ರಿ 9 ಗಂಟೆಗೆ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಪ್ರಸಾರವಾಗಿದೆ.

Amitabh Bachchan
ಅಮಿತಾಭ್​​ ಬಚ್ಚನ್ (IANS)

By ETV Bharat Entertainment Team

Published : Aug 13, 2024, 5:54 PM IST

ಹೈದರಾಬಾದ್: 'ಕೌನ್ ಬನೇಗಾ ಕರೋಡ್ಪತಿ' ಭಾರತೀಯ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಕಳೆದ ವರ್ಷ ಕಾರ್ಯಕ್ರಮದ ನಿರೂಪಕ, ಬಾಲಿವುಡ್ ಐಕಾನ್ ಅಮಿತಾಭ್​​​ ಬಚ್ಚನ್ ಅವರು ಈ ರಸಪ್ರಶ್ನೆ ಕಾರ್ಯಕ್ರಮಕ್ಕೆ ಭಾವನಾತ್ಮಕ ವಿದಾಯ ಹೇಳಿದ್ದರು. ಆದಾಗ್ಯೂ, ಅಪಾರ ಬೇಡಿಕೆಗೆ ಅನುಗುಣವಾಗಿ ಭಾರತೀಯ ಚಿತ್ರರಂಗದ ಬಹುಬೇಡಿಕೆ ತಾರೆ ಕಾರ್ಯಕ್ರಮದ ಹೊಸ ಸೀಸನ್ ಹೋಸ್ಟ್ ಮಾಡಲು ಮರಳಿದ್ದಾರೆ. 16ನೇ ಸೀಸನ್ ಸೋಮವಾರ ರಾತ್ರಿ 9 ಗಂಟೆಗೆ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಹಿರಿಯ ನಟನ ಭಾವುಕ ಭಾಷಣದೊಂದಿಗೆ ಆರಂಭವಾಯಿತು. ಈವರೆಗೆ ಸ್ವೀಕರಿಸಿದ ಅಭಿಮಾನಿಗಳ ಅಚಲ ಬೆಂಬಲಕ್ಕೆ ಅವರು ಧನ್ಯವಾದ ಅರ್ಪಿಸಿದರು.

ಅಮಿತಾಭ್ ಬಚ್ಚನ್​​ ಕೆಬಿಸಿ ಸೆಟ್‌ಗೆ ಎಂಟ್ರಿಯಾಗುತ್ತಿದ್ದಂತೆ ಅಲ್ಲಿದ್ದ ಪ್ರೇಕ್ಷಕರು ನಿರೂಪಕರಿಗೆ ಭರ್ಜರಿ ಚಪ್ಪಾಳೆ ತಟ್ಟಿದರು. ಸಿನಿಮಾ ಇಂಡಸ್ಟ್ರಿಯ ಐಕಾನ್​​ನನ್ನು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ನಟ ತಮ್ಮ ಆಸನದಲ್ಲಿ ಕುಳಿತು ಕ್ಯಾಮರಾ ನೋಡುತ್ತಾ ಹಿಂದಿಯಲ್ಲಿ ಮಾತು ಪ್ರಾರಂಭಿಸಿದರು. "ಇಂದು ಹೊಸ ಸೀಸನ್​​ ಆರಂಭ. ಆದ್ರೆ ಇಂದು ಮಾತನಾಡಲು ಪದಗಳು ಸಿಗುತ್ತಿಲ್ಲ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಧನ್ಯವಾದಗಳನ್ನು ಅರ್ಪಿಸಲು ಪದಗಳಿಲ್ಲ" ಎಂದು ತಿಳಿಸಿದರು.

"ಕೌನ್ ಬನೇಗಾ ಕರೋಡ್ಪತಿ ಪುನರಾರಂಭವಾಗಿದ್ದು, ಈ ವೇದಿಕೆಯನ್ನು ಮತ್ತೊಮ್ಮೆ ಬೆಳಗಿಸಿದ, ಕುಟುಂಬವನ್ನು ಮತ್ತೆ ಒಂದುಗೂಡಿಸಿದ, ನಿಮ್ಮ ನಡುವೆ ಇರಲು ನನಗೆ ಅವಕಾಶ ಮಾಡಿಕೊಟ್ಟ ನಿಮ್ಮ ಆ ಪ್ರಾರ್ಥನೆಗಳಿಗೆ ನನ್ನ ಕೃತಜ್ಞತೆ ವ್ಯಕ್ತಪಡಿಸಲು ನನಗೆ ಪದಗಳ ಕೊರತೆಯಾಗಿದೆ. ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ಪುನರುತ್ಥಾನ, ಪುನರ್​ ನಿರ್ಮಾಣ ಮತ್ತು ಪುನರ್ಜನ್ಮಕ್ಕಾಗಿ ನಾನು ಈ ದೇಶದ ಜನರಿಗೆ ವಂದಿಸುತ್ತೇನೆ'' ಎಂದು ಕ್ಯಾಮರಾ ಕಡೆಗೆ ತಿರುಗಿ ಕೈ ಜೋಡಿಸಿದರು.

ಇದನ್ನೂ ಓದಿ:'ಸೋತ ಹಾಡುಗಳು ನನ್ನನ್ನು ಕಾಡುತ್ತವೆ': ಗೀತೆ ರಚನೆಕಾರ ಕೆ.ಕಲ್ಯಾಣ್ - K Kalyan Interview

''ಈ ಸ್ಟೇಜ್​​, ಈ ಆಟ ಮತ್ತು ಈ ಸೀಸನ್ ಎಲ್ಲವೂ ನಿಮ್ಮದೇ. ನಿಮ್ಮ ಪ್ರೀತಿಗೆ ನನ್ನ ಮೆಚ್ಚುಗೆ ತೋರಿಸಲು, ನಾನು ಈ ಸೀಸನ್​ನಲ್ಲಿ ಹೆಚ್ಚಿನ ಶ್ರಮ ಹಾಕುತ್ತೇನೆ. ನೀವು ನನ್ನ ಕೈ ಹಿಡಿಯುತ್ತೀರಿ, ಬೆಂಬಲ ಮತ್ತು ಭರವಸೆ ನೀಡುವುದನ್ನು ಮುಂದುವರಿಸುತ್ತೀರೆಂದು ನಾನು ನಂಬಿದ್ದೇನೆ" ಎಂದು ಅಮಿತಾಭ್​​ ತಿಳಿಸಿದರು. ಅಲ್ಲಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು, ಮುಗುಳ್ನಕ್ಕರು, ಜೊತೆಗೆ ಭಾವುಕರಾಗಿ ಕಣ್ಣೀರು ಹಾಕಿದರು.

ಇದನ್ನೂ ಓದಿ:ನಟಿ ಶ್ರೀದೇವಿ ಜನ್ಮದಿನ: ಗೆಳೆಯನೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜಾಹ್ನವಿ ಕಪೂರ್ - Janhvi Visits Tirupati

ಮತ್ತೊಂದು ವಿಡಿಯೋದಲ್ಲಿ, ಅಮಿತಾಭ್ ತಮ್ಮ ಹಿಂದೆ ಕುಳಿತಿದ್ದ ಪ್ರೇಕ್ಷಕರೊಂದಿಗೆ ತಮಾಷೆ ಮಾಡಿದ್ದಾರೆ. ತಮ್ಮ ಚೇರ್ ಹಿಂದೆ ಕುಳಿತಿರುವವರನ್ನು ನೋಡುವುದಿಲ್ಲ ಎಂಬ ದೂರು ಇದೆ ಎಂದು ಹೇಳುತ್ತಿದ್ದಂತೆ ಸಭಿಕರೊಬ್ಬರಿಂದ ಬಂದ ಪ್ರತಿಕ್ರಿಯೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. 2000ರಲ್ಲಿ ಅಮಿತಾಭ್ 'ಕೌನ್ ಬನೇಗಾ ಕರೋಡ್ಪತಿ'ಯ ಮೊದಲ ಸೀಸನ್​​ನಿಂದಲೂ ಹೋಸ್ಟ್ ಮಾಡುತ್ತಾ ಬಂದಿದ್ದಾರೆ. 2007ರಲ್ಲಿ ಶಾರುಖ್ ಖಾನ್ ಹೋಸ್ಟ್ ಮಾಡಿದ್ದ ಮೂರನೇ ಸೀಸನ್ ಅನ್ನು ಹೊರತುಪಡಿಸಿ ಉಳಿದೆಲ್ಲಾ ಸೀಸನ್​ಗಳನ್ನು ಬಿಗ್​ ಬಿ ಅವರೇ ಹೋಸ್ಟ್ ಮಾಡಿದ್ದಾರೆ.

ABOUT THE AUTHOR

...view details